ಬಾವುಟದ ಪಾಠ ತ್ರಿವರ್ಣ ಧ್ವಜದ ಮಹಿಮೆನಮ್ಮೆಲ್ಲರ ಗರಿಮೆಉತ್ತುಂಗಕ್ಕೆ ಹಾರುತಿರುವ ನಮ್ಮ ಬಾವುಟಸಾರುತಿಹುದು ಜೀವನದ ಪಾಠ. ಬಾವುಟದ ಮೊದಲ ಬಣ್ಣ ಕೇಸರಿತ್ಯಾಗ-ಶೌರ್ಯದ ಪ್ರತೀಕವೇ ಸರಿವಿಶ್ವಕ್ಕೆ ಹೇಳುತಿಹುದು ಸಾರಿ ಸಾರಿಭಾರತೀಯರ ಬಲ, ಬೆಂಬಲ ಹಂಬಲದ ಐಸಿರಿ. ಮಧ್ಯಮ ಬಣ್ಣ ಶ್ವೇತಸತ್ಯ – ಶಾಂತಿಯ ಇದು ಸಂಕೇತಭಾರತ ಎಂದಿಗೂ ವಿಶ್ವ ಶಾಂತಿಯ ಧೂತಸತ್ಯ ಪ್ರತಿಷ್ಠಾಪನೆಗೆ ಆಗುವುದು ಅವಧೂತ. ಬಿಳಿಯ ಮಧ್ಯ ಅಶೋಕ ಚಕ್ರ ನೀಲಿಏನು ಹೇಳುತ್ತಿದೆ ನೀವು ಕೇಳಿ?24 ತಾಸು ನಡೆಮುಂದೆ ಧರ್ಮದ ಹಾದಿಯಲಿಪ್ರಗತಿ […]
Tag: Dr. Umme salma
ಓ ಗುಣವಂತನೆ
ಓ ಗುಣವಂತನೆನೀ ಗುಣಗಳ ಖಜಾನೆನೀ ಗುಣಕಾರಿ, ನೀನೇ ಗುಣಾಧಿಕಾರಿನೀ ಸುಗುಣಾಚಾರಿ, ನೀನೇ ಗುಣಗಳ ರೂವಾರಿನೀ ಗುಣವರ್ಧಕ, ನೀನೇ ಗುಣಾತ್ಮಕನೀ ಗುಣವಿಶೇಷ, ನೀನೇ ಗುಣವಾಚಕಗುರಿ ತೋರಿಸುವ ಗುರುವೇನಾ ಹೇಗೇ ಮಾಡಲಿ ನಿನ್ನ ಗುಣಗಾನಓ ಗುಣಮಟ್ಟದ ಉತ್ತುಂಗವೆನಿನಗೆ ಕೋಟಿ ಕೋಟಿ ನಮನ. ಡಾ. ಉಮ್ಮೆ ಸಲ್ಮಾ ಎಂ., ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ಭಾರತಾಂಬೆ
ಹೇ ಭಾರತಾಂಬೆ, ನಾ ನಿನ್ನ ಮಡಿಲಲ್ಲಿ ನಲಿದಾಡುವ ಕಂದನೂರು ಜನ್ಮ ತಾಳಿದರು ತಿರಿಸಲಾರೆ ನಾ ನಿನ್ನ ಋಣಾನುಬಂಧ. ನಿನ್ನ ಮಡಿಲೇ ಗಂಧದ ಗುಡಿ ನನಗೆಹಚ್ಚ ಹಸಿರಿನ ಗಿರಿವನಗಳೆ ನೀನಿತ್ತ ಉಸಿರು ನನಗೆ ನೀ ಸಿರಿ ದೇವತೆ, ನೀ ಜ್ಞಾನಮಯಿನೀ ಶಕ್ತಿ ದೇವತೆ, ನೀ ಕರುಣಾಮಯಿ ನೀ ನಮ್ಮ ಬಾಳ ಜ್ಯೋತಿನಿನ್ನಿಂದಲೇ ಜೇವನದ ಕಾಂತಿಸದಾ ನಮಿಪೆ ನಿನ್ನ ಚರ್ಣಗಳಿಗೆ ಹೇ ಭಾರತಾಂಬೆ.ಜೈ ಭಾರತಾಂಬೆ, ಜೈ ಭಾರತಾಂಬೆ. ಕವಿಯತ್ರಿ: ಡಾ. ಉಮ್ಮೆ ಸಲ್ಮಾ […]
“ನನ್ನ ತಂದೆ”
ಕಣ್ಣು ತೆರೆದಾಗ ನಾ ಕಂಡ ಶಿವ ನೀನುಮನೆಯಂಬ ಗುಡಿಯಲಿ ನೆಲಸಿರುವ ದೇವರು ನೀನುನಿನ್ನ ನಡೆಯೇ ವಿದ್ಯಾದಾಯಿನಿನಿನ್ನ ನುಡಿಯೇ ದಿವ್ಯವಾಣಿನೀನೇ ನನ್ನ ಬಾಳ ಅನುಗ್ರಹನೀನೇ ನನ್ನ ಸರ್ವಸ್ವ ….ನನ್ನ ತಂದೆ. ನೀನು ಕಣ್ತುಂಬ ನಿದ್ದೆ ಮಾಡಿದ್ದು ನೋಡಿಲ್ಲ ನಾನುನಮ್ಮ ಬದುಕು ರೂಪಿಸು ಹಗಲಿರುಳು ದುಡಿದವ ನೀನುನಿನ್ನ ಮನದಲ್ಲಿ ತುಂಬಿತ್ತು ನಮ್ಮ ಉಜ್ವಲ ಭವಿಷ್ಯದ ಚಿಂತೆನೀನೇ ನನ್ನ ಸರ್ವಸ್ವ ….ನನ್ನ ತಂದೆ. ನಿನ್ನ ನಗುವೆ ನನಗೆ ಕೋಟಿ ಧನನೀನಿರುವ ತಾಣವೇ ನನಗೆ ದೇವಸ್ಥಾನನಿನ್ನ […]
“ಸೋಲದಿರು ಎಂದೆಂದೂ”
“ಸೋಲದಿರು ಎಂದೆಂದೂ” ಓ ಮನಸೇ, ನೀ ವಿಶ್ವಬಂಧುಸಾಧನೆಯ ಪಣವ ಸ್ವೀಕರಿಸು ಇಂದು.ಬಾನೇ ಬೀಳಲಿ, ಭುವಿಯೇ ಸೀಳಲಿಸೋಲನ್ನು ಕಂಡು ಕುಸಿಯದಿರು ಎಂದು.ಧೈರ್ಯವ ಬಿತ್ತಿ, ಸಹನೆಯ ಹೊತ್ತಿಸಾಗುತಿರು ಮುಂದೆಂದು, ಸಾಗುತಿರು ಮುಂದೆಂದು.ನೋವಿದ್ದರೆ ಇಂದು, ನಲಿವಿರುವುದು ಮುಂದುನುಗ್ಗುತಿರು ನುಗ್ಗುತಿರು, ಸೋಲದಿರು ಎಂದೆಂದೂ. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ಹೆಣ್ಣು
ಹೆಣ್ಣು ಸಂಸಾರದ ಕಣ್ಣು ಹೆಣ್ಣುಸಂಸ್ಕಾರದ ಹೊನ್ನು ಹೆಣ್ಣುಮಣ್ಣಿಗೆ ಉಪಮಾನ ಹೆಣ್ಣುಮನೆಗೆ ಸಮಾಧಾನ ಹೆಣ್ಣುಶಕ್ತಿಗೆ ಉಪಮೆಯ ಹೆಣ್ಣುಭಕ್ತಿಗೆ ಪ್ರಮೇಯ ಹೆಣ್ಣುಪುಷ್ಟಿಯ ಪ್ರಮಾಣ ಹೆಣ್ಣುಸೃಷ್ಟಿಯ ನಿರ್ಮಾಣ ಹೆಣ್ಣುಮುಕ್ತಿಯ ನಿರ್ವಾಣ ಹೆಣ್ಣುಯುಕ್ತಿಯ ವ್ಯವಧಾನ ಹೆಣ್ಣುಹೆಣ್ಣು, ಸ್ವಾಭಿಮಾನ ಹೆಣ್ಣುಹೆಣ್ಣು, ಅಭಿಮಾನ ಹೆಣ್ಣು. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯