ಕುಂದಾಪುರ (ಜ,03) : ಆಡಳಿತ ಭಾಷೆಯಾಗಿ ಮಾನ್ಯತೆ ಪಡೆದ ಹಿಂದಿ ಭಾಷೆ ದೇಶದಲ್ಲಷ್ಟೇ ಅಲ್ಲದೇ, ವಿದೇಶಗಳಲ್ಲಿಯೂ ವ್ಯವಹಾರದ ಸಂದರ್ಭದಲ್ಲಿ ಅತಿಮುಖ್ಯ ಭಾಷೆಯಾಗಿ ಬಳಸಲ್ಪಡುತ್ತದೆ. ಹಿಂದಿ ಭಾಷೆಯನ್ನು ಕಲಿಯುವ ಮೂಲಕ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಿ ಎಂದು ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಜಯಶೀಲ ಪೈ ಹೇಳಿದರು. ಇವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಸಂಘ ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭ ಕಾಲೇಜಿನ […]
Tag: bbhc
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: ನಿರ್ಮಲ ನಗರ ಅಭಿಯಾನ
ಕುಂದಾಪುರ:(ಜ,02): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ‘ನಿರ್ಮಲ ನಗರ ಅಭಿಯಾನ’ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉಪ್ಪುಂದದ ಶಾಲೆಬಾಗಿಲಿನಿಂದ ಬಿಜೂರಿನ ಗ್ರಾಮ ಪಂಚಾಯತ್ ವರೆಗೆ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ನಗರವನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವ ಕುರಿತು ಘೋಷವಾಕ್ಯಗಳನ್ನು ಹೇಳುವುದರ ಜೊತೆಗೆ ಎನ್.ಎಸ್.ಎಸ್. ಸ್ವಯಂ ಸೇವಕರು ಸ್ವಚ್ಛತೆಯಲ್ಲಿ ತೊಡಗಿದರು. ಲಯನ್ಸ್ ಕ್ಲಬ್ ನಾವುಂದದ ಕಾರ್ಯದರ್ಶಿ […]
ಡಾ|ಬಿ. ಬಿ. ಹೆಗ್ಡೆ ಕಾಲೇಜು: ರೋವರ್ಸ ಮತ್ತು ರೇಂಜರ್ಸ್ ವಾರ್ಷಿಕ ಚಟುವಟಿಕೆ ಉದ್ಘಾಟನೆ
ಕುಂದಾಪುರ(ಡಿ,23): ರೋವರ್ಸ ಮತ್ತು ರೇಂಜರ್ಸ್ ಎನ್ನುವುದು ಹೊರಾಂಗಣ ಕೌಶಲ್ಯ ಆಧಾರಿತ ಮತ್ತು ಸಾಹಸ ಚಟುವಟಿಕೆಗಳ ಆಧಾರಿತ ಘಟಕವಾಗಿದ್ದು, ಕಾನೂನು ಪಾಲಿಸುವ ನಾಗರೀಕರಾಗಲು, ಪ್ರಕೃತಿಯ ರಕ್ಷಣೆ, ಮಾನವೀಯತೆಯ ಸೇವೆ ಮೈಗೂಡಿಸಿಕೊಳ್ಳಲು ರೋವರ್ಸ ಮತ್ತು ರೇಂಜರ್ಸ್ ಘಟಕದಿಂದ ಸಾದ್ಯವಿದೆ ಎಂದು ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಶ್ರೀಮತಿ ಜ್ಯೋತಿ ಆಚಾರ್ಯ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರೋವರ್ಸ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಮಾಹಿತಿ ಕಾರ್ಯಾಗಾರ
ಕುಂದಾಪುರ ( ಡಿ,23) : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ಅಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಯಶಸ್ಸಿನ ತಂತ್ರಗಳ ಕುರಿತು ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಶ್ರಯದಲ್ಲಿ ನಡೆಯುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಯಶಸ್ವಿಯಾಗಿ ತೇರ್ಗಡೆಗೊಳ್ಳಲು ಬೇಕಾದ ತಂತ್ರಗಳ ಕುರಿತು ಸಂಪನ್ಮೂಲ ವ್ಯಕ್ತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇದರ ರಾಜ್ಯಶಾಸ್ತ್ರ ಉಪನ್ಯಾಸಕ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಬೃಹತ್ ರಕ್ತದಾನ ಶಿಬಿರ
ಕುಂದಾಪುರ (ಡಿ,23): ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಎನ್.ಎಸ್. ಎಸ್., ಎನ್. ಸಿ. ಸಿ. ಘಟಕ ಹಾಗೂ ಇಂಡಿಯನ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ, ಹೆಚ್. ಡಿ. ಎಫ್. ಸಿ. ಬ್ಯಾಂಕ್ ಕುಂದಾಪುರ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್ ರಕ್ತದಾನ ಶಿಬಿರ ಡಿಸೆಂಬರ್ 17 ರಂದು […]
ಸುಧಾಕರ್ ಪಾರಂಪಳ್ಳಿಯವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಕುಂದಾಪುರ(ಡಿ,18): ಇಲ್ಲಿನ ಡಾ|ಬಿ.ಬಿ.ಹೆಗ್ಡೆ ಕಾಲೇಜಿನ ಉಪನ್ಯಾಸಕರಾದ ಶ್ರೀ ಸುಧಾಕರ್ ಪಾರಂಪಳ್ಳಿಯವರಿಗೆ ಗ್ಲೋಬಲ್ ಮ್ಯಾನೆಜ್ಮೆಂಟ್ ಕೌನ್ಸಿಲ್ ಅಹಮದಾಬಾದ್ ಸಂಸ್ಥೆ ರಾಷ್ಟ್ರ ಮಟ್ಟದ ಆದರ್ಶ ವಿದ್ಯಾ ಸರಸ್ವತಿ ರಾಷ್ಟ್ರೀಯ ಪುರಸ್ಕಾರ- ನ್ಯಾಷನಲ್ ಎಕ್ಸ್ ಲೆನ್ಸ್ ಅವಾರ್ಡ್-2022 ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳೂರು ವಿ.ವಿ.ಅರ್ಥಶಾಸ್ತ್ರ ಸಂಘದ ಕಾರ್ಯದರ್ಶಿಯಾಗಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸಹ ಇವರು ಸೇವೆ ಸಲ್ಲಿಸಿದ್ದಾರೆ.
ಕುಂದಾಪುರದ ಕುವರಿ ದಿವ್ಯಾ ಶೆಟ್ಟಿಯಿಂದ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಾಧನೆ
ಕುಂದಾಪುರ (ಡಿ,18); ಕುಂದಾಪುರದ ಕುವರಿ ಯೋಗ ಪಟು ದಿವ್ಯಾ ಶೆಟ್ಟಿ ಸತತ 20 ನಿಮಿಷಗಳ ಕಾಲ ಪದ್ಮಾ ಶಿರ್ಶಾಸನವನ್ನು ಯಶಸ್ವಿಯಾಗಿ ಪ್ರದರ್ಶನ ನೀಡಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಾಧನೆಗೈದಿದ್ದಾರೆ. ನವೆಂಬರ್ 30 ರಂದು ಬೆಂಗಳೂರಿನಲ್ಲಿ ನಡೆದ GWR-GLOBAL WORLD RECORD ಯೋಗ ಪ್ರದರ್ಶನದಲ್ಲಿ ಭಾಗಿಯಾಗಿ ಈ ಸಾಧನೆಗೈದಿದ್ದಾರೆ. ಇವರು ಕುಂದಾಪುರದ ಡಾIಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಯಾಗಿದ್ದಾರೆ.
ಕುಂದಗನ್ನಡ ಅಧ್ಯಯನ ಆಸಕ್ತಿ ಬೆಳೆಸಿಕೊಳ್ಳಿ- ಡಾ. ಕಿಶೋರ್ ಕುಮಾರ್ ಶೆಟ್ಟಿ
ಕುಂದಾಪುರ (ಡಿ.15): ಕುಂದಗನ್ನಡ ಭಾಷೆ ಹಾಗೂ ಸಂಸ್ಕೃತಿ ಬಹಳ ವೈಶಿಷ್ಟ್ಯ ಪೂರ್ಣವಾಗಿದ್ದು, ತನ್ನದೇ ಆದ ಸ್ವಂತಿಕೆ ಮತ್ತು ಅಸ್ಮಿತೆಯನ್ನು ಹೊಂದಿರುವ ಕುಂದಾಪುರದ ಪ್ರಾದೇಶಿಕ ಭಾಷೆ ,ಸಂಸ್ಕೃತಿ ಸಂಪ್ರದಾಯ, ಆಚಾರ ,ವಿಚಾರಗಳು ಈ ಮಣ್ಣಿನಲ್ಲಿ ಅಡಗಿದ್ದು ಅದನ್ನು ಸಂಶೋಧನೆ ಮುಖಾಂತರ ಹೊರತೆಗೆಯುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕೆಂದು ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಕನ್ನಡ ಶಿಕ್ಷಕರು ಹಾಗೂ ಸಂಶೋಧಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿ ಹೇಳಿದರು. ಅವರು ಡಾ| ಬಿ.ಬಿ ಹೆಗ್ಡೆ ಪ್ರಥಮ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು: ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಕುಂದಾಪುರ (ಡಿ,12): ಜಾತಿ, ಧರ್ಮ, ಲಿಂಗ ಹಾಗೂ ಬಣ್ಣದ ನೆಲೆಯಲ್ಲಿ ನಮ್ಮ ನಡುವೆ ಅಸಮಾನತೆ ಬರಬಾರದು. ವಿದ್ಯಾರ್ಥಿಗಳು ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಹಕ್ಕುಗಳ ಕುರಿತು ಚಿಂತಿಸಬೇಕು. ಹಕ್ಕುಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಸಂವಿಧಾನದ ತತ್ವಗಳನ್ನು ಅನುಸರಿಸುವ ಮೂಲಕ ಉತ್ತಮ ಪ್ರಜೆಗಳಾಗೊಣ ಎಂದು ಕುಂದಾಪುರದ ಹಿರಿಯ ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ವಿಶ್ವಮಾನವ ಹಕ್ಕುಗಳ […]
ಡಾ| ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ನೊವೇಶನ್ ಮ್ಯಾನೆಜ್ಮೆಂಟ್ ಫೆಸ್ಟ್- ಅಂತರ್ ಕಾಲೇಜು ಸ್ಪರ್ಧೆ
ಕುಂದಾಪುರ(ಡಿ.11): ಇಲ್ಲಿನ ಡಾ| ಬಿ.ಬಿ.ಹೆಗ್ಡೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ನೊವೇಷನ್ ಮ್ಯಾನೆಜ್ಮೆಂಟ್ ಫೆಸ್ಟ್- ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಅಂತರ್ ಕಾಲೇಜು ಸ್ಪರ್ಧೆಯನ್ನು ಡಿಸೆಂಬರ್.13 ರಂದು ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ವ್ಯಾಪ್ತಿಯ ಸರ್ಕಾರಿ,ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜಿನ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ .ಉಮೇಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










