ಗಂಗೊಳ್ಳಿ(ಫೆ.9) : ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ಇತ್ತೀಚೆಗೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಗಂಗೊಳ್ಳಿಯ ಹುಣಸೆ ಹಿತ್ತಲುವಿನ ನಿವಾಸಿಯೊಬ್ಬರಿಗೆ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವೀರೇಶ್ವರ ದೇವಸ್ಥಾನದ ಬಳಿಯಲ್ಲಿನ ಮಹಿಳೆಯೊಬ್ಬರಿಗೆ ಆರ್ಥಿಕ ನೆರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ. ಗೋಪಾಲ ಪೂಜಾರಿ, ಉಪಾಧ್ಯಕ್ಷ ಜಿ. ಕೆ.ವೆಂಕಟೇಶ ಕೊಡೇರಿ ಮನೆ, ಕಾರ್ಯದರ್ಶಿ ಜಿ. ಆರ್ .ಲಕ್ಷ್ಮಣ ಬಿಲ್ಲವ, ಕೋಶಾಧಿಕಾರಿ ಮಂಜುರಾಜ್ ಗಂಗೊಳ್ಳಿ ಉಪಸ್ಥಿತರಿದ್ದರು ವರದಿ : […]
Tag: narendra gangolli
ಸಂವಿಧಾನದ ಅರಿವು ಅಗತ್ಯ : ನರೇಂದ್ರ ಎಸ್ ಗಂಗೊಳ್ಳಿ
ಗಂಗೊಳ್ಳಿ (ಜ.30): ನಮ್ಮ ಸಂವಿಧಾನದ ಉನ್ನತ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಅದನ್ನು ಅಧ್ಯಯನ ಮಾಡುವಂತಹ ಕೌಶಲ್ಯವನ್ನು ನಾವು ಬೆಳೆಸಿಕೊಳ್ಳಬೇಕಿದೆ. ಪೂರ್ವಾಪರಗಳನ್ನು ಅರಿಯದೆ ಎಲ್ಲ ವಿಚಾರಗಳಿಗೂ ಅನಗತ್ಯವಾಗಿ ಸಂವಿಧಾನವನ್ನು ತಳುಕು ಹಾಕುವ ಕೆಟ್ಟ ಪ್ರವೃತ್ತಿ ನಮ್ಮಲ್ಲಿ ಕೊನೆಗಾಣಬೇಕಿದೆ ಎಂದು ಯುವ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಗುಜ್ಜಾಡಿ ಗೋಪಾಲನಾಯಕ ಇಂಡೋರ್ ಸ್ಟೇಡಿಯಂನಲ್ಲಿ ಗಂಗೊಳ್ಳಿ ರೋಟರಾಕ್ಟ್ ಕ್ಲಬ್ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ […]
ಗಂಗೊಳ್ಳಿ: ಸರಸ್ವತಿ ವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ
ಗಂಗೊಳ್ಳಿ(ಜ.20): ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿರುವಂಥವು. ಅವರ ಜೀವನವನ್ನು ಅಭ್ಯಸಿಸುವುದರ ಜೊತೆಗೆ ಅಂತಹ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಿದಾಗ ಜೀವನವು ಸಾರ್ಥಕವಾಗಲು ಸಾಧ್ಯ ಎಂದು ಜೆ.ಸಿ ರಾಷ್ಟ್ರೀಯ ತರಬೇತುದಾರರಾದ ಕೆ.ಕೆ ಶಿವರಾಮ ಅಭಿಪ್ರಾಯ ಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. […]
ನರೇಂದ್ರ ಎಸ್ ಗಂಗೊಳ್ಳಿಗೆ ಸನ್ಮಾನ
ಗಂಗೊಳ್ಳಿ(ಜ.15 ): ಯುವ ಲೇಖಕ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ತಲ್ಲೂರಿನ ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ದೇವಾಡಿಗ ಉಪ್ಪಿನಕುದ್ರು ಇವರು ವೈಯಕ್ತಿಕ ನೆಲೆಯಲ್ಲಿ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಸನ್ಮಾನಿಸಿದರು. ಸನ್ಮಾನಿಸಿ ಮಾತನಾಡಿದ ಅವರು ನಮ್ಮ ನಡುವಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸುವ ಕಾರ್ಯ ನಿರಂತರವಾಗಿ ಆಗಬೇಕಿದೆ. ಆ ಮೂಲಕ ಇಂತಹ ಕಾರ್ಯಗಳು ಮತ್ತಷ್ಟು ಪ್ರತಿಭೆಗಳ ಬೆಳವಣಿಗೆಗೆ […]
ಸ್ಯಾಕ್ಸೋಫೋನ್ ವಾದಕ ಬಾಲಪ್ರತಿಭೆ ಸಂಜಿತ್ ಎಂ.ದೇವಾಡಿಗರಿಗೆ ಸನ್ಮಾನ
ಗಂಗೊಳ್ಳಿ(ಜ.5):ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ರೋಟರ್ಯಾಕ್ಟ್ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಾಲಪ್ರತಿಭೆ ಸಂಜಿತ್ ಎಂ ದೇವಾಡಿಗ ಇವರನ್ನು ಗಂಗೊಳ್ಳಿಯ ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಎಂ. ಜಿ, ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ಅರ್ಚಕರಾದ ರಘುನಾಥ ಪೂಜಾರಿ ಕಳಿಹಿತ್ಲು, ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಅಮೀಕ್ಷಾ ಡಿ ನಾಯ್ಕ್,ಸದಸ್ಯರಾದ ದೀಕ್ಷಾ, ಶ್ರೇಯಾ, ತ್ರಿಷಾ, ಪೂಜಾ, ಸುಷ್ಮಾ, […]
ಪಾರ್ವತಿ ಜಿ ಐತಾಳ್ ಸಾಹಿತ್ಯ ಸಾಧನೆ ತೆರೆದಿಡುವ ‘ಸುರಗಂಗೆ’
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಅನುವಾದ ಕ್ಷೇತ್ರದಲ್ಲಿ ಅಮೂಲ್ಯ ಕೃತಿ ರಚನೆಗಳ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿರುವ ಕರಾವಳಿಯ ಸೃಜನಶೀಲ ಬಹುಭಾಷಾ ಲೇಖಕಿ ಪಾರ್ವತಿ ಜಿ. ಐತಾಳರು ಕನ್ನಡ ಸಾಹಿತ್ಯ ಲೋಕದ ಅಪರೂಪದ ಪ್ರತಿಭೆ. ಕನ್ನಡ, ಇಂಗ್ಲೀಷ್ ,ಹಿಂದಿ ,ಮಲಯಾಳಂ ಮತ್ತು ತುಳು ಹೀಗೆ ಐದು ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿ ಆಯಾ ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದು ಮಾತ್ರವಲ್ಲದೆ ಆಯಾ ಭಾಷೆಗಳ ನಡುವೆ ಅನುವಾದದ ಕೆಲಸವನ್ನೂ ಮಾಡುತ್ತ,ವಿವಿಧ […]
ತ್ರಾಸಿ: ಪುಟ್ಟ ಹುಡುಗಿ ಸೋನಿಯಾಳ ವೈದ್ಯಕೀಯ ಚಿಕಿತ್ಸೆಗೆ ಬೇಕಿದೆ ಆರ್ಥಿಕ ನೆರವು
ತ್ರಾಸಿ( ಡಿ.21) : ತ್ರಾಸಿ ಗ್ರಾಮದ ನಿವಾಸಿಯಾಗಿರುವ ಕೋದಂಡರಾಮರವರ ಮಗಳಾದ ಸೋನಿ ಶೆಟ್ಟಿಗಾರ್ (ಹತ್ತು ವರುಷ) ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದು , ಮೆದುಳಿನ ಗಡ್ಡೆ (ಬ್ರೈನ್ ಟ್ಯೂಮರ್)ಯ ಖಾಯಿಲೆಗೆ ಒಳಗಾಗಿದ್ದು ಹಲವು ದಾನಿಗಳ ಸಹಕಾರದೊಂದಿಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿತ್ತು. ಆ ಬಳಿಕ ಸತತವಾಗಿ ಆಕೆಗೆ ಔಷಧೋಪಚಾರ ನಡೆಯುತ್ತಿದೆ. ಇದೀಗ ಆಕೆಯ ದೇಹದಲ್ಲಿ ನರಗಳಿಗೆ ಸಂಬಂದಿಸಿದ ದ ಹಾರ್ಮೊನುಗಳ ಬೆಳವಣಿಗೆಯು ಸೂಕ್ತವಾಗಿ […]
ಕಾಯಿದೆಗಳ ಅರಿವು ಅಗತ್ಯ -ನರೇಂದ್ರ ಎಸ್ ಗಂಗೊಳ್ಳಿ
ಗಂಗೊಳ್ಳಿ(ಡಿ,21): ದೇಶದ ನಾಗರಿಕರಾಗಿ ನಮಗೆ ಲಭ್ಯವಿರುವ ಹಕ್ಕುಗಳ ಅರಿವನ್ನು ಹೊಂದಿರಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ. ಮಾಹಿತಿ ಹಕ್ಕು ಕಾಯಿದೆ ಮತ್ತು ಕೇಂದ್ರ ವಿಚಕ್ಷಣಾ ಆಯೋಗವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ, ಖಂಡಿತ ಭ್ರಷ್ಟಚಾರ ನಿರ್ಮೂಲನೆ ಸಾಧ್ಯ ಎಂದು ಯುವ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಆರ್. ಟಿ. ಐ ಮತ್ತು ಸಿವಿಸಿ ಕುರಿತಾಗಿನ ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮಾಹಿತಿ […]
ಗಂಗೊಳ್ಳಿ: ಡಾ. ಬಿ.ಆರ್ ಅಂಬೇಡ್ಕರ್ ರ ವರ ಪರಿನಿರ್ವಾಣ ದಿನಾಚರಣೆ
ಗಂಗೊಳ್ಳಿ(ಡಿ.13) : ಡಾ. ಅಂಬೇಡ್ಕರ್ ಯುವಕ ಮಂಡಲ (ರಿ) ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಳಿ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಮೇಲ್ ಗಂಗೊಳ್ಳಿಯ ಅಂಬೇಡ್ಕರ್ ಭವನದಲ್ಲಿ ಬಿ.ಆರ್ ಅಂಬೇಡ್ಕರ್ ರ ವರ 65ನೇ ವರುಷದ ಪರಿನಿರ್ವಾಣ ದಿನಾಚರಣೆ ನಡೆಯಿತು. ಯುವಕ ಮಂಡಲದ ಉಪಾಧ್ಯಕ್ಷ ಕಿರಣ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಭಾಸ್ಕರ್ ಹೆಚ್. ಜಿ ಮಾತನಾಡಿ ಅಂಬೇಡ್ಕರ್ ಅವರ ಜೀವನ ಶೈಲಿ […]
ಆಶಾ ಕಾರ್ಯಕರ್ತೆ ಕಲ್ಪನಾ ಜಿ. ಯವರಿಗೆ ಸನ್ಮಾನ
ಗಂಗೊಳ್ಳಿ (ಡಿ.6): ಕಳೆದ 12 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಮತ್ತು ಕೋವಿಡ್ ಸಮಯದಲ್ಲಿ ನಿರಂತರವಾಗಿ ಸೇವಾ ಮನೋಭಾವನೆಯೊಂದಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಉತ್ತಮವಾದ ನಿರ್ವಹಣೆಯನ್ನು ತೋರಿದ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಸುಗಮಕಾರರಾದ ಕಲ್ಪನಾ ಜಿ ಆರ್. ಪ್ರಭಾಕರ್ ಅವರನ್ನು ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಕಾರ್ಟೂನು ಹಬ್ಬದಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ, ಮನೋವೈದ್ಯ ಡಾ. ಪಿ ವಿ […]










