ಕುಂದಾಪುರ (ಜ.30): ಸಮರ್ಥ ಶಿಕ್ಷಕನೊಬ್ಬ ಮಾತ್ರ ಮಗುವಿನ ಮನಸ್ಸನ್ನು ತಲುಪಲು ಸಾಧ್ಯ. ಮಗುವಿಗೆ ಸ್ಫೂರ್ತಿ ತುಂಬಿ ಪ್ರಭಾವ ಬೀರುವ ಶಿಕ್ಷಕ ತನ್ನ ವೃತ್ತಿಯನ್ನು ಪ್ರೀತಿಸುವುದರೊಂದಿಗೆ ಬೋಧಿಸುವ ವಿಷಯದಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು. ವಿದ್ಯಾರ್ಥಿಗಳಲ್ಲಿನ ಅದ್ಭುತ ಶಕ್ತಿಯನ್ನು ಹೊರತೆಗೆಯಬಲ್ಲ ಅಭೂತಪೂರ್ವ ಅವಕಾಶವಿರುವ ವೃತ್ತಿಯೇ ಅಧ್ಯಾಪನ ವೃತ್ತಿ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ್ ಶೆಟ್ಟಿ ಹೇಳಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಬೆಳದಿಂಗಳ ಚಿಂತನ ಮಾಲಿಕೆ-2 ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಪ್ರವೀಣಾ ಎಂ. ಪೂಜಾರಿ ವಂದಿಸಿ, ಶ್ರೀ ಸುಕುಮಾರ್ ಶೆಟ್ಟಿ ಕಮಲಶಿಲೆ ಕಾರ್ಯಕ್ರಮ ನಿರೂಪಿಸಿದರು.