ಹೆಮ್ಮಾಡಿ(ಆ,15): ಮೊಗವೀರ ಯುವ ಸಂಘಟನೆಯ [ರಿ.] ಉಡುಪಿ ಜಿಲ್ಲೆ,ಹೆಮ್ಮಾಡಿ ಘಟಕ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಉಡುಪಿ ,ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ಸೈನಿಕರಿಗೊಂದು ಗೌರವಾರ್ಪಣೆ ಕಾರ್ಯಕ್ರಮಹಿನ್ನೆಲೆಯಲ್ಲಿ ಹೆಮ್ಮಾಡಿಯ ನಿವ್ರತ್ತ ಯೋಧ ನಾರಾಯಣ ಬಿಲ್ಲವರ ಸ್ವ ಗೃಹಕ್ಕೆ ತೆರಳಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ(ರಿ.), ಕುಂದಾಪುರ ಶಾಖೆಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿ ಯಂಗಡಿ ,ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷರಾದ ಗಣೇಶ್ ಕಾಂಚನ್ ಹಾಲಾಡಿ, ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಲೋಹಿತಾಶ್ವ ಆರ್. ಕುಂದರ್, ಮಾಜಿ ಅಧ್ಯಕ್ಷರಾದ ರಾಜು ಶ್ರೀಯಾನ್ ಗುಜ್ಜಾಡಿ, ಮೊಗವೀರ ಮಹಾಜನ ಸೇವಾ ಸಂಘದ ಸದಸ್ಯರಾದ ಆನಂದ ಮೊಗವೀರ ಬಗ್ವಾಡಿ, ಮಹಿಷಾಸುರಮರ್ದಿನಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷರಾದ ಶ್ಯಾಮಲಾ ಚಂದನ್, ಸದಸ್ಯರಾದ ಸುಮಿತ್ರ ಆನಂದ,ಸುಮತಿ.ಯು., ಘಟಕದ ಕೋಶಾಧಿಕಾರಿ ದಿನೇಶ್ ಕಾಂಚನ್ ಬಾಳಿಕೆರೆ, ಸದಸ್ಯರಾದ ಮಹೇಶ್ ಮೊಗವೀರ ನೆಂಪು, ಗಣೇಶ್ ಬಾಳಿಕೆರೆ,ಜಿಲ್ಲಾ ಸಂಘಟನೆಯ ಸದಸ್ಯರಾದ ಶ್ರೀಧರ್ ಬಿ.ಎನ್ ಉಪಸ್ಥಿತರಿದ್ದರು.
ಹೆಮ್ಮಾಡಿ ಘಟಕದ ಕಾರ್ಯದರ್ಶಿ ಪ್ರವೀಣ್ ಮೊಗವೀರ ಗಂಗೊಳ್ಳಿ ನಿರೂಪಿಸಿದರು.