ಕುಂದಾಪುರ(ಜು ,22): ಕುಂದಾಪುರ ರೆಡ್ಕ್ರಾಸ್ ಘಟಕದ ಅಂಗಸಂಸ್ಥೆಯಾದ ಸರಕಾರಿ ಪದವಿ ಪೂರ್ವ ಕಾಲೇಜಿನ ಜ್ಯೂನಿಯರ್ ರೆಡ್ಕ್ರಾಸ್ ಘಟಕವನ್ನು ಕುಂದಾಪುರ ರೆಡ್ಕ್ರಾಸ್ ಘಟಕದ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಅಧ್ಯಕ್ಷತೆ ವಹಿಸಿದ್ದರು. ರೆಡ್ಕ್ರಾಸ್ ಸಂಚಾಲಕರಾದ ಶ್ರೀ ದಿನಕರ ಶೆಟ್ಟಿ ರೆಡ್ಕ್ರಾಸ್ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜ್ಯೂನಿಯರ್ ರೆಡ್ಕ್ರಾಸ್ 2025-26 ನೇ ಸಾಲಿನ ಅಧ್ಯಕ್ಷರಾದ ದ್ವಿತೀಯ ಪಿಯುಸಿ ಅಮೂಲ್ಯ, ಕಾರ್ಯದರ್ಶಿ ಪ್ರಥಮ ಪಿಯುಸಿ […]
Tag: general news
ಸರಕಾರಿ ಪಿ ಯು ಕಾಲೇಜು ಹೊಸಂಗಡಿ : “ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ” ದ ಅಂಗವಾಗಿ ಜಾಗೃತಿ ಕಾರ್ಯಕ್ರಮ
ಹೊಸಂಗಡಿ( ಜು ,8): ಸರಕಾರಿ ಪದವಿ ಪೂರ್ವ ಕಾಲೇಜು, ಹೊಸಂಗಡಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ” ದ ಅಂಗವಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಜೂನ್ 25 ರಂದು ಹಮ್ಮಿಕೊಳ್ಳಲಾಯಿತು. ಅಮಾಸೆಬೈಲು ಪೊಲೀಸ್ ಠಾಣೆಯ ಎಸ್. ಐ ಶ್ರೀ ಅಶೋಕ್ ಕುಮಾರ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ‘ ನಶಾ ಮುಕ್ತ ಭಾರತ ‘ ಈ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿವಿಧ ಯೋಜನೆಗಳನ್ನು ತಿಳಿಸಿದರು. ಬೀಡಿ, ಸಿಗರೇಟ್, ತಂಬಾಕು, ಇತರ ಮಾದಕ ದ್ರವ್ಯಗಳ […]
ಹೆಸಕುತ್ತೂರು: ಗೀತಾನಂದ ಫೌಂಡೇಶನ್ ವತಿಯಿಂದ ವನ ಮಹೋತ್ಸವ
ತೆಕ್ಕಟ್ಟೆ ( ಜೂ ,10): “ಗಿಡಗಳನ್ನು ನೆಟ್ಟು, ಪೋಷಿಸಿ ಬೆಳೆಸುವುದರ ಮೂಲಕ ನಾವೆಲ್ಲರೂ ನಮ್ಮ ಸುತ್ತಲಿನ ಪರಿಸವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕು. ಪ್ರಕೃತಿ ರಕ್ಷಣೆ ಎಂದರೆ ನಮ್ಮನ್ನು ನಾವೇ ರಕ್ಷಿಸಿಕೊಂಡಂತೆ.” ಎಂದು ಗೀತಾನಂದಫೌಂಡೇಶನ್ (ರಿ) ಮಣೂರು ಪಡುಕರೆ ಇದರ ಪ್ರವರ್ತಕರಾದ ಶ್ರೀ ಆನಂದ ಸಿ ಕುಂದರ್ ನುಡಿದರು. ಅವರು ತಮ್ಮ ಗೀತಾನಂದ ಫೌಂಡೇಶನ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವನ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಶಾಲಾ […]
ದಯಾನಿಧಿ ಬಂಟರ ಬಳಗ ಹುಣ್ಸೆಮಕ್ಕಿ: ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ
ಕೋಟೇಶ್ವರ (ಜೂ ,07): ದಯಾನಿಧಿ ಬಂಟರ ಬಳಗ ಹುಣ್ಸೆಮಕ್ಕಿವತಿಯಿಂದ ಪ್ರತಿ ವರ್ಷದಂತೆ ಐದು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಶ್ರೇಣಿಯಲ್ಲಿ ಪಾಸಾದ 10 ಜನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ವಸಂತಿ ಮಂಜಯ್ಯಶೆಟ್ಟಿ ,ಅಧ್ಯಕ್ಷರಾದ ಗಣೇಶ್ ಶೆಟ್ಟಿ ,ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ,ಗೌರವ ಸದಸ್ಯರಾದ ದಿನಕರ ಹೆಗ್ಡೆ, ಅನಿಲ್ ಕುಮಾರ್ ಶೆಟ್ಟಿ ,ಉದಯ್ […]
ಧಾರ್ಮಿಕ ಮುಖಂಡ ,ಕ್ರೀಡಾಪಟು ಜಯಾನಂದ ಖಾರ್ವಿ ನಿಧನ
ಕುಂದಾಪುರ(ಮೇ 26) : ಇಲ್ಲಿನ ಖಾರ್ವಿಕೇರಿ ನಿವಾಸಿ ಧಾರ್ಮಿಕ ಮುಖಂಡ, ಖಾರ್ವಿ ಸಮಾಜದ ನೇತಾರ ಹಾಗೂ ಕ್ರೀಡಾಪಟು ಜಯಾನಂದ ಖಾರ್ವಿಯವರು ಹೃದಯಾಘಾತದಿಂದ ಇಂದು ಮುಂಜಾನೆ 3.00 ಗಂಟೆಯ ವೇಳೆಗೆ ನಿಧನ ಹೊಂದಿದ್ದಾರೆ. ಹಲವಾರು ವರ್ಷಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಕೊಂಕಣ ಖಾರ್ವಿ ಸಮಾಜದ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ಕೊಂಕಣ ಖಾರ್ವಿ ಸಮಾಜ ಬಾಂಧವರು ಹಾಗೂ ವಿವಿಧ […]
ಕೋಟದಲ್ಲಿ ಯಕ್ಷ ತ್ರಿವಳಿ ಸಮಾರೋಪ
ಕೋಟ ( ಎ ,20): “ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಕೆಯಾಗುತ್ತದೆ, ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆಯಾಗುತ್ತದೆ, ಸೆಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ, ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗುತ್ತಾನೆ. ಮಕ್ಕಳಿಗೆ ಬದುಕಿನ ಮೌಲ್ಯವನ್ನು ಕೊಡ ಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಮಗುವನ್ನು ತಾಯಿಯಂತೆ ಪೋಷಿಸಬಲ್ಲ ಶಕ್ತಿ ಯಕ್ಷಗಾನದ ನಿಜ ಸತ್ವವಾಗಿದೆ. ಸಾಲಿಗ್ರಾಮ ಮಕ್ಕಳ ಮೇಳದ ಹಂದೆ ಉಡುಪರು ಕಲೆಯ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಬ್ರಹ್ಮಾವರ ತಾಲೂಕು ಕನ್ನಡ […]
ಕ್ರಾಸ್ ಲ್ಯಾಂಡ್ ಕಾಲೇಜು ಬ್ರಹ್ಮಾವರ : ಮಾನವ ಹಕ್ಕು ಅರಿವಿನ ಕುರಿತು ಉಪನ್ಯಾಸ
ಬ್ರಹ್ಮಾವರ (ಎ. 19): ಇಲ್ಲಿನ ಕ್ರಾಸ್ ಲ್ಯಾಂಡ್ ಪದವಿ ಕಾಲೇಜಿನ ಮಾನವ ಹಕ್ಕು ಘಟಕದ ಆಶ್ರಯದಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏಪ್ರಿಲ್,19 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರದ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಮಾತನಾಡಿ ಮಾನವ ಹಕ್ಕುಗಳ ಅರಿವು ಎಲ್ಲರಿಗೂ ಅಗತ್ಯ […]
ಉಡುಪಿ ಜಿಲ್ಲಾ ಸಾಧಕರಿಗೆ ಪ್ರಾಂಶುಪಾಲರ ಸಂಘದ ಅಭಿನಂದನೆ
ಉಡುಪಿ(ಏ,10) : 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ಶೇ.93.90ರ ಫಲಿತಾಂಶದೊAದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದೆ. ಈ ಸಾಧನೆಗೆ ಜಿಲ್ಲಾಡಳಿತದ ಮಾರ್ಗದರ್ಶನ, ಉಪನಿರ್ದೇಶಕರ ನಿರ್ದೇಶನ, ಕಾಲೇಜು ಆಡಳಿತ ಮಂಡಳಿಗಳ ಹಾಗೂ ಪೋಷಕರ ಸಹಕಾರ ಮತ್ತು ಪ್ರಾಂಶುಪಾಲರ ಸಂಘದ ಕಾರ್ಯವೈಖರಿಯು ಕಾರಣೀಭೂತವಾಗಿದೆ. ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾದ ಆಸ್ತಿ ಎಸ್ ಶೆಟ್ಟಿ (596), ವಾಣಿಜ್ಯ ವಿಭಾಗದಲ್ಲಿ ಕ್ರೈಸ್ತ ಕಿಂಗ್ ಕಾಲೇಜಿನ ಸುಧೀಕ್ಷಾ ಶೆಟ್ಟಿ ಮತ್ತು ವಿದ್ಯೋದಯ ಕಾಲೇಜಿನ ಪ್ರಣವಿ […]
ಜ್ಞಾನ ಭಾರತ್-ಬಾಲಸಂಸ್ಕಾರ ಮಕ್ಕಳಿಂದ ಹಿರಿಯಡ್ಕ ದೇಗುಲ ದರ್ಶನ
ಹಿರಿಯಡ್ಕ(ಫೆ.03): ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಮಕ್ಕಳು ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ವಿಹಾರದ ಮುಖ್ಯ ಅತಿಥಿಯಾಗಿ ಆಗಮಿಸಿದ ರಂಗಕರ್ಮಿ, ಸಾಹಿತಿ ಶ್ರೀಮತಿ ಪೂರ್ಣಿಮಾ ಸುರೇಶ್ ಸ್ಥಳ ಸಾನಿಧ್ಯದ ಪರಿಚಯ ಮಾಡಿಕೊಟ್ಟರು. ನಮ್ಮ ಊರಿನ ಕ್ಷೇತ್ರದ ಮಹಿಮೆಗಳನ್ನು, ಹಿರಿಯರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ, ದೈವಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊoಡು ಹೋಗುವ […]
ಫೆ. 04 ರಂದು ಪುತ್ತೂರು ಪೋಳ್ಯ ಮಠದಲ್ಲಿ ಗರುಡ ರಥೋತ್ಸವ
ಪುತ್ತೂರು(ಫೆ. 03): ತಾಲೂಕಿನ ಪೋಳ್ಯ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠದ ರಥೋತ್ಸವವು ಫೆಬ್ರವರಿ 4ರಂದು ವಿಜೃಂಭಣೆಯಿಂದ ನಡೆಯಲಿದೆ. ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯ”ಎರಡನೇ ತಿರುಪತಿ” ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.ಇಲ್ಲಿ ಪ್ರಧಾನ ದೇವರು ಶ್ರೀ ಲಕ್ಷ್ಮೀ ವೆಂಕಟ್ರಮಣ, ಜೊತೆಗೆ ಭವಾನಿಶಂಕರ, ದೇವಿ, ಮತ್ತು ಮೂರು ವಿಭಿನ್ನ ಶಕ್ತಿಯುಳ್ಳ ಗಣಪತಿ ಸೇರಿದಂತೆ ಪಂಚ ದೇವತೆಗಳನ್ನು ಆರಾಧಿಸಲಾಗುತ್ತದೆ. ಸ್ಥಳ ದೈವಗಳಾಗಿ ಧೂಮಾವತಿ ಮತ್ತು ಗುಳಿಗ ದೈವಗಳೂ […]