ಗಂಗೊಳ್ಳಿ (ನ,17):ಸಾಹಿತ್ಯ ಗಂಗಾ ಧಾರವಾಡ ವತಿಯಿಂದ ನಡೆದ “ಕನ್ನಡ ಪ್ರಜ್ಞೆ” ಮತ್ತು “ಕನ್ನಡದ ನಾಳೆಗಳು” ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಕುಂದಾಪುರದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಸಾಹಿತ್ಯ ,ಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ನರೇಂದ್ರ ಎಸ್ ಗಂಗೊಳ್ಳಿಯವರು ಬಹುಮುಖ ಪ್ರತಿಭಾ ಸoಪನ್ನರಾಗಿದ್ದು ,ಇತ್ತೀಚೆಗೆ ಇವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ನೇಷನ್ […]
Tag: narendra gangolli
ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ
ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ಮತ್ತು ಸಾಹಿತ್ಯ ತಂಗುದಾಣ ಗಂಗೊಳ್ಳಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯದ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ”ಮಹಿಳಾ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ನಮ್ಮ ಅರಿವು” ವಿಷಯದ ಕುರಿತಂತೆ ವಿದ್ಯಾರ್ಥಿಗಳು ಎ 4 ಅಳತೆಯ ಕಾಗದದಲ್ಲಿ ನಾಲ್ಕು ಪುಟ ಗಳಿಗೆ ಮೀರದಂತೆ ಕಾಗದದ ಒಂದೇ ಮಗ್ಗುಲಿನಲ್ಲಿ ಕನ್ನಡದ ಹಸ್ತಾಕ್ಷರದಲ್ಲಿ ಬರೆದು ಕಾಲೇಜಿನ ಮುಖ್ಯಸ್ಥರ ದೃಢೀಕರಣದೊಂದಿಗೆ 05-12- 2022 ರ […]
ವ್ಯಕ್ತಿಯ ಸಂಸ್ಕಾರದಿಂದ ವ್ಯವಹಾರದ ಉನ್ನತೀಕರಣ – ನರೇಂದ್ರ ಎಸ್ .ಗಂಗೊಳ್ಳಿ
ಗಂಗೊಳ್ಳಿ(ನ,8): ಸಮಾಜದ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುವುದು ನಿಜವಾದ ಬದುಕಿನ ಸಾರ್ಥಕತೆ. ವ್ಯಕ್ತಿಯ ಸಂಸ್ಕಾರ ಎನ್ನುವುದು ಅವನ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಯುವ ಬರಹಗಾರ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ವೆಂಕಟೇಶ ಕೃಪಾ ಟ್ರೇಡರ್ಸ್ ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದೀಪಾವಳಿ ಧಮಾಕ ವಿಶೇಷ ಕೊಡುಗೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. […]
ಟೆನ್ನಿ ಕಾಯ್ಟ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಿಶನ್ ಮತ್ತು ಮಹಿಮಾ
ಗಂಗೊಳ್ಳಿ (ನ,6): ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಟೆನ್ನಿ ಕಾಯ್ಟ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಿಶನ್ ಡಿ ಪೂಜಾರಿ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಹಿಮಾ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆ ಆಗಿರುತ್ತಾರೆ. ಇವರನ್ನು ಕಾಲೇಜಿನ ಬಳಗ ಮತ್ತು […]
ಕನ್ನಡ ಮಾಧ್ಯಮದ ಓದಿನ ಬಗ್ಗೆ ಕೀಳರಿಮೆ ಬೇಡ – ನರೇಂದ್ರ ಎಸ್ ಗಂಗೊಳ್ಳಿ
ಗಂಗೊಳ್ಳಿ(ನ,2): ಕನ್ನಡ ಮಾಧ್ಯಮದ ಓದಿನ ಬಗ್ಗೆ ಯಾವತ್ತೂ ಕೀಳರಿಮೆಯನ್ನು ಬೆಳೆಸಿಕೊಳ್ಳದಿರಿ. ಸಾಧನೆ ಮಾಡುವ ಛಲ ಮತ್ತು ಪರಿಶ್ರಮ ಇದ್ದಾಗ ಯಶಸ್ಸು ಗಳಿಸಲು ಭಾಷಾ ಮಾಧ್ಯಮ ಯಾವತ್ತೂ ಅಡ್ಡಿಯಾಗಲಾರದು ಎಂದು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಬೆಂಗಳೂರು ಹೋಟೆಲ್ ನ್ಯೂಸ್ ಮಾಸಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಗಂಗೊಳ್ಳಿಯಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ […]
ಗೂಡುದೀಪ ಸ್ಪರ್ಧೆ ಬಹುಮಾನ ವಿತರಣೆ
ಗಂಗೊಳ್ಳಿ(ನ,2): ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಗೂಡು ದೀಪ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ನಟರಾಜ, ದ್ವಿತೀಯ ಸ್ಥಾನವನ್ನು ನಾಗಲಕ್ಷ್ಮಿ ಜಿ.ಎನ್ ಮತ್ತು ತೃತೀಯ ಸ್ಥಾನವನ್ನು ನಿಮಿಷ ಪಡೆದರು. ಡಾ. ಬಿ ಆರ್ ಅಂಬೇಡ್ಕರ್ ಯುವಕ ಮಂಡಲದ ಗೌರವಾಧ್ಯಕ್ಷರಾದ ಭಾಸ್ಕರ್ ಎಚ್ ಜಿ ಬಹುಮಾನವನ್ನು ವಿತರಿಸಿದರು.
ಗಂಗೊಳ್ಳಿ: ರೋಟರಿ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಗಂಗೊಳ್ಳಿ (ನ,2): ರೋಟರಿ ಕ್ಲಬ್ ಗಂಗೊಳ್ಳಿ ,ರೋಟರಾಕ್ಟ್ ಕ್ಲಬ್ ಗಂಗೊಳ್ಳಿ ಹಾಗೂ ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಇದರ ಸಂಯುಕ್ತ ಆಶ್ರಯದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಲೈಬ್ರರಿ ಹಾಲ್ ನಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೊಳ್ಳಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಸುಗುಣ ಆರ್ ಕೆ ವಹಿಸಿದ್ದರು. ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಡಾ. ಬಿ ಬಿ ಪ್ರಥಮ ದರ್ಜೆ ಕಾಲೇಜಿನ ಉಪ […]
ಗಂಗೊಳ್ಳಿ: ಜಿಲ್ಲಾ ಮಟ್ಟದ ಪುರುಷರ ಶೆಟಲ್ ಬ್ಯಾಡ್ಮಿಂಟನ್ ಉದ್ಘಾಟನೆ
ಗಂಗೊಳ್ಳಿ( ಅ,31): ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವಲ್ಲಿ ಪ್ರತಿಯೊಬ್ಬರು ಮನಸ್ಸು ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ತಮ್ಮನ್ನು ಹೆಚ್ಚು ಮುತುವರ್ಜಿಯಿಂದ ತೊಡಗಿಸಿಕೊಳ್ಳಬೇಕಿದೆ ಎಂದು ಲಿಫ್ಟ್ ನ್ ಒಲಿವೆರಾ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಂಗಣದಲ್ಲಿ ಎಸ್ಎಂಎಲ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಮಟ್ಟದ ಪುರುಷರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಎಸ್ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. […]
ರಾಜ್ಯಮಟ್ಟದ ಭಾವ ಬರಹ ಸ್ಪರ್ಧೆ
ಕುಂದಾಪುರ (ಅ,27): ಸಾಹಿತ್ಯ ತಂಗುದಾಣ ಬಳಗ ರಾಜ್ಯಮಟ್ಟದ ಭಾವ ಬರಹ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತರು ತಮ್ಮ ಜೀವನಕ್ಕೆ ಸಂಬಂಧಿಸಿದ ಯಾವುದೇ ವಸ್ತು ವಿಚಾರ ವ್ಯಕ್ತಿ ಸಂಬಂಧ ಕನಸು ಸ್ಥಳ ಸನ್ನಿವೇಶ ಇತ್ಯಾದಿ ವಿಷಯಗಳ ಬಗೆಗೆ ಭಾವನೆಗಳನ್ನು ಪ್ರಕಟಪಡಿಸುವಂತಹ ಬರಹವನ್ನು ಬರೆಯಬಹುದು. ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನಗಳ ಜೊತೆಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಬರಹಗಳನ್ನು ವಾಟ್ಸಪ್ ಮೂಲಕ 9242127307 ಅಥವಾ ಇಮೇಲ್ ಮೂಲಕ sahithyathangudana@gmail.com ಗೆ ಕಳುಹಿಸಬಹುದಾಗಿದೆ. ಬರಹವನ್ನು ಕಳಿಸಲು ಕೊನೆಯ ದಿನಾಂಕ […]
ಗಂಗೊಳ್ಳಿಯಲ್ಲಿ ಗೂಡುದೀಪ ಸ್ಪರ್ಧೆ
ಗಂಗೊಳ್ಳಿ(ಅ,19): ಡಾ.ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಗೂಡುದೀಪ ಸ್ಪರ್ಧೆಯನ್ನು ಅಕ್ಟೋಬರ್ 24 ರಂದು ಹಮ್ಮಿಕೊಳ್ಳಲಾಗಿದೆ. ಪ್ರಥಮ ದ್ವಿತೀಯ ಮತ್ತು ತೃತೀಯ ನಗದು ಬಹುಮಾನಗಳು ಇವೆ. ಸ್ವಂತ ರಚನೆಯ ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿದ್ದು ಅಕ್ಟೋಬರ್ 23ರ ಒಳಗೆ ಸ್ಪರ್ಧಾಳುಗಳು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 7406196138, 9481751521, 9535633230 9632867885 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ. ವರದಿ : ನರೇಂದ್ರ […]










