ಅದ್ಯಾವ ಸೀಮೆಯ ಮಾಯಗಾತಿ ನೀನು..ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ..ಸುಮ್ಮನಿರಲು ಈ ಹೃದಯ ಬಿಡಬೇಕಲ್ಲ.. ಅರೇ ! ಇದೇನು ನಿನ್ನ ಹುಚ್ಚಾಟ ಅನ್ನುವುದು ನೀನುನೀನಿಲ್ಲದೆ ಬದುಕೆನು ನಾನು..ನನಗೆ ನೀನೆ ವ್ಯಾಕ್ಸಿನ್ನು… ಬಿಸಿರಕ್ತ ಹರಿಯುವ ಈ ದೇಹಕ್ಕೆ ..ಅಣು ಕಣದಿ ನಿನ್ನದೆ ಛಾಯೆ..ಈ ನನ್ನ ಬದುಕೆಲ್ಲಾ ನಿನ್ನದೆಯಾ ಮಾಯೆ. ನಿನ್ನ ಪ್ರೀತಿ ಸಂಜೆಯಲಿ ಗುಂಯ್ಗುಡುವ ಸೊಳ್ಳೆಯಂತೆ..ಮಧ್ಯರಾತ್ರಿ ಕಚ್ಚುವ ತಿಗಣೆಯಂತೆಮುಂಜಾನೆಯಲ್ಲಿ ಮುದುಡುವ ಚಳಿಯಂತೆ..ಮಧ್ಯಾಹ್ನದಲ್ಲಿ ನೆತ್ತಿ ಸುಡುವ ಬಿಸಿಲಂತೆ.ಅದಕ್ಕೆ ನಾ ಹೇಳುವೆ ನೀ ನನ್ನಲೊವಿನವಳು..ಮುದ್ದು ಲವ್ ಯೂ…. […]
Tag: raghavendra harman
“ನೆಲೆ ಕಾಣದ ಬಂಡಿ”
ಬಹಳ ವರ್ಷದ ಹಿಂದೆ ಆ ಪುಟ್ಟ ಹಳ್ಳಿಯ ಎಲ್ಲ ಮನೆಯಲ್ಲೂ ಬಡತನವು ತಾಂಡವ ನರ್ತನ ವಾಡುತ್ತಿತ್ತು. ವಸಂತಗಳು ಕಳೆಯುತ್ತಾ ಹೋದಂತೆ ಆ ಹಳ್ಳಿಯಲ್ಲಿ ಹಲವಾರು ಸುಧಾರಣೆ ಕಾಣ ತೊಡಗಿದವು. ಇದರ ಪರಿಣಾಮ ಊರಿನ ಜನತೆ ಬೇರೆ ಬೇರೆ ಊರುಗಳಿಗೆ ತೆರಳಿ ಸ್ವಂತ ಉದ್ಯಮ ಪ್ರಾರಂಭಿಸಿ ತಕ್ಕಮಟ್ಟಿಗೆ ಬದುಕನ್ನು ಸುಧಾರಿಸಿಕೊಂಡಿದ್ದರು. ಸಾಲ ಕಡ ಮಾಡಿ ಅಕ್ಕ ತಂಗಿಯರ ಮದುವೆ ಮತ್ತು ಮನೆ ಕಟ್ಟಿಕೊಂಡು ಮಾಡಿದ ಸಾಲ ತೀರಿಸಿ ಎಲ್ಲವೂ ಒಂದು ಹಂತಕ್ಕೆ […]
ಮಕ್ಕಳಿಗೆ ಚಮಚ ಕೊಡಿ ಸಾಕು… ಚಿನ್ನದ ಚಮಚ ಬೇಡ
ಅಂದು ಗೋಪಾಲರಾಯರ ಪಾಲಿಗೆ ವಿಶೇಷ ದಿನವಾಗಿತ್ತು. ಅಂದು ಅವರಿಗೆ 72 ವರ್ಷವಾಗಿತ್ತು. ಬ್ಯಾಂಕಿಗೆ ಓಡೋಡಿ ಹೋಗಿದ್ದರು. ಅಂದು ಅವರ 25 ವರ್ಷದ ಕನಸು ನನಸಾಗುವುದರಲ್ಲಿತ್ತು. ಆ ದಿನಕ್ಕಾಗಿಯೇ ಅವರು 25 ವರ್ಷ ಕಾದಿದ್ದರು. ಸರಕಾರಿ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ, ನಿವೃತ್ತಿಯ ನಂತರ ಸಮೀಪದ ದೇವಸ್ಥಾನದಲ್ಲಿ ಮೇಲ್ವಿಚಾರಕನಾಗಿ ತಾನು ಸಂಪಾದಿಸಿದ ಹಣದಲ್ಲಿ ಪ್ರತಿ ತಿಂಗಳು ಒಟ್ಟು 25 ವರ್ಷ ಅಂದರೆ 300 ತಿಂಗಳು 4000 ರೂ. ಜಮೆ ಮಾಡಲು ಅದೆಷ್ಟೊ ಕಷ್ಟ ಪಟ್ಟಿದ್ದರು. […]
ಅಕ್ಕ ಎರಡು ಸೇರು ಅಕ್ಕಿ ಇದ್ರೆ ಕೊಡಿ ಅಕ್ಕ……
ನಾನು ಬೆಂಗಳೂರಿನಿಂದ ಬಂದು ಸುಮಾರು ಹತ್ತು ದಿನ ಆಗಿದೆ. ಮನೆಯ ಮಹಡಿ ಮೇಲಿನ ಒಂದು ಕೋಣೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದೇನೆ. (Covid ಇಲ್ಲ ಆದರೂ ನಮ್ಮ ಜಾಗ್ರತೆ ). ಮನೆಯ ಗೇಟ್ ಹತ್ತಿರ ಒರ್ವ ಮಹಿಳೆಯ ಕೂಗು ಕೇಳಿಸಿತು. ನಮ್ಮ ಮನೆಯ ಎರಡು ನಾಯಿ ಬೌ ಬೌ ಎಂದು ಕೂಗುತ್ತಾ ಆಕೆಯ ಮೇಲೆ ದಾಳಿ ಮಾಡಲು ಮುಂದಾದವು. ನಾನು ಜೋರಾಗಿ ನಾಯಿಗಳನ್ನು ವಾಪಸು ಕರೆದೆ… ಅವು ಸುಮ್ಮನಾದವು.. ಆ ತಾಯಿಯ […]