ಉಡುಪಿ( ಜ,3): ಉಡುಪಿ ತಾಲೂಕು ಶಿರಿಬೀಡು ಪಂಚಾಯತ್ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ದಾಸ ಸೇರಿಗಾರ್ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಅಭಿಯಾನದ ಅಡಿಯಲ್ಲಿ ನಾಮ ಫಲಕ ಅಳವಡಿಕೆ ಕಾರ್ಯಕ್ರಮ ಜನವರಿ .01 ರಂದು ಜರುಗಿತು.
” ಸ್ವರಾಜ್ಯ 75″ ಸಂಘಟನೆಯ 22ನೇ ಮನೆ ಯಲ್ಲಿ ರಾಷ್ಟ್ರೀಯ ಚಿಂತನೆಯ ಲೇಖಕರು ಪ್ರಖರ ವಾಗ್ಮಿಯಾಗಿರುವ ಶ್ರೀ ಪ್ರಕಾಶ್ ಮಲ್ಪೆಯವರೊಂದಿಗೆ ದಾಸ್ ಸೇರಿಗಾರ್ ಒಡನಾಟ ಹೊಂದಿರುವ ಸಂಜೀವ ಸೇರಿಗಾರ್ ಇವರು ನಾಮ ಫಲಕ ಅನಾವರಣ ನೆರವೇರಿಸಿ ಮಾತನಾಡಿದರು.
ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯ ಮೂಲಕ ಸೀತಾರಾಮ ಕೆ. ದೇವಾಡಿಗ ಚಾಲನೆ ನೀಡಿದರು. ರವಿರಾಜ್ ಎಚ್.ಪಿ ಕ.ಸಾ.ಪ ಉಡುಪಿ ತಾಲೂಕು ಅಧ್ಯಕ್ಷರು, ಹಾಗೂ ಲಕ್ಷ್ಮೀಕಾಂತ್ ಬೆಸ್ಕೂರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಿದರು.
ಕಾಯ೯ಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಅಧ್ಯಕ್ಷರಾಗಿ ಎಮ್.ಎಸ್.ಆರ್.ಎಸ್.ಕಾಲೇಜು ಶಿವ೯ ಪ್ರೋ ಶ್ರೀ ಮುರುಗೇಶ .ಟಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಕೊಡುಗೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ ,ಎಮ್.ಎಸ್.ಆರ್ ಎಸ್ ಕಾಲೇಜು ಶಿವ೯ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ , ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ,ಹಸ್ತ ಚಿತ್ತ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕ, ಕುಟುಂಬಸ್ಥರು ,ಗಣೇಶ್ ದೇವಾಡಿಗ ಬಾರಕೂರು,ಪ್ರದೀಪ ದೇವಾಡಿಗ ಬಾರಕೂರು ಗ್ರಾಮಸ್ಥರ ಸಹಕಾರದಿಂದ ಕಾಯ೯ಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ , ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಾದ ಯು.ಶಿವಾನಂದ ಸೇರಿಗಾರ್,ಶ್ರೀ ಮತ್ತಿತ್ತರ ಗಣ್ಯರು ಉಪಸ್ಧಿತರಿದ್ದರು. ಸ್ವರಾಜ್ಯ ೭೫ ಕಾಯ೯ಕ್ರಮ ಸಂಚಾಲಕರು ಆಗಿರುವ ಶ್ರೀ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು . ದಿಶಾಂತ್ ವಂದಿಸಿದರು, ಕುಮಾರಿ ಅನುಷ ಶೆಟ್ಟಿ ಇಡೂರು ನಿರೂಪಿಸಿದರು.