ಕುಂದಾಪುರ (ಸೆ,19): ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಇಲ್ಲಿನ ತಿಲಕ್ ಖಾರ್ವಿ 100 ಮೀಟರ್ ರ್ಬ್ರೆಸ್ಟ್ರೋ ಕ್ ನಲ್ಲಿ ಪ್ರಥಮ, 50 ಮೀಟರ್ ಮೀಟರ್ ಬ್ರೆಸ್ಟ್ರೋಕ್ನಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಕಾಲೇಜಿನ ಪ್ರಾಂಶುಪಾಲರು, ಭೋಧಕ ಹಾಗೂ ಭೋದಕೇತರ ವ್ರಂದ ತಿಲಕ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Tag: uday kumar shetty
ಕಾಳಾವರ: ಎಸ್.ಎಸ್.ಎಲ್ .ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ನಿಶಾ ಜೋಗಿಗೆ ಸನ್ಮಾನ
ಕೋಟೇಶ್ವರ (ಜೂ,02): ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿಶಾ ಜೋಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ಹಿನ್ನೆಲೆಯಲ್ಲಿ ಕಾಳಾವರ ಗ್ರಾಮ ಪಂಚಾಯತ್, ಶಾಲಾಭಿವೃದ್ಧಿ ಸಮಿತಿ, ಅಧ್ಯಾಪಕ ವೃಂದ ಮತ್ತು ಗ್ರಾಮಸ್ಥರು ಕಾಳಾವರ ಸಹಭಾಗತ್ವದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಣಾಧಿಕಾರಿ ಕೆ ರಾಜೀವ ಶೆಟ್ಟಿ ಸಾಧಕ ವಿದ್ಯಾರ್ಥಿ ನಿಶಾ ಜೋಗಿಗೆ ಸನ್ಮಾನಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. […]
ಸುಣ್ಣಾರಿ: ವಿವೇಕೋದಯ ಶಾಲೆಗೆ ದಾನಿಗಳ ಕೊಡುಗೆ
ಕೋಟೇಶ್ವರ(ಮೇ,14): ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು. ಶಾಲಾ ಸಂಚಾಲಕರಾದ ಸುಣ್ಣಾರಿ, ಶ್ರೀ ಕಿಶೋರ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 2021-22 ನೇ ಸಾಲಿನ ಆಯವ್ಯಯವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಘುರಾಮ ಶೆಟ್ಟಿ ಸಭೆಯಲ್ಲಿ ಮಂಡಿಸಿದರು.2022-23ನೇ ಸಾಲಿನ ಖರ್ಚು ವೆಚ್ಚಗಳ ಬಗ್ಗೆಐದು ಜನ ಗೌರವ ಶಿಕ್ಷಕರ ಸಂಬಳ, ಶಾಲಾ ವ್ಯಾನ್ ನಿರ್ವಹಣೆ ಅದರ ಬಗ್ಗೆ, ಹಣ ಕ್ರೋಡಿಕರಣ, ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. […]
ಕಟ್ಟೆ ಫ್ರೆಂಡ್ಸ್ ಕಾಳಾವರ ಮಡಿಲಿಗೆ ಕಾಳಾವರ ವನದುರ್ಗಾ ಟ್ರೋಪಿ- 2022
ಕೋಟೇಶ್ವರ (ಏ,23): ವನದುರ್ಗಾ ಯುವಕ ಮಂಡಲ (ರಿ.) ಕಾಳಾವರ ಇವರ ಆಶ್ರಯದಲ್ಲಿ ನಡೆದ 30 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ವನದುರ್ಗಾ ಟ್ರೋಫಿ- 2022 ಯನ್ನು ಪಡೆದು ಜಯಭೇರಿ ಭಾರಿಸಿದೆ. ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವನದುರ್ಗಾದೇವಿ ದೇವಸ್ಥಾನ ಕಾಳಾವರ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಕಾಳಾವರ ವಹಿಸಿದ್ದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆರಾಧ್ಯ ಎಸ್.ಶೆಟ್ಟಿ ಕಾಳಾವರ ಇವರ ಅನುಪಸ್ಥಿತಿಯಲ್ಲಿ ಅವರ […]