ಕೋಟ(ಫೆ.1): ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಗಣೇಶ ಗಂಗೊಳ್ಳಿ ಹಾಗೂ ಬಳಗದವರ ಸಹಯೋಗದೊಂದಿಗೆ ಜಾನಪದ ಹಾಡು ಹಾಗೂ ನಾಟಕದ ಮೂಲಕ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶ್ರೀ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಆರೂರಿನಲ್ಲಿ ಫೆ.1 ರಂದು ಹಮ್ಮಿಕೊಳ್ಳಲಾಯಿತು. ಈ […]
Tag: ganesh gangolli
ಭಾರತೀಯ ಜನತಾ ಪಾರ್ಟಿ ಉಡುಪಿ : ಸಂವಿಧಾನ ದಿನಾಚರಣೆ & ಸನ್ಮಾನ ಕಾರ್ಯಕ್ರಮ
ಉಡುಪಿ (ನ,28); ಉಡುಪಿ ಜಿಲ್ಲಾ ಬಿಜೆಪಿ ಪಕ್ಷದ ಕಛೇರಿಯಲ್ಲಿ ಸಂವಿಧಾನ ದಿನಾಚರಣೆಯನ್ನು ನ,26 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಸಿದ್ಧ ಜಾನಪದ ಗಾಯಕರು ಹಾಗೂ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಯವರನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯವರು ಸನ್ಮಾನಿಸಿ ಗೌರವಿಸಿದರು.
ನಿರಂತರ ಪರಿಶ್ರಮದಿಂದ ಕಲಾಸಾಧನೆ ಸಾಧ್ಯ: ಡಾ.ಗಣೇಶ್ ಗಂಗೊಳ್ಳಿ ಅಭಿಮತ
ಉಡುಪಿ (ನ,26): ಕಲೆಯು ಯಾವಾಗಲೂ ಓರ್ವ ಸಾಧಕನ ಸ್ವತ್ತು. ತನ್ನ ಆಯ್ದ ಕ್ಷೇತ್ರದಲ್ಲಿ ಸಾಧನೆಗೈಯಲು ಶೃದ್ಧೆ, ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ವಿನಮ್ರತೆ ಅಗತ್ಯ. ಜೀವನದಲ್ಲಿ ಬರುವ ಅಡೆತಡೆಗಳನ್ನೆದುರಿಸಿ ಸಾಧನೆಯ ಹಾದಿಯಲ್ಲಿ ದೃಢ ಸಂಕಲ್ಪದೊಂದಿಗೆ ಹೆಜ್ಜೆಯಿಡಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸೂರ್ಯ ಚೈತನ್ಯ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಕನ್ನಡ ಜಾನಪದ ಪರಿಷತ್ ನ ಉಡುಪಿ ಜಿಲ್ಲಾಧ್ಯಕ್ಷ , ಖ್ಯಾತ ಜಾನಪದ ಗಾಯಕ ಡಾ. ಗಣೇಶ್ […]
ಸಂಜಯಗಾಂಧಿ ಪ್ರೌಢ ಶಾಲೆ ಅಂಪಾರು:-ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ
ಅಂಪಾರು (ನ,22): ಕನ್ನಡ ಜಾನಪದ ಪರಿಷತ್, ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಕನ್ನಡ ಜಾನಪದ ಪರಿಷತ್ ಕುಂದಾಪುರ ತಾಲೂಕು ಘಟಕ, ಸಂಜಯ್ ಗಾಂಧಿ ಪ್ರೌಢ ಶಾಲೆ ಅಂಪಾರು, ಸಂಜಯ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಪಾರು ಹಾಗೂ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ವಲಯ ಪ್ರಾಂತ್ಯ ಜಿಲ್ಲೆ317ಸಿ ಇವರ ಸಂಯುಕ್ತ ಆಶ್ರಯದಲ್ಲಿ ಜನರೆಡೆಗೆ ಹೋಗೋಣ, ಜಾನಪದ ಉಳಿಸೋಣ,ಜಾನಪದವೇ ಸತ್ಯ,ಜಾನಪದವೇ […]
ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು: ನ,26 ರಂದು ಡಾ. ಗಣೇಶ್ ಗಂಗೊಳ್ಳಿಯವರಿಗೆ ಸನ್ಮಾನ ಮತ್ತು ಗೀತಗಾಯನ ಕಾರ್ಯಕ್ರಮ
ಕುತ್ಯಾರು(ನ,22): ಇಲ್ಲಿನ ಸೂರ್ಯ ಚೈತನ್ಯ ಹೈಸ್ಕೂಲ್ ಆಶ್ರಯದಲ್ಲಿ ನವೆಂಬರ್ 26 ರಂದು ಕನ್ನಡ ಜಾನಪದ ಪರಿಷತ್ ಉಡುಪಿ ಇದರ ಜಿಲ್ಲಾಧ್ಯಕ್ಷರು ಹಾಗೂ ಖ್ಯಾತ ಜನಪದ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡ ಜಾನಪದ ಕೋಗಿಲೆ ಬಿರುದಾಂಕಿತ ಡಾ.ಗಣೇಶ್ ಗಂಗೊಳ್ಳಿಯವರು ಕನ್ನಡ ನಾಡಿನ ಜನಪದ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸಿನಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡುತ್ತಿರುವ ಕಲಾಸಾಧಕ. ಕರ್ನಾಟಕ ಜನಪದ ಸಾಹಿತ್ಯ ಸೇವೆಗಾಗಿ ಅವರಿಗೆ […]
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ: ಖ್ಯಾತ ಗಾಯಕ ಡಾ.ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ
ಕೋಟೇಶ್ವರ (ನ,14): ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ ಇಲ್ಲಿ ನ,14 ರಂದು ನಡೆದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ರವರ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸಲಾಗುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಶಾಲಾಭಿವೃದ್ಧ ಸಮಿತಿಯ ಮಾಜಿ ಅಧ್ಯಕ್ಷರು, ತಮಿಳುನಾಡು ಹೊಸೂರಿನ ಇಂಡಿಯನ್ ಎಂಪಾಯಾರ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪಡೆದ ಖ್ಯಾತ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]
ಉಡುಪಿ: ಜಾನಪದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಉಡುಪಿ (ನ,9): ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಾನಪದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನ,08 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿ ರವರು ಮಾತನಾಡಿ ಜಾನಪದ ಮೂಕಾದರೆ ಮಾನವ ಜಾನಂಗ ಮೂಕ ಆದಂತೆ,ಆದ್ದರಿಂದ ಜಾನಪದ ಕಲೆ ಸಂಸ್ಕತಿಯನ್ನು ಇಂದಿನ ಯುವ ಜನಾಂಗ ಉಳಿಸಿ ಬೆಳೆಸ ಬೇಕೆಂದು […]
ಉಡುಪಿ: ನ ,08 ರಂದು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ
ಉಡುಪಿ (ನ,06): ಕನ್ನಡ ಜಾನಪದ ಪರಿಷತ್ ಬೆಂಗಳೂರು,ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಉಡುಪಿ ಜಿಲ್ಲೆ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮವು ನ,8 ರಂದು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿಯವರು ನೆರವೇರಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರೇಗೌಡ ರವರು […]
ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ
ಕಾರ್ಕಳ (ನ. 02) : ಕಾರ್ಕಳ ತಾಲೂಕು ಆಡಳಿತ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಶ್ರೀ ಮಂಜುನಾಥ ಪೈ ಸ್ಮಾರಕ ಪ್ರತಿಷ್ಠಾನ ಸಭಾ ಭವನದಲ್ಲಿ ನ.01ರಂದು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಗೀತಗಾಯನ ರಸಮಂಜರಿ ಕಾರ್ಯಕ್ರಮ ನೀಡಿದ ಕರ್ನಾಟಕ ಜಾನಪದ ಕೋಗಿಲೆ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಗಣೇಶ್ ಗಂಗೊಳ್ಳಿ ಯವರನ್ನು ಕಾರ್ಕಳ ತಾಲೂಕು ಮಾನ್ಯ ತಹಸೀಲ್ದಾರರಾದ ಶ್ರೀ ಕೆ. ಪುರಂದರ ರವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಕಳ […]
ಗಣೇಶ್ ಗಂಗೊಳ್ಳಿ ಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಸೆ.2): ಕನ್ನಡ ನಾಡಿನ ಖ್ಯಾತ ಜಾನಪದ ಗಾಯಕ, ಜಾನಪದ ಚಿಂತಕ ಹಾಗೂ ಸಂಘಟಕ ಕುಂದಾಪುರ ಮೂಲದ ಗಣೇಶ್ ಗಂಗೊಳ್ಳಿ ಯವರಿಗೆ ತಮಿಳುನಾಡಿನ ಪ್ರತಿಷ್ಠಿತ ಇಂಡಿಯನ್ ಎಂಪೆಯರ್ ವಿಶ್ವ ವಿದ್ಯಾಲಯ ಹಾಗೂ ಯುನಿವರ್ಸಲ್ ಅಕಾಡೆಮಿಕ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಆಗಸ್ಟ್ 28ರಂದು ತಮಿಳುನಾಡಿನ ಹೊಸೂರು ಕ್ಲಾರೇಶ್ವ ಸಭಾಂಗಣದಲ್ಲಿ ಗೌರವ ಡಾಕ್ಟರೇಟ್ ನ್ನು ಪ್ರಧಾನ ಮಾಡಲಾಯಿತು .ಯು ಜಿ ಸಿ ವೈಸ್ ಚೇರ್ಮನ್ ಡಾ.ಕೆ ಪ್ರಭಾಕರ್ , […]










