ಕುಂದಾಪುರ (ಅ ,28) : ಕನ್ನಡದ ಅಸ್ಮಿತೆಯನ್ನು ಸಾರುವ ವಿನೂತನ ಅಭಿಯಾನ ʼಕೋಟಿ ಕಂಠ ಗಾಯನʼವು ಅ.28 ರಂದು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು. ಕನ್ನಡ ,ನಾಡು -ನುಡಿಯ ಮಹತ್ವವನ್ನು ಸಾರುವ ಆರು ಹಾಡುಗಳನ್ನು ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಒಕ್ಕೊರಲಿನಿಂದ ಹಾಡಿ ಕನ್ನಡಾಭಿಮಾನವನ್ನು ಮೆರೆದರು.
Tag: hmm vkr
ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವಿ. ಕೆ. ಆರ್. ಶಾಲೆಗೆ ದ್ವಿತೀಯ ಸ್ಥಾನ
ಕುಂದಾಪುರ(ಅ,25): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ ವಿ. ಶೆಟ್ಟಿ ಮತ್ತು ಪ್ರಥಮ್ ವಿ. ಅಡಿಗ ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ವಡೇರಹೋಬಳಿ ಇಲ್ಲಿ ನಡೆದ ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ಸಂಸ್ಥೆಗೆ ಹೆಮ್ಮೆಯನ್ನು ತಂದಿರುತ್ತಾರೆ. […]
ಬದ್ಧತೆಯ ಸಿದ್ಧತೆಯಿಂದಲೇ ಸಾಧ್ಯತೆ: ಶ್ರೀ ಗಣೇಶ್ ಶೆಣೈ
ಕುಂದಾಪುರ(ಅ,25): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ ಶ್ರೀ ಸಾಲಿಗ್ರಾಮ ಗಣೇಶ್ ಶೆಣೈ ಅವರಿಂದ ನೆರವೇರಿತು. ಬದ್ಧತೆಯ ಸಿದ್ಧತೆಯಿಂದಲೇ ಸಾಧ್ಯತೆ ಎನ್ನುವ ವಿಚಾರದ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಪ್ರೇರಣೆ ಮೂಡಿಸಿದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಕಲಾ ಕುಂಚ ವೇದಿಕೆಯ ಮೂಲಕ ಹತ್ತನೇ […]
ವಿ. ಕೆ. ಆರ್. ಶಾಲೆಯಲ್ಲಿ ವೃತ್ತಿಪರ ಮಾರ್ಗದರ್ಶನ ಕಾರ್ಯಾಗಾರ
ಕುಂದಾಪುರ(ಅ,16): ಎಸ್. ಎಸ್. ಎಲ್. ಸಿ ಶಿಕ್ಷಣ ವಿದ್ಯಾರ್ಥಿಗಳ ವೃತ್ತಿಪರ ಬದುಕಿನ ಹಾದಿಗೆ ಮೊದಲ ಮೈಲಿಗಲ್ಲಿನ ಹಂತ. ಇದು ವಿದ್ಯಾರ್ಥಿಗಳ ಭವಿಷ್ಯದ ಸಾಧನೆಗೆ ಹೇಗೆ ಪೂರಕವಾದದ್ದು ಮತ್ತು ಆ ಹಾದಿಯ ವಿವಿಧ ಮಜಲುಗಳು ಹೇಗಿರುತ್ತದೆ ಎನ್ನುವುದನ್ನು ಸವಿಸ್ತಾರವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ನಾಗರಾಜ ಕಟೀಲ್ ವಿದ್ಯಾರ್ಥಿಗಳಗೆ ಮಾರ್ಗದರ್ಶನ ನೀಡಿದರು. ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ […]
ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಶಾಲೆಯಲ್ಲಿ ಗಾಂಧಿ & ಶಾಸ್ತ್ರಿಜಿ ಜಯಂತಿ
ಕುಂದಾಪುರ (ಅ,7) : ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಉಪ ಪ್ರಾಂಶುಪಾಲೆ ಹಾಗೂ ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶುಭಾ ಕೆ. ಎನ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಮಹಾತ್ಮರ ಭಾವಚಿತ್ರಕ್ಕೆ […]
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ನಲ್ಲಿ ಲಿಮಿಟ್ ಲೆಸ್ ಸೈನ್ಸ್
ಕುಂದಾಪುರ (ಸೆ,19): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಆಯೋಜಿಸಲ್ಪಟ್ಟ ಪ್ರೇರಣಾ – 2022 ಸರಣಿ ಕಾರ್ಯಾಗಾರದ ಮುಂದಿನ ಭಾಗದಲ್ಲಿ ” ಲಿಮಿಟ್ ಲೆಸ್ ಸೈನ್ಸ್ ” ಎನ್ನುವ ವಿಷಯವಾಗಿ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ವಿ.ಕೆ.ಆರ್ ಆಚಾರ್ಯ ಮೆಮೋರಿಯಲ್ ಹೈಸ್ಕೂಲ್ ನ ನಿವೃತ್ತ ವಿಜ್ಞಾನ ಶಿಕ್ಷಕರಾಗಿರುವ ಶ್ರೀ […]
ಗೀತಗಾಯನ :ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ (ಆ,26): ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಪ್ರೌಢಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕುಂದಾಪುರ ಇವರ ಸಂಯುಕ್ತಾಶ್ರಯದಲ್ಲಿ ಕುಂದಾಪುರದ ರೋಟರಿ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ದೇಶಭಕ್ತಿಗೀತಗಾಯನ ಸ್ಪರ್ಧೆಯಲ್ಲಿ […]
ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ: ಶಿಕ್ಷಕ ಸುರೇಶ್ ಮರಕಾಲರಿಂದ ವಿಶೇಷ ಉಪನ್ಯಾಸ
ಕುಂದಾಪುರ( ಜು,21 ): ಎರಡೂ ಕೈಗಳಿಲ್ಲದ ಜೆಸಿಕಾ ಕಾಕ್ ತನ್ನ ಪದವಿ ಮುಗಿಸಿ, ಕಾಲಿನಿಂದ ಕಂಪ್ಯೂಟರ್ ಆಪರೇಟ್ ಮಾಡ್ತಾಳೆ, ಕರಾಟೆ ಬ್ಲ್ಯಾಕ್ ಬೆಲ್ಟ್, ಸ್ಕೇಟಿಂಗ್, ಕಾರ್ ಡ್ರೈವಿಂಗ್ ಮಾಡ್ತಾಳೆ, ಪೈಲೆಟ್ ಆಗ್ತಾಳೆ ಅಂದಮೇಲೆ ಸಾಧಿಸುವ ಕಿಚ್ಚೊಂದಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ್ ಮರಕಾಲ ಹೇಳಿದರು. ಕುಂದಾಪುರ ಎಜುಕೇಶನ್ ಸೊಸೈಟಿ (ರಿ),ಪ್ರವರ್ತಿತ , ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ […]
ವಿ. ಕೆ. ಆರ್. ಪ್ರೌಢ ಶಾಲೆ ಕುಂದಾಪುರ :ಸಾಧಕರಿಗೆ ಸನ್ಮಾನ
ಕುಂದಾಪುರ (ಜೂ ,19): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯಲ್ಲಿ ಜೂ,18 ನಡೆಯಿತು ಎಸ್. ಎಸ್. ಎಲ್. ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 2021-22 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 620 ಕ್ಕೂ ಅಧಿಕ ಅಂಕ ಪಡೆದ ಅನ್ವಿತಾ ಎಸ್.(624), ಅನಿರುದ್ಧ ಎಸ್. ಹತ್ವಾರ್(624), ಅಭಿಷೇಕ್ ಅಡಿಗ (623 […]
ಕುಂದಾಪುರ: “ಹ್ಯಾಪಿ ಟೀನ್” ಹದಿಹರೆಯದ ಶಿಕ್ಷಣ ಮಾಹಿತಿ ಕಾರ್ಯಾಗಾರ
ಕುಂದಾಪುರ(ಜೂ,14): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ “ಹ್ಯಾಪಿ ಟೀನ್” ಹದಿಹರೆಯದ ಶಿಕ್ಷಣ ಮಾಹಿತಿ ಕಾರ್ಯಾಗಾರವನ್ನು ಜೂ,06 ರಂದು ಆಯೋಜಿಸಲಾಯಿತು. ಸಂಸ್ಥೆಯ ಹಳೆವಿದ್ಯಾರ್ಥಿನಿ ರ್ಯಾಂಕ್ ವಿಜೇತೆ ಡಾ| ಸ್ವಾತಿ ಶೇಟ್ ಕಾರ್ಯಾಗಾರವನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿಯರ ಹದಿಹರೆಯದ ಸಮಯದಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಗಿಡಮೂಲಿಕೆಗಳ ಸಹಾಯದಿಂದ ಮನೆಮದ್ದುಗಳನ್ನು ಹೇಗೆ ತಯಾರಿಸಿಕೊಳ್ಳಬಹುದೆಂದು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. ಕಾರ್ಯಾಗಾರದ […]