ಉಡುಪಿ (ಜು, 30): ಕುರ್ಕಾಲು ಗ್ರಾಮದ ಕುಂಜಾರುಗಿರಿ ನಿವಾಸಿ ಶಂಕರ್ ರವರ ಧರ್ಮಪತ್ನಿ ಶ್ರೀಮತಿ ಸರಸ್ವತಿ (ವಯಸ್ಸು, 25)ಯವರು 2 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಸದ್ಯ ಈಗಿರುವ ಪರಿಸ್ಥಿತಿಯಲ್ಲಿ ಡಯಾಲಿಸಿಸ್ ಮಾಡಲು ಕಷ್ಟವಾಗಿದೆ. ಮನೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಸರಸ್ವತಿಯವರಿಗೆ ಒಂದು ಹೆಣ್ಣು ಮಗುವಿದೆ. ಪತಿ ಶಂಕರ್ ನಿತ್ಯ ಕಲ್ಲು ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಸರಸ್ವತಿಯವರ ಪರಿಸ್ಥಿತಿ […]
Tag: help
ರಸ್ತೆ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರರ ಚಿಕಿತ್ಸೆ ಯ ನೆರವಿಗೆ ಮನವಿ
Views: 449
ಕುಂದಾಪುರ (ಜು, 02): ಶ್ರೀ ಮಾರಣಕಟ್ಟೆ ಮೇಳದ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಬಗ್ವಾಡಿಯವರು ಮಾರಣ ಕಟ್ಟೆ ಸಮೀಪದ ಹಾರ್ಮಣ್ ಬಳಿ ಜೂನ್, 30ರಂದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಕಡು ಬಡತನದಲ್ಲಿರುವ ಸುಬ್ರಹ್ಮಣ್ಯ ಮೊಗವೀರ ರವರು ತಾಯಿ, ತಮ್ಮ ಹಾಗೂ ಅಜ್ಜಿಯೊಂದಿಗೆ ಸಣ್ಣ ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಕಲಾವಿದ ಸುಬ್ರಹ್ಮಣ್ಯರವರ ಚಿಕಿತ್ಸಾ ವೆಚ್ಚ ಬರಿಸಲಾಗದೆ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಮಾನವೀಯ ನೆಲೆಯಲ್ಲಿ ಕಲಾವಿದನ […]