Views: 341
ಪ್ರವೀಣ ರಾಘವನನ್ನ ಕಂಡವನೆ ‘ನಿಂಗ್ ಮರ್ಯಾದಿ ಇಲ್ಲ್ಯನ, ನಿಮ್ಮಂತರೆಲ್ಲ ನಮ್ಮನಿಗ್ ಬಪ್ಕಾಗ ಅಂದೇಳಿ ಗುತ್ತಿಲ್ಲ್ಯ. ಅಪ್ಪಯ್ಯ ನಿನ್ನೆಯೇ ಹೇಳಿರ್. ನೀನ್ ಒಳಗ್ ಬಂದ್ರ್ ನಾನ್ ಅಪ್ಪಯ್ಯ ನ್ ಕರೀತೆ ಅಷ್ಟೆ’ ಎಂದ. ರಾಘವನಲ್ಲಿ ಕಣ್ಣೀರೊಂದನ್ನು ಬಿಟ್ಟು ಬೇರೇನು ಉಳಿದಿರಲಿಲ್ಲ. ಅಂದು ಇಡೀ ಶಾಲೆಗೆ ಶಾಲೆಯೇ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿತ್ತು. ಶಾಲೆಯ ಸೂರಿನ ಮೇಲೆ, ಊರಿಗೆ ಮುಖಮಾಡಿ ಕಟ್ಟಿರುವ, ಉದ್ದ ಮೂತಿಯ ಧ್ವನಿವರ್ಧಕಗಳು , ಒಮ್ಮೊಮ್ಮೆ ಇಂಪಾದ ಹಾಡುಗಳನ್ನು ಸೂಸಿದರೆ, ಮತ್ತೊಮ್ಮೆ ಯಾವುದೊ […]