ಕುಂದಾಪುರ(ಡಿ,23): ರೋವರ್ಸ ಮತ್ತು ರೇಂಜರ್ಸ್ ಎನ್ನುವುದು ಹೊರಾಂಗಣ ಕೌಶಲ್ಯ ಆಧಾರಿತ ಮತ್ತು ಸಾಹಸ ಚಟುವಟಿಕೆಗಳ ಆಧಾರಿತ ಘಟಕವಾಗಿದ್ದು, ಕಾನೂನು ಪಾಲಿಸುವ ನಾಗರೀಕರಾಗಲು, ಪ್ರಕೃತಿಯ ರಕ್ಷಣೆ, ಮಾನವೀಯತೆಯ ಸೇವೆ ಮೈಗೂಡಿಸಿಕೊಳ್ಳಲು ರೋವರ್ಸ ಮತ್ತು ರೇಂಜರ್ಸ್ ಘಟಕದಿಂದ ಸಾದ್ಯವಿದೆ ಎಂದು ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಶ್ರೀಮತಿ ಜ್ಯೋತಿ ಆಚಾರ್ಯ ಹೇಳಿದರು.
ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರೋವರ್ಸ ಮತ್ತು ರೇಂಜರ್ಸ್ ಘಟಕದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ, ಕೋವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರಾಷ್ಟೀಯ ಶಿಕ್ಷಣ ನೀತಿಯಲ್ಲಿ ರೋವರ್ಸ ಮತ್ತು ರೇಂಜರ್ಸ್ ಘಟಕಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು. ರೋವರ್ಸ ಸ್ಕೌಟ ಲೀಡರ್ ಸತೀಶ್ ಶೆಟ್ಟಿ ಹೆಸ್ಕುತ್ತೂರು ಪ್ರಸ್ತಾವಿಸಿದರು. ರೇಂಜರ್ಸ್ ಲೀಡರ್ ಶ್ರೀಮತಿ ಅರ್ಪಣಾ ಶೆಟ್ಟಿ ಸ್ವಾಗತಿಸಿದರು, ಸ್ವಯಂ ಸೇವಕಿ ಪ್ರತಿನಿಧಿ ಆದರ್ಶ ನಾಯ್ಕ್ ಮತ್ತು ಶಾರದಾ ಉಪಸ್ಥಿತರಿದ್ದರು, ಸ್ವಯಂ ಸೇವಕಿ ಸಿಂಚನಾ ಪರಿಚಯಿಸಿ, ಸಂಜನಾ ವಂದಿಸಿ, ಸಮೃದ್ದಿ ಕಿಣಿ ಕಾರ್ಯಕ್ರಮ ನಿರೂಪಿಸಿದರು.