ಕಾರ್ಕಳ ( ನ .26): ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಉಪ ನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಸಹಯೋಗದೊಂದಿಗೆ ನಡೆದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಚ್ಯ ಪ್ರಜ್ಞೆ ಚಿತ್ರಕಲಾ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾದ ಆದಿತ್ಯ ಎನ್. ನಾಯಕ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕಾರ್ಕಳದ ಶ್ರೀ ನಿತ್ಯಾನಂದ […]
Day: November 26, 2024
ಗಂಗೊಳ್ಳಿ: ನ. 28 ರಂದು ಹೆಚ್ ಭಾಸ್ಕರ ಶೆಟ್ಟಿ ಅವರಿಗೆ ಅಭಿಮಾನದ ಸನ್ಮಾನ
ಗಂಗೊಳ್ಳಿ( ನ ,26): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಮತ್ತು ಉತ್ತಮ ಕೃಷಿಕರು ಆಗಿರುವ ಹೊಸಾಡು ಭಾಸ್ಕರ ಶೆಟ್ಟಿ ಇವರಿಗೆ ಗಂಗೊಳ್ಳಿಯ ಸ್ನೇಹಿತರ ಬಳಗದಿಂದ ಅಭಿಮಾನದ ಸನ್ಮಾನ ಕಾರ್ಯಕ್ರಮವು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಮೆಂಬರ್ 28ರ ಗುರುವಾರ ಸಂಜೆ ನಡೆಯಲಿದೆ. ಜಿ ಎಸ್ ವಿ ಎಸ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಕಾಶಿನಾಥ್ ಪಿ ಪೈ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದು […]
ಬಿ. ಬಿ. ಹೆಗ್ಡೆ ಕಾಲೇಜು : ‘ಫಿಟ್ನೆಸ್ ಚಾಲೆಂಜ್–2024’
ಕುಂದಾಪುರ (ನ.23): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಘಟಕ ಮತ್ತು ಹಿಂದಿ ಸಂಘದ ವತಿಯಿಂದ ಕುಂದಾಪುರದ ಲಯನ್ಸ್ ಕ್ಲಬ್ ವೆಯ್ಟ್ ಝೋನ್ ಜಿಮ್ ಫಿಟ್ನೆಸ್ ಕೇಂದ್ರ ಇವರ ಸಹಯೋಗದೊಂದಿಗೆ ‘ಫಿಟ್ನೆಸ್ ಚಾಲೆಂಜ್–2024’ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾದ ಲಯನ್ ರಾಜೀವ್ ಕೋಟ್ಯಾನ್, II ವಿ.ಡಿ.ಜಿ. ಅವರು ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯದ ಮಹತ್ವದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರದ ಲಯನ್ಸ್ […]
ಕರಾಟೆಯಲ್ಲಿ ಮಿಂಚಿದ ಎಚ್.ಎಮ್.ಎಮ್ -ವಿ.ಕೆ.ಆರ್ ಶಾಲೆಯ ವಿದ್ಯಾರ್ಥಿಗಳು
ಕುಂದಾಪುರ (ನ:23) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್, ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಅನೇಕ ವಿದ್ಯಾರ್ಥಿಗಳು ಬುಡೋಕನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕದ ವತಿಯಿಂದ ನಡೆದ 4ನೇ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ 2024ರಲ್ಲಿ ಭಾಗವಹಿಸಿ, ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರತೀಕ್ ಮತ್ತು ಅರ್ನಾನ್. ಡಿ. ಅಲ್ಮೇಡಾ ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ, ಆರ್ಯನ್ ಕೆ ಪೂಜಾರಿ – ದ್ವಿತೀಯ, ಭುವನ್ […]
ಕುಂದಾಪುರದ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯ ಆದ್ವಿಕ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ(ನ.26) : ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ ನಾಲ್ಕನೇ ತರಗತಿಯ ವಿದ್ಯಾರ್ಥಿ ಆದ್ವಿಕ್ ಆರ್ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರದ ವತಿಯಿಂದ ನಡೆದ ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ 2024-25 ರ ಕಿರಿಯ ಹಂತದ ವೈಯಕ್ತಿಕ ವಿಭಾಗದ ಚಿತ್ರಕಲೆ ಮತ್ತು ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. […]
ಕಾರ್ಕಳ ಜ್ಞಾನಸುಧಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ-ಜ್ಞಾನ ಸಂಭ್ರಮ
ಕಾರ್ಕಳ( ನ .26): ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಜ್ಞಾನ ಸಂಭ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಉಪ ಪ್ರಾಂಶುಪಾಲರಾದ ಡಾ. ಬಾಲಿಕಾ ಮಾತನಾಡುತ್ತಾ ನಮ್ಮನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸುವವರು ಗುರುಗಳು, ಗುರುಗಳು ನಮ್ಮನ್ನು ಉತ್ತಮ ದಾರಿಯಲ್ಲಿ ಕರೆದೊಯ್ಯುತ್ತಾರೆ, ನಮ್ಮ ಗುರಿ ತಲುಪಲು ನೆರವಾಗುತ್ತಾರೆ ಎಂದರು. ನನ್ನನ್ನು ನಾನು […]
ಜನತಾ ಪಿ.ಯು ಕಾಲೇಜು ಹೆಮ್ಮಾಡಿ : CSEET ಸ್ಪರ್ಧಾತ್ಮಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
ಹೆಮ್ಮಾಡಿ( ನ ,26): ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಇವರು ನಡೆಸುವ CSEET ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಅಭಿನಂದಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ಮಾತನಾಡಿ, ‘ವಿಜ್ಞಾನ ವಿಭಾಗದಂತೆ ವಾಣಿಜ್ಯ ವಿಭಾಗವು ಬಹಳಷ್ಟು ಪ್ರಮುಖವಾದದ್ದು,ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ CA/CS ಸ್ಪರ್ಧಾತ್ಮಕ ಪರೀಕ್ಷೆಗೆ […]
ಜನತಾ ಪಿ ಯು ಕಾಲೇಜು ಹೆಮ್ಮಾಡಿ: ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ ( ನ .25): ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕ್ರಮವಾಗಿ, ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ಶ್ರುತಿಕಾ ಶೆಟ್ಟಿ ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಜಯಶ್ರೀ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗ ಭಾವಗೀತೆ ಪ್ರಥಮ ಸ್ಥಾನ, ನಿಶಾಂತ್ ಕಿಣಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗ ಭಕ್ತಿಗೀತೆ ದ್ವಿತೀಯ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ/ಪ್ರಾಂಶುಪಾಲರು/ಬೋಧಕ/ಬೋಧಕೇತರ ವೃಂದದವರು ಅಭಿನಂದನೆ […]
ಮೂಡ್ಲಕಟ್ಟೆ ಪದವಿ ಕಾಲೇಜು : ರಾಜ್ಯಮಟ್ಟದ ಫೆಸ್ಟ್ ನವೊನ್ಮೇಶ್ ಸಂಪನ್ನ
ಕುಂದಾಪುರ( ನ.26): ಉಡುಪಿ ಜಿಲ್ಲೆ ವ್ಯಾಪ್ತಿಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಜರುಗಿದ ರಾಜ್ಯಮಟ್ಟದ ಫೆಸ್ಟ್ ನವೊನ್ಮೇಶ್ ಅದ್ದೂರಿಯಾಗಿ ಸಂಪನ್ನಗೊಂಡಿತು. ಮದರ್ ತೆರೇಸಾ ಪಿಯು ಕಾಲೇಜ್ ಶಂಕರನಾರಾಯಣ ಚಾಂಪಿಯನ್ ಹಾಗೂ ಶ್ರೀ ವೆಂಕಟರಮಣ ಪಿಯು ಕಾಲೇಜ್ ಕುಂದಾಪುರ ದ್ವಿತೀಯ ಸ್ಥಾನ ಪಡೆಯಿತು. ಪ್ರತಿಭಾನ್ವಿತ ಪಿಯುಸಿ ವಿದ್ಯಾರ್ಥಿಗಳಿಗೆ ವಿನೂತನ ಮತ್ತು ವಿಭಿನ್ನ ಪ್ರಯತ್ನದೊಂದಿಗೆ ವೇದಿಕೆಯನ್ನು ಒದಗಿಸಿಕೊಟ್ಟ ಐಎಂಜೆ ವಾಣಿಜ್ಯ ಮತ್ತು ವಿಜ್ಞಾನ ಸಂಸ್ಥೆ ಮೂಡ್ಲಕಟ್ಟೆ, ಸ್ಪರ್ಧೆಯನ್ನು ಐಟಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ಎಂಬ […]
ಹಕ್ಕುಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳಿ. ಪ್ರೊ. ಕೆ. ಉಮೇಶ್ ಶೆಟ್ಟಿ
ಕುಂದಾಪುರ (ನ. 26): ಸಂವಿಧಾನ ದೇಶದ ಸರ್ವಶ್ರೇಷ್ಟ ಕಾನೂನಾಗಿದ್ದು ಇಡೀ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯುವ ಸಮುದಾಯ ಸಂವಿಧಾನದ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹಕ್ಕುಗಳನ್ನು ಋಣಾತ್ಮಕವಾಗಿ ಬಳಸಿಕೊಳ್ಳದೆ ಧನಾತ್ಮಕವಾಗಿ ಬಳಸಿಕೊಂಡು ಸತ್ಪ್ರಜೆಗಳಾಗಬೇಕು ಒಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ರೋವರ್ಸ & ರೇಂಜರ್ಸ್ ಘಟಕಗಳ ಆಶ್ರಯದಲ್ಲಿ ನವೆಂಬರ್ 26 ರಂದು ನಡೆದ ಸಂವಿಧಾನ […]