ಗೋಪಾಡಿ(ಜ.23): ಕುಂದಾಪುರ ತಾಲೂಕು ಗೋಪಾಡಿ (ಪಡು) ಗ್ರಾಮದ ಶ್ರೀ ಮಲಸಾವರಿ ಪಂಜುರ್ಲಿ ಹಾಗೂ ಪರಿವಾರ ದೈವಸ್ಥಾನದ 8ನೇ ವರ್ಷದ ವರ್ಧಂತ್ಯುತ್ಸವ ಜನವರಿ 25ರ ಮಂಗಳವಾರ ಹಾಗೂ 26 ರ ಬುಧವಾರದಂದು ನಡೆಯಲಿದೆ. ಕೋಟ ವೇದಮೂರ್ತಿ ಶ್ರೀಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣೆ ನಡೆಯಲಿದ್ದು ,ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮ ಹಾಗೂ ಸವಿನಯ ಚಂಡೆ ಬಳಗ ಗೋಪಾಡಿ (ಪಡು) ಇವರಿಂದ 2 […]
Tag: gopadi
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ : ಶಾಲಾ ಪ್ರಾರಂಭೋತ್ಸವ
ಕೋಟೇಶ್ವರ (ಜು, 2): ಕುಂದಾಪುರ ತಾಲೂಕಿನ ಪಡು ಗೋಪಾಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ,1ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಜೊತೆಗೆ ರಾಜ್ಯ ಸರಕಾರ ನಿಗದಿ ಪಡಿಸಿದ ಕರೋನದ ಮಾರ್ಗಸೂಚಿಯ ಬಗ್ಗೆ ಮಕ್ಕಳ ಪೋಷಕರಿಗೆ ತಿಳಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋಪಾಡಿ ಪಂಚಾಯಿತಿನ ಪ್ರಥಮ ಪ್ರಜೆ ಶ್ರೀಮತಿ ಸರೋಜಾ ಪೂಜಾರಿ ಕಾರ್ಯಕ್ರಮ ಅಧ್ಯಕ್ಷತೆಯನ್ನುವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಶೆಟ್ಟಿ, ಸಹ ಶಿಕ್ಷಕಿ ಶ್ರೀಮತಿ ಮಾಲತಿ ನಾಯ್ಕ,ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್,ಪಂಚಾಯತ್ […]
ಗೋಪಾಡಿ : ಒಂದೇ ಬಾರಿಗೆ ಅರಳಿದ 80 ಬ್ರಹ್ಮಕಮಲ ಹೂವುಗಳು
ಗೋಪಾಡಿ (ಜೂ, 08): ಗೋಪಾಡಿ ಗ್ರಾಮದ ಗಣೇಶ್ ಕಾಂಚನ್ ಪಡುಚಾವಡಿ ಬೆಟ್ಟು ಇವರ ಮನೆಯಲ್ಲಿ ಒಂದೇ ಬಾರಿಗೆ 80 ಬ್ರಹ್ಮಕಮಲ ಹೂವುಗಳು ಅರಳಿದೆ. ವರ್ಷಕ್ಕೊಮ್ಮೆ ಅರಳುವ ಈ ಸುಂದರ ಹೂವುಗಳು ರಾತ್ರಿ ಸುಮಾರು 9 ಗಂಟೆಗೆ ಅರಳಲು ಶುರುವಾಗಿ 12 ಗಂಟೆವರಗೆ ಸಂಪೂರ್ಣವಾಗಿ ಅರಳುತ್ತದೆ. ಹಾಗೆಯೇ ಬೆಳಗ್ಗಿನ ಜಾವದಲ್ಲಿ ಮುದುಡಿಹೋಗುತ್ತದೆ. ಹೂ ಅರಳುವಾಗ ಸುತ್ತಲೂ ಸುವಾಸನೆ ಬೀರುವುದು ಇದರ ವಿಶೇಷ .
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ : ವಿಶ್ವ ಪರಿಸರ ದಿನಾಚರಣೆ
ಗೋಪಾಡಿ (ಜೂ, 07): ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿಯಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಂದ್ರ ಕಾಂಚನ್ ಸಂಗಮ್ ಹಾಗೂ ಅಂಗನವಾಡಿ ಶಿಕ್ಷಕಿ ಶ್ರೀಮತಿ ಜಯಂತಿ ರವರು ಸರಿ ಸುಮಾರು 15 ಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.ಕೋವಿಡ್ ನಿಯಮದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪಡು ಗೋಪಾಡಿಯಲ್ಲಿ ವಿದ್ಯುತ್ ಕಡಿತ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಭಾಗಿಯಾದ ಗ್ರಾಮಸ್ಥರು
ಕೋಟೇಶ್ವರ (ಮೇ, 17): ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಪಡು ಗೋಪಾಡಿಯಲ್ಲಿ ಸತತ ಎರಡು ದಿನಗಳಿಂದ ವಿದ್ಯುತ್ ಕಡಿತ ಉಂಟಾಗಿದ್ದು ಗ್ರಾಮಸ್ಥರಿಗೆ ದಿನನಿತ್ಯದ ಕಾರ್ಯಚಟುವಟಿಕೆಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕಾಂಚನ್ ನೇತೃತ್ವದ ತಂಡ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡರು. ಈ ತಂಡ ಇಡೀ ದಿನ ವಿದ್ಯುತ್ ಕಂಬಗಳ ಸುತ್ತ ಬೆಳೆದಿರುವ ಮರ-ಗಿಡಗಳ ಗೆಲ್ಲುಗಳನ್ನು ಕತ್ತರಿಸಿ ಮೆಸ್ಕಾಂ ಸಿಬ್ಬಂದಿಗಳಿಗೆ ಸಹಕರಿಸಿ ಗ್ರಾಮಸ್ಥರಿಂದ […]
ತೌಖ್ತೇ ಚಂಡಮಾರುತ ಅಬ್ಬರ – ಗೋಪಾಡಿ ಕಡಲತೀರದ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಕುಂದಾಪುರ (ಮೇ. 15) : ತೌಖ್ತೇ ಚಂಡಮಾರುತ ಅಬ್ಬರ ಕರಾವಳಿ ಭಾಗದ ಕಡಲ ತೀರದಲ್ಲಿ ಅಪಾರ ಹಾನಿಯನ್ನು ಉಂಟುಮಾಡಿದ್ದು,ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಕಡಲ ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.. ದಿನದಿಂದ ದಿನಕ್ಕೆ ಸಮುದ್ರದ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು ಕಡಲತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಚಿಂತನೆ ನಡೆಯುತ್ತಿದೆ. ಮೇ 15ರ ಸಂಜೆ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೋಜ ಪೂಜಾರಿ ಹಾಗೂ ಸದಸ್ಯ ಪ್ರಭಾಕರ್ ಯಾನೆ ಪ್ರಕಾಶ್ […]
ಗೋಪಾಡಿ ಕಡಲ ತೀರ- ಕಡಲಾಮೆ ಮೊಟ್ಟೆ ರಕ್ಷಣೆ
ಕುಂದಾಪುರ: ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಮಲಸಾವರಿ ಪಂಜುರ್ಲಿ ದೈವಸ್ಥಾನದ ಚೆರ್ಕಿ ಕಡು ಸಮುದ್ರತೀರದಲ್ಲಿ ಫೆಬ್ರುವರಿ 03 ರ ಬುಧವಾರ ರಾತ್ರಿ ಸಮಯದಲ್ಲಿ ಕಡಲಾಮೆ ಮೊಟ್ಟೆ ಪತ್ತೆಯಾಗಿದ್ದು, ಕರಾವಳಿ ಫ್ರೆಂಡ್ಸ್ ನ ಸಂತೋಷ್ ಪೂಜಾರಿ ಹಾಗೂ ಲೋಕೇಶ್ ಪೂಜಾರಿಯವರು ಕಡಲಾಮೆ ಮೊಟ್ಟೆಯನ್ನು ಪತ್ತೆಹಚ್ಚಿದ್ದು, ಇದೀಗ ಸರಿ ಸುಮಾರು 130 ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ. ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಹಾಗೂ ಎಫ್.ಎಸ್.ಎಲ್. ಇಂಡಿಯಾದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಿ.ಸಿ.ಎಫ್ ಆಶಿಶ್ ರೆಡ್ಡಿ, […]