Views: 562
ಉಳಿದದ್ದು ನೆನಪು ಮಾತ್ರ,ಉಳಿಯದ ಅವಳ ಪ್ರೀತಿಯಲಿ.ಉಳಿದದ್ದು ನೋವು ಮಾತ್ರ,ಮರೆಯದ ಅವಳ ನೆನೆಪಿನಲ್ಲಿ. ಖಾಲಿ ಕಿಸೆಯಿದ್ದರೂ ಆಗ,ನೀಲಿ ಬಾನೆತ್ತರದ ಕನಸುಗಳು.ಜಾಲಿ ಮುಳ್ಳುಗಳೀಗ ನೆನಪು,ಕಿಸೆತುಂಬಿದ್ದರೂ ಮನಸು ಬರಿದು. ಎಲ್ಲಿ ಮರೆಯಾಗುವೆಯೋ ನೀನುಹಂಚಿಕೊಂಡರೆ ಪ್ರೀತಿ.ಹೇಳಲಾಗದ ಧೈರ್ಯ,ಕಳವಳದ ಮನಸ್ಸಿಗೆ ಒಂದೇ ಭೀತಿ. ಅಂದು ನನ್ನದು ಬರೀ ಮೌನ.ಆಡಬೇಕಿದ್ದ ಮಾತುಗಳುಇಂದಾಗುತ್ತಿದೆ ಕವನ.ಕ್ಷಮಿಸಿಬಿಡು ನನ್ನನ್ನ. – ನಾಗು