ಮಧುವನ (ಏ, 7): ಇಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಧು ಟಿ. ಭಾಸ್ಕರನ್ ರವರು ಕಾರ್ಯಕ್ರಮವನ್ನುಉದ್ಘಾಟಿಸುವುದರ ಜೊತೆಗೆ ಅಧ್ಯಕ್ಷೀಯ ನೆಲೆಯ ಮಾತುಗಳನ್ನಾಡಿದರು. ಇಂದಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಒಬ್ಬರ ಸಮಸ್ಯೆಯಾಗಿರದೆ ವಿಶ್ವದ ಸಮಸ್ಯೆಯಾಗಿದೆ ಆದ್ದರಿಂದ ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದ ಸಂಯೋಜಕರು ಪ್ರಾಂಶುಪಾಲರಾದ ಪ್ರೊ. ನಟರಾಜ್ ಕೆ, ಮಾತನಾಡಿ ಆರೋಗ್ಯದ […]
Tag: ecr
ಇ. ಸಿ. ಆರ್. ಕಾಲೇಜು : ಕರೋನ ಜಾಗೃತಿ ಜಾಥಾ
ಮಧುವನ (ಮಾ, 25 ): ಕರೋನ ಎರಡನೆ ಅಲೆ ನಿಯಂತ್ರಿಸುವಲ್ಲಿ ನಾಗರಿಕರ ಪಾತ್ರ ಹಾಗೂ ಕರ್ತವ್ಯದ ಕುರಿತು ಅರಿವು ಮೂಡಿಸಲು ಇಲ್ಲಿನ ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಎನ್.ಎಸ್.ಎಸ್. ಮತ್ತು ರೆಡ್ ಕ್ರಾಸ್ ಘಟಕದ ವತಿಯಿಂದ ಮಾರ್ಚ್ 24 ರಂದು “ಕರೋನ ಜನ ಜಾಗೃತಿ ಜಾಥಾ”ವನ್ನು ಕಾಲೇಜಿನ ಸಮೀಪದ ಸೈಬ್ರಕಟ್ಟೆಯ ಸುತ್ತಲಿನ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆಕಾಶ ಸಾವಳಸಂಗ್, ಏವಿಯೇಷನ್ ವಿಭಾಗದ ಮುಖ್ಯಸ್ಥರಾದ […]
ಇ ಸಿ ಆರ್ ಕಾಲೇಜು : ಪ್ರತಿದಿನವೂ ಮಹಿಳಾ ದಿನ
ಮಧುವನ (ಮಾ.14) : ವರ್ಷದಲ್ಲಿ ಒಂದು ದಿನ ಸಾಂಕೇತಿಕವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸದೇ ಪ್ರತಿ ದಿನವೂ ಮಹಿಳೆಯರ ದಿನ ಆಚರಿಸುವಂತಾಗ ಬೇಕು.ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಗಳಾಗಿ, ಹೆಂಡತಿಯಾಗಿ ಹೀಗೆ ಮುಂತಾದ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರಿಗೆ ಅದಕ್ಕೆ ಪೂರಕವಾದ ಸಮಾಜದ ನಿರ್ಮಾಣವಾಗಬೇಕು ಎಂದು ಸೌಖ್ಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಪ್ರೊ, ಲಿಸಾ ಲಿಯೋ ಹೇಳಿದರು. ಅವರು ಇ ಸಿ ಆರ್ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಘಟಕ ಯೋಜಿಸಿದ್ದ “ವಿಶ್ವ ಮಹಿಳಾ […]
ಇ. ಸಿ. ಆರ್ ಕಾಲೇಜು : ಉಪನ್ಯಾಸಕರ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ
ಇ .ಸಿ .ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಲ್ಲಿ ಉಪನ್ಯಾಸಕರ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಸ್ಪೂರ್ತಿ – ಶ್ರೀಮತಿ ಮಹಿಮಾ ಮಧು
ಮಧುವನ (ಮಾ.4) : ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳ ಬೇಕು. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ವ್ಯಕ್ತಿತ್ವ ವಿಕಸನ ಗೊಳಿಸಿಕೊಳ್ಳ ಬೇಕು ಎಂದು ಇ. ಸಿ .ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನದ ನಿರ್ದೇಶಕರಾದ ಶ್ರೀಮತಿ ಮಹಿಮಾ ಮಧು ಹೇಳಿದರು. ಅವರು ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನದಲ್ಲಿ ಪಠ್ಯೇತರ ಚಟುವಟಿಕೆಗಳ ಕುರಿತಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲರಾದ ಶ್ರೀ […]
ಇ .ಸಿ .ಆರ್. ಕಾಲೇಜು ರೆಡ್ ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ
ಮಧುವನ(ಫೆ.24) ಇ .ಸಿ .ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ 2020-21 ಶೈಕ್ಷಣಿಕ ಸಾಲಿನ ರೆಡ್ಕ್ರಾಸ್ ಘಟಕದ ಕಾರ್ಯ ಚಟುವಟಿಕೆ ಫೆಬ್ರವರಿ 23 ರಂದು ಉದ್ಘಾಟನೆಗೊಂಡಿತು. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿವಿಧ ವಿಭಾಗಗಳಿಗೆ ಹಸ್ತಾಂತರಿಸುವ ಮೂಲಕ ಕಾರ್ಯ ಚಟುವಟಿಕೆ ಗಳನ್ನು ಪ್ರಾರಂಭಿಸಲಾಯಿತು. ಘಟಕದ ಯೋಜನಾಧಿಕಾರಿಗಳಾದ ಕುಮಾರಿ ಶ್ರೀನಿಧಿ ಹೆಗ್ಡೆ ಹಾಗೂ ಶ್ರೀಮತಿ ಕುಸುಮಾವತಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಪುರುಷ ವಸತಿ ನಿಲಯ ಹಾಗೂ ಮಹಿಳಾ ವಸತಿ ನಿಲಯದ ಮೇಲ್ವಿಚಾರಕರಿಗೆ , […]
ಇ ಸಿ ಆರ್ ಕಾಲೇಜು: ಎನ್.ಎಸ್.ಎಸ್ ಘಟಕ ಉದ್ಘಾಟನೆ
ಮಧುವನ (ಫೆ-24): ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ 2020-21ರ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭ ದಿನಾಂಕ 19-02-2021ರಂದು ನಡೆಯಿತು.ಲಕ್ಷ್ಮಿಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪಡುಕೆರೆ ಕೋಟ ಇದರ ಪ್ರಾಂಶುಪಾಲರಾದ ಪ್ರೋ.ನಿತ್ಯಾನಂದ ಗಾಂವರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ವಿವರಿಸುವುದರ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಯುವ ಪೀಳಿಗೆಯ ಕರ್ತವ್ಯದ ಬಗ್ಗೆ ಅವರು ತಿಳಿಸಿದರು. ಮುಖ್ಯ ಅತಿಥಿಯಾಗಿ […]
ಇ.ಸಿ .ಆರ್. ಕಾಲೇಜು : ಪ್ಲಾಸ್ಟಿಕ್ ಮುಕ್ತ ಕಡಲ ತಡಿ ಅಭಿಯಾನ
ಇಲ್ಲಿನ ಇ .ಸಿ .ಆರ್. ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನ ಎನ್ ಎಸ್ ಎಸ್, ನೇಚರ್ ಕ್ಲಬ್ ಹಾಗೂ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 16 ರಂದು ಕೋಟ ಪಡುಕೆರೆ ಕಡಲ ತಡಿಯುದ್ದಕ್ಕೂ “ಪ್ಲಾಸ್ಟಿಕ್ ಮುಕ್ತ ಕಡಲ ತಡಿ ” ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಆರೋಗ್ಯಕರ ಜೀವನಶೈಲಿಯ ಪಾತ್ರ
ಮಧುವನ, (ಫೆಬ್ರವರಿ 12) : ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್, ಮಧುವನ ಇಲ್ಲಿನ ರೆಡಿಕ್ರಾಸ್ ಘಟಕ ಮತ್ತು ಸಂಜೀವಿನಿ, ಎನ್ ಜಿ ಒ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 10-02-2021 ರಂದು “ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಆರೋಗ್ಯಕರ ಜೀವನಶೈಲಿಯ ಪಾತ್ರ ” ಎಂಬ ವಿಷಯದ ಕುರಿತು ವೆಬಿನಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೀವಿನಿ ಸಂಸ್ಥೆಯ ಸ್ಥಾಪಕರಾದ ಕುಮಾರಿ ರೂಬಿ ಅಹ್ಲುವಾಲಿಯಾ ಅವರು ಸಂಸ್ಥೆಯ ಉದ್ದೇಶವನ್ನು ಪರಿಚಯಿಸಿದರು. ಸಂಸ್ಥೆಯ […]
ಪ್ಲಾಸ್ಟಿಕ್ನ ದುರ್ಬಳಕೆ: ಜಾಗೃತಿ ಕಾರ್ಯಕ್ರಮ
ಕೋಟೇಶ್ವರ : ಇ. ಸಿ. ಆರ್. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನ, ಬ್ರಹ್ಮಾವರ ಇಲ್ಲಿ ದಿನಾಂಕ 30-01-2021 ರಂದು ‘ಹುತಾತ್ಮರ ದಿನ’ದ ಅಂಗವಾಗಿ ನೇಚರ್ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ದುರ್ಬಳಕೆ ಕುರಿತು ವಿದ್ಯಾರ್ಥಿಗಳಿಂದ ನೃತ್ಯ ರೂಪಕದ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಶ್ರೀ ಆಕಾಶ್ ಸವಳಸಂಗ್ ಹಾಗೂ ಏವಿಯೇಷನ್ ವಿಭಾಗ ಮುಖ್ಯಸ್ಥರಾದ ಶ್ರೀ ಮಿರ್ ತಾಜ್ದಾರ್ ಹುಸೇನ್ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ಲಾಸ್ಟಿಕ್ನ ಅತಿಯಾದ ಬಳಕೆಯಿಂದ ಪ್ರಕೃತಿ ಮೇಲಾಗುವ […]