ಕೋಟೇಶ್ವರ( ಜ,26): ದೇಶದ 74 ನೇ ಗಣರಾಜ್ಯೋತ್ಸವದ ಅಂಗವಾಗಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಧ್ವಜರೋಹಣ ನೆರವೇರಿಸಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ದೇಶದ ಸಾರ್ವಭೌಮತ್ವ ಏಕತೆ ಮತ್ತು ಅಖಂಡತೆಯನ್ನು ಬಲಿಷ್ಠಗೊಳಿಸುವ ಸಂಕಲ್ಪ ಮಾಡುತ್ತಾ ಶಿಸ್ತುಬದ್ಧವಾಗಿ ಬದುಕೋಣ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಕಾರ್ಯದರ್ಶಿಗಳಾದ ಶ್ರೀಪ್ರತಾಪಚಂದ್ರ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಗಣರಾಜ್ಯೋತ್ಸವ ಆಚರಣೆಯ ಹಿಂದೆ ಐತಿಹಾಸಿಕ ಹಿನ್ನಲೆಯಿದೆ ಎಂದು ಹೇಳುತ್ತಾ” ಸ್ವತಂತ್ರ ರಾಷ್ಟ್ರಕ್ಕೆ ಪ್ರಭುದ್ಧವಾದ ಸಂವಿಧಾನ ಅಗತ್ಯವಿದ್ದು ಡಾ. ಬಿ,ಆರ್ ಅಂಬೇಡ್ಕರ್ ನೇತೃತ್ವದಲ್ಲಿ ವಿಶ್ವದಲ್ಲೇ ಅತಿ ದೊಡ್ಡದಾದ ಸಂವಿಧಾನವನ್ನು ರಚಿಸಿದ್ದು ನಮಗೆ ನಾವೇ ಅರ್ಪಿಸಿಕೊಂಡ ದಿನವಾಗಿದೆ. ಸಂವಿಧಾನವು ನಮಗೆ ನೀಡಿದ ಮೂಲಭೂತ ಹಕ್ಕುಗಳನ್ನು ಅನುಭವಿಸಿ ರಾಷ್ಟ್ರ ಗೌರವ ಸಲ್ಲಿಸಿ ಬದುಕಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ” ಎಂದು ಹೇಳಿದರು.
ಎಕ್ಸಲೆಂಟ್ ಪ್ರೌಢಶಾಲೆಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನವು 74 ನೇ ಗಣರಾಜ್ಯೋತ್ಸವವನ್ನು ಇನ್ನಷ್ಟು ಮೆರಗುಗೊಳಿಸಿತು. ವೇದಿಕೆಯಲ್ಲಿ ಎಕ್ಸಲೆಂಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಸುರೇಖಾ ಆಚಾರ್ಯರವರು ಉಪಸ್ಥಿತರಿದ್ದರು.
ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಸರೋಜಿನಿ ಆಚಾರ್ಯರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು, ಗಣ್ಯ ವ್ಯಕ್ತಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.