ಮೂಡ್ಲಕಟ್ಟೆ(ಆ,14): ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ದೀಕ್ಷಾರಂಭ ಕಾರ್ಯಕ್ರಮದ ಎರಡನೇ ದಿನ ಸೈಬರ್ ಸೆಕ್ಯೂರಿಟಿ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪೃಥ್ವಿ ವಿಷನ್ ಸ್ಥಾಪಕರಾದ ಶ್ರೀ ಪೃಥ್ವಿಶ್ ರವರು “ಸೈಬರ್ ಸೆಕ್ಯೂರಿಟಿಯ ಮಹತ್ವ, ವಿಶೇಷತೆ, ಅನ್ವಯಗಳ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿಯ ಕುರಿತು ಇರುವ ಸಂದೇಹಗಳಿಗೆ ಸೂಕ್ತ ಮಾಹಿತಿ ನೀಡಿ ವಾಸ್ತವಿಕ ಸಮಸ್ಯೆಗಳ ಅರಿವು ಮೂಡಿಸಿ, ತಾಂತ್ರಿಕ ಅರಿವಿನ ಕೊರತೆಯ […]
Tag: mitk
ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ: ವೃತ್ತಿ ಕಾರ್ಯಗಾರ ಸಂಪನ್ನ
ಕುಂದಾಪುರ (ಆ .09): ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಶಿಕ್ಷಕರ ಕಾರ್ಯಕ್ಷಮತೆಯನ್ನು ಉನ್ನತಿ ಗೊಳಿಸುವುದಕ್ಕೆ ಶಿಕ್ಷಕರಾಗಿ ನಮ್ಮ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಪೋಷಿಸುವುದು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಆಗಸ್ಟ್ 09 ರಂದು ಸಂಪನ್ನಗೊಂಡಿತು . ಐ ಎಂ ಜೆ ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪನ್ಯಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು “ಶಿಕ್ಷಕರು ನಿಷ್ಠೆ […]
ಎಂ ಐ ಟಿ ಮೂಡ್ಲಕಟ್ಟೆ: ಹೊಸ ಕೋರ್ಸ್ ಎಂ ಸಿ ಎ ಆರಂಭ
ಕುಂದಾಪುರ(ಜು.06): ಇಲ್ಲಿನ ಪ್ರತಿಷ್ಠಿತ ಕಾಲೇಜು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ನ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎ ಐ ಸಿ ಟಿ ಈ )ಹೊಸದಿಲ್ಲಿ ಇವರಿಂದ ಅನುಮೋದನೆ ದೊರೆತಿದೆ. ಈ ಕೋರ್ಸ್ ನ ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ ಟಿ ಯು )ಅಡಿಯಿಂದ ನೀಡಲಾಗುವುದು. ಬಿ ಸಿ ಎ/ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಅಥವಾ ಸಮಾನಾಂತರ ವಿಷಯಗಳಲ್ಲಿ ಶೇಕಡ 50 ಮತ್ತು ಅಧಿಕ ಅಂಕಗಳೊಂದಿಗೆ ಪದವಿ ಮುಗಿಸಿದ ವಿದ್ಯಾರ್ಥಿಗಳು, ಈ ಶೈಕ್ಷಣಿಕ ವರ್ಷದಿಂದಲೇ ಪ್ರವೇಶಾ ತಿ ಪಡೆಯಲು ಅವಕಾಶವಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಚೇರಿಯನ್ನು ಸಂಪರ್ಕಿಸಿಲು ತಿಳಿಸಲಾಗಿದೆ.
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ಅಂತರಾಷ್ಟ್ರೀಯ ಯೋಗ ದಿನಾಚರಣೆ
ಮೂಡ್ಲಕಟ್ಟೆ (ಜು,26): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ವೈ ಆರ್ ಸಿ ಘಟಕದ ವತಿಯಿಂದ ಯೋಗ ತರಭೇತಿ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಬಿಜೂರು ಆಗಮಿಸಿದ್ದರು. ಯೋಗ ಎಂದರೆ ಕೇವಲ ಆಸನಗಳಲ್ಲ, ಅದಕ್ಕೂ ಹೊರತಾಗಿ ನಾವು ಪಾಲಿಸಬೇಕಾದ ನಿಯಮಗಳನ್ನು ವಿವರವಾಗಿ ತಿಳಿಸಿಕೊಟ್ಟಿದ್ದಲ್ಲದೆ ದಿನನಿತ್ಯ ಮಾಡಬಹುದಾದ ಕೆಲವು ಸರಳ […]
ಎಂ ಸಿ ಎನ್ ನಲ್ಲಿ ವಿಶ್ವ ದಾದಿಯರ ದಿನಾಚರಣೆ
ಕುಂದಾಪುರ (ಮೇ,16): ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲ್ಪಡುವ ವಿಶ್ವ ದಾದಿಯರ ದಿನವನ್ನು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಸಭಾಂಗಣದಲ್ಲಿ ಮೇ.13 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದರ ಪ್ರಯುಕ್ತ ಬಿ. ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ‘ಬೇಸಿಕ್ ಲೈಫ್ ಸಪೋರ್ಟ್ ‘(ಬಿ. ಎಲ್.ಎಸ್) ತರಬೇತಿಯನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀಯುತ ಅನೀಶ್ ಐಸಾಕ್ ರವರು (ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸರ್ಟಿಫೈಡ್ ಟ್ರೈನರ್) ಫ್ಲಾರೆನ್ಸ್ ನೈಟಿಂಗೇಲ್ […]
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ಕ್ರಿಯೇಟಿವ್ ಆರ್ಟ್ಸ್ ವಿಷಯದ ಬಗ್ಗೆ ಕಾರ್ಯಾಗಾರ
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೇಸಿಕ್ ಸೈನ್ಸ್ ವಿಭಾಗದ ಇಂಡಕ್ಷನ್ ಪ್ರೋಗ್ರಾಂ ವತಿಯಿಂದ ಕ್ರಿಯೇಟಿವ್ ಆರ್ಟ್ಸ್ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಚಿತ್ತಾರ ಹಳ್ಳಿಹೊಳೆ ತಂಡದ ರಾಜೇಂದ್ರ ಹಳ್ಳಿಹೊಳೆ, ಗಿರೀಶ್ ವಕ್ವಾಡಿ ಹಾಗೂ ರಾಘವೇಂದ್ರ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಭಾವಚಿತ್ರ ರಚನೆ, ವರ್ಲಿ ಆರ್ಟ್ ಹಾಗೂ ಮುಖವಾಡ ತಯಾರಿಕೆ ಎಂಬ ಮೂರು ವಿಭಾಗಗಳಲ್ಲಿ ಪ್ರತ್ಯೇಕ ತರಬೇತಿಯನ್ನು ನೀಡಲಾಯಿತು. ಶ್ರೀ ರಾಜೇಂದ್ರ ಅವರು ವರ್ಲಿ ಆರ್ಟ್ ಕಲೆಯನ್ನು ಪರಿಚಯಿಸಿ […]
ಯುವ ರೆಡ್ ಕ್ರಾಸ್ ಘಟಕ : ರಕ್ತ ನಿಧಿ ಕೇಂದ್ರಕ್ಕೆ ಭೇಟಿ
ಕುಂದಾಪುರ (ಮಾ,14): ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಕಾರದೊಂದಿಗೆ ಕುಂದಾಪುರದ ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಿರಿಯ ತಾಂತ್ರಿಕ ಮೇಲ್ವಿಚಾರಕರಾದ ಸುಜಯ ಮತ್ತು ವೀರೇಂದ್ರ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸುತ್ತಾ, ರಕ್ತ ಸಂಗ್ರಹಣೆ, ಪರಿಷ್ಕರಣೆ, ಸಂಗ್ರಹಿಸಿದ ರಕ್ತದ ವಿವಿಧ ಪ್ರಕ್ರಿಯೆಯ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಭಾರತೀಯ […]
ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆ:ಫೆಬ್ರವರಿ 2ರಂದು ಶಾಲಾ ವಾರ್ಷಿಕೋತ್ಸವ
ಮೂಡ್ಲಕಟ್ಟೆ( ಜ,30): ಇಲ್ಲಿನ ವಿದ್ಯಾ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ಫೆಬ್ರವರಿ 2ರಂದು ಶಾಲಾ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯವರಾಗಿ ಬರಹಗಾರ್ತಿ ಮತ್ತು ವಾಗ್ಮಿ ಶ್ರೀಮತಿ ಪೂರ್ಣಿಮಾ ಭಟ್ ಕಮಲಶಿಲೆ, ಕಾರ್ಯಕ್ರಮದ ಅಧ್ಯಕ್ಷರಾಗಿ ಐಎಂಜೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಸಿದ್ದಾರ್ಥ್ ಜೆ ಶೆಟ್ಟಿಯವರು ಉಪಸ್ಥಿತರಿಲಿದ್ದಾರೆ . ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿರುವುದು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೂಡ್ಲಕಟ್ಟೆ ಎಂ ಐ ಟಿ : ಅಪರಾಧ ತಡೆ ಮಾಸಾಚರಣೆ
ಕುಂದಾಪುರ(ಜ,20): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ, ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಕುಂದಾಪುರ ರೂರಲ್ ಪೊಲೀಸ್ ಸ್ಟೇಷನ್ ನ ಪಿ ಎಸ್ ಐ ಆಗಿರುವ ಶ್ರೀ ಪವನ್ ನಾಯಕ್ ಹಾಗೂ ಪಿ ಎಸ್ ಐ ಶ್ರೀ ನೂತನ್ ಡಿ ಇ ಅವರು ಆಗಮಿಸಿದ್ದರು. ಪವನ್ ನಾಯಕ್ ಅವರು ಮಾತನಾಡಿ […]
ವಿದ್ಯಾ ಅಕಾಡೆಮಿ ಶಾಲೆ ಮೂಡ್ಲಕಟ್ಟೆ: ವಾರ್ಷಿಕ ಕ್ರೀಡೋತ್ಸವ
ಕುಂದಾಪುರ(ಡಿ,15): ವಿದ್ಯಾ ಅಕಾಡೆಮಿ ಶಾಲೆ, ಮೂಡ್ಲಕಟ್ಟೆ ಕುಂದಾಪುರದಲ್ಲಿ ವಾರ್ಷಿಕ ಕ್ರೀಡೋತ್ಸವ ಇತ್ತೀಚೆಗೆ ನಡೆಯಿತು. ಜೆಸಿಐ ಕುಂದಾಪುರ ಘಟಕದ ಅಧ್ಯಕ್ಷರಾದ ಡಾ. ಸೋನಿ ಡಿ’ಕೋಸ್ಟ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳ ಪೋಷಕರನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಲ್ಲಿ ಹಾಗೂ ದೇವರಲ್ಲಿ ಶ್ರದ್ಧೆ ಯಿರಬೇಕು ಹಾಗೂ ಮಕ್ಕಳ ಪ್ರತಿಯೊಂದು ವಿಷಯದಲ್ಲಿಯೂ ಶಿಸ್ತು ಬೆಳೆಸುವುದು ನಮ್ಮ ಕರ್ತವ್ಯ. ಪ್ರತಿಯೊಂದು ಮಗುವು ಭಗವಂತನ ಅಮೂಲ್ಯ ಸೃಷ್ಟಿ,ನಿಮ್ಮ ಮಗುವನ್ನು ಇನ್ನೊಂದು ಮಗುವಿಗೆ ಹೋಲಿಸಬೇಡಿ” ಎಂದರು. ಮಕ್ಕಳ ಪಥಸಂಚಲ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಪೋಷಕರಿಗೂ ಸ್ಪರ್ಧೆಗಳನ್ನುಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಐ ಎಂ ಜೆ ವಿದ್ಯಾ […]