ಗಂಗೊಳ್ಳಿ (ಜೂ, 2): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿ ಸೇವಾ ನಿಮಿತ್ತ ಯಾದಗಿರಿಗೆ ವರ್ಗಾವಣೆಗೊಂಡಿರುವ ಡಾ|ಗಿರೀಶ್ ಕುಲಕರ್ಣಿ ಇವರಿಗೆ ಸೇವಾ ಭಾರತಿ ಗಂಗೊಳ್ಳಿ ಇದರ ಸ್ವಯಂಸೇವಕರು ಗೌರವ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಲ್ಲಿಸಿದರು. ಕೋವಿಡ್ ಸಂದರ್ಭದಲ್ಲಿನ ಡಾ |ಗಿರೀಶ್ ಕುಲಕರ್ಣಿಯವರ ವೈದ್ಯಕೀಯ ಸೇವೆಗೆ ಸ್ವಯಂಸೇವಕರು ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.
Tag: gangolli
ಗಂಗೊಳ್ಳಿ : ಅರ್ಹ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ
ಗಂಗೊಳ್ಳಿ (ಮೇ, 18): ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಹಾಗೂ ಲಿಶಿಯಸ್ ಸಂಸ್ಥೆಯ ಸಹಯೋಗದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ (ರಿ) ಮೂಲಕ ಕೊರೋನ ಸಂಕಷ್ಟಗಳಿಗೆ ಸ್ಪಂದಿಸುವ ಆಶಯದೊಂದಿಗೆ ಕರ್ನಾಟಕ ರಾಜ್ಯದ ಕೊಂಕಣಿ ಖಾರ್ವಿ ಸಮಾಜದ ಅರ್ಹ ಬಡ ಕುಟುಂಬಗಳಿಗೆ ಕೊಡಮಾಡಿದ ಅಕ್ಕಿಯ ಮೂಟೆಗಳನ್ನು ಗಂಗೊಳ್ಳಿ ವಲಯದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಖಾರ್ವಿ ಸಮುದಾಯದ ಹಿರಿಯ ಮುಖಂಡರಾದ ಜಿ.ಪುರುಷೋತ್ತಮ ಆರ್ಕಾಟಿ, ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಸುರೇಂದ್ರ ಖಾರ್ವಿ, […]
ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಅಧಿಕಾರ ಸ್ವೀಕಾರ
ಗಂಗೊಳ್ಳಿ (ಮೇ, 12) : ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಮೇ 11ರಂದು ಅಧಿಕಾರ ಸ್ವೀಕರಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಭೀಮಾಶಂಕರ್ ಎಸ್. ರವರು ವರ್ಗಾವಣೆಗೊಂಡ ಬಳಿಕ ಖಾಲಿಯಿದ್ದ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ನಂಜಾ ನಾಯ್ಕ ಎನ್. ನಿಯುಕ್ತಿಗೊಂಡಿರುತ್ತಾರೆ. ನೂತನ ಉಪನಿರೀಕ್ಷಕರಾದ ನಂಜಾ ನಾಯ್ಕ ಎನ್. ಅವರಿಗೆ ಪ್ರಭಾರ ಎಸ್. ಐ. ಪ್ರಕಾಶ್ ಸಾಲಿಯಾನ್ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಮಾರ್ಚ್ 21ರಂದು ಗಂಗೊಳ್ಳಿ ಭಾಸ್ಕರ ಕಲೈಕಾರ್ ಮ್ಯೂಸಿಯಂ ಉದ್ಘಾಟನೆ
ಗಂಗೊಳ್ಳಿ (ಮಾ.18) ಕರ್ನಾಟಕ ಸರಕಾರ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಕೊಂಕಣಿ ಅಕಾಡೆಮಿಯ ಕೊಂಕಣಿ ನಕ್ಷತ್ರ ಬಿರುದು, ಎಸ್.ಎಮ್.ಎಸ್. ಕಲಾವೈಭವ ಪ್ರಶಸ್ತಿ ಪುರಸ್ಕೃತ ವ್ಯಂಗ್ಯಚಿತ್ರಗಾರ, ಪ್ರಾಚೀನ ವಸ್ತು ಸಂಗ್ರಹಕಾರ, ಚುಟುಕು ಸಾಹಿತಿ, ಪ್ರದರ್ಶನಕಾರ ಮತ್ತು ಛಾಯಾ ಚಿತ್ರಗ್ರಾಹಕ ಗಂಗೊಳ್ಳಿ ಶ್ರೀ ಭಾಸ್ಕರ ಕಲೈಕಾರ್ ರವರು ಮುಂದಿನ ಯುವ ಪೀಳಿಗೆಗಾಗಿ ನಿರ್ಮಿಸಿರುವ ಮ್ಯೂಸಿಯಂ ಉದ್ಘಾಟನೆ ಇದೇ ಮಾರ್ಚ್ 21ರ ಬೆಳಿಗ್ಗೆ 10-30 ಗಂಟೆಗೆ ಗಂಗೊಳ್ಳಿಯ. ‘ಶ್ರೀ ದೇವಿಪ್ರಸಾದ್’ ಕಲೈಕಾರ್ ಮಠದ ಬಳಿ ನಡೆಯಲಿದೆ. ಈ […]
ಸರಸ್ವತಿ ವಿದ್ಯಾಲಯ ಗಂಗೊಳ್ಳಿ : ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಮತ್ತು ಟೆನ್ನಿಕಾಯ್ಟ್ ಪಂದ್ಯಾಟ ಉದ್ಘಾಟನೆ
ಗಂಗೊಳ್ಳಿ (ಮಾ. 17) : ವಿದ್ಯಾರ್ಥಿಗಳು ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಕ್ರೀಡಾ ಶಿಕ್ಷಣದ ಜೊತೆ ಜೊತೆಯಲ್ಲಿ ವ್ಯಕ್ತಿತ್ವ ವಿಕಸನದ ಕಡೆಗೂ ಗಮನಹರಿಸಬೇಕು ಎಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಸುಕೇಶ್ ಶೆಟ್ಟಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ ಉಡುಪಿ, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಮತ್ತು ಶ್ರೀ ಗುರು ಜ್ಯೋತಿ ಸ್ಪೋರ್ಟ್ಸ್ […]
ಫೆಬ್ರವರಿ, 27 ರಂದು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ (ನಿ) ಅಮೃತ ಮಹೋತ್ಸವ
ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್(ನಿ) ಇದರ ಅಮೃತ ಮಹೋತ್ಸವ ಇದೇ ಫೆಬ್ರವರಿ 27 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆಯಲಿದೆ.
ಫೆ. 22 ರಂದು ಗಂಗೊಳ್ಳಿಯ ಗ್ರಾಮ ಪಂಚಾಯತ್ ವಿರುದ್ದ ಹಿಂದು ಜಾಗರಣ ವೇದಿಕೆ ಪ್ರತಿಭಟನೆ
ಗಂಗೊಳ್ಳಿ (ಫೆ.21) ಕಳೆದ 2 ವರ್ಷಗಳ ಹಿಂದೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿನ ನೀರಿನ ಟ್ಯಾಂಕ್ ಬಳಿ ಖಾಸಗಿ ಸ್ಥಳವೊಂದರಲ್ಲಿ ಪಂಚಾಯತ್ ನ ಅನುಮತಿ ಪಡೆಯದೇ ಅನುಮಾನಸ್ಪದ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದು, ಜೊತೆಗೆ ಅನೇಕ ಅನುಮಾನಾಸ್ಪದ ವ್ಯಕ್ತಿಗಳು ಹೊತ್ತಲ್ಲದ ಹೊತ್ತಿನಲ್ಲಿ ಈ ಭಾಗದಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಸ್ಥಳೀಯಾಡಳಿತವಾದ ಗಂಗೊಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕಾನೂನು ಹೋರಾಟವನ್ನು ನಿರಂತರವಾಗಿ ಮಾಡಿದರೂ ಗ್ರಾಮ ಪಂಚಾಯತ್ ಇದನ್ನು ಗಂಭೀರ […]
ಗ್ರೌಂಡ್ ರೈಡರ್ ವಲಯ ಮಟ್ಟದ ಕ್ರಿಕೆಟ್ ಪಂದ್ಯಕೂಟ -ಸಾಧಕರಿಗೆ ಸನ್ಮಾನ
ಗೌಂಡ್ ರೈಡರ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಬೈಂದೂರು ವಲಯ ಮಟ್ಟದ ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಸಚಿವ ಎಸ್. ಅಂಗಾರ ಭೇಟಿ
ಕರ್ನಾಟಕ ರಾಜ್ಯ ಮೀನುಗಾರಿಕಾ ಮತ್ತು ಬಂದರು ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಎಸ್. ಅಂಗಾರ ರವರು ಕುಂದಾಪುರ ತಾಲೂಕಿನ ಅತಿದೊಡ್ಡ ಮೀನುಗಾರಿಕೆ ಬಂದರಾಗಿರುವ ಗಂಗೊಳ್ಳಿ ಬಂದರಿಗೆ ಭೇಟಿ ನೀಡಿದರು.
ಗಂಗೊಳ್ಳಿ ಮಾರಿಜಾತ್ರೆ : ಚಾಯ್ ಪೇ ಜಾತ್ರಾ ಕಾರ್ಯಕ್ರಮ
ಗಂಗೊಳ್ಳಿ: ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಪ್ರಸಿದ್ದ ಮಹಾಂಕಾಳಿ ಅಮ್ಮನವರ ದೇವಸ್ಥಾನದ ವಾರ್ಷಿಕ ಮಾರಿಜಾತ್ರೆಯ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಗಂಗೊಳ್ಳಿ ವತಿಯಿಂದ “ಚಾಯ್ ಪೇ ಜಾತ್ರಾ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಾರಿಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತಾಧಿಗಳಿಗೆ ಉಚಿತ ಚಹಾ ಹಾಗೂ ಲಘುಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಭಕ್ತಾಧಿಗಳಿಗೆ ಚಹಾ ನೀಡುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಬಿಜೆಪಿ ಮೀನುಗಾರರ ಪ್ರಕೋಷ್ಠ ರಾಜ್ಯ ಸಂಚಾಲಕರಾದ ಶ್ರೀ ಯಶ್ […]










