ಗಂಗೊಳ್ಳಿ (ನ,17):ಸಾಹಿತ್ಯ ಗಂಗಾ ಧಾರವಾಡ ವತಿಯಿಂದ ನಡೆದ “ಕನ್ನಡ ಪ್ರಜ್ಞೆ” ಮತ್ತು “ಕನ್ನಡದ ನಾಳೆಗಳು” ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಕುಂದಾಪುರದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.
ಸಾಹಿತ್ಯ ,ಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ನರೇಂದ್ರ ಎಸ್ ಗಂಗೊಳ್ಳಿಯವರು ಬಹುಮುಖ ಪ್ರತಿಭಾ ಸoಪನ್ನರಾಗಿದ್ದು ,ಇತ್ತೀಚೆಗೆ ಇವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ನೇಷನ್ ಬಿಲ್ಡರ್ ಅವಾರ್ಡ್ ಪಡೆದಿದ್ದಾರೆ.