ಉಡುಪಿ (ಫೆ.01): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ [ರಿ.] ಅಂಬಲಪಾಡಿ, ಉಡುಪಿ ಮತ್ತು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಮಾಹೆ-ಮಣಿಪಾಲ ಇವರ ಸಹಯೋಗದೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಆಕರ್ಷಕ ಯೋಜನೆಯಾದ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನೋಂದಾವಣೆ ಅಭಿಯಾನದ ಅವಧಿಯನ್ನು ಫೆಬ್ರವರಿ .10 ರ ತನಕ ವಿಸ್ತರಿಸಲಾಗಿದೆ.
ಫೆಬ್ರವರಿ 01ರಿಂದಲೇ ಯೋಜನೆಯ ಪ್ರಯೋಜನ ಪ್ರಾರಂಭವಾಗಿದ್ದು ,ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು, ಜೊತೆಗೆ ಬಾಕಿ ಇದ್ದವರು ಆದಷ್ಟು ಬೇಗ ಆರೋಗ್ಯ ಕಾರ್ಡ್ ನೋಂದಾವಣೆ ಮಾಡಿಕೊಳ್ಳಲು ತಿಳಿಸಲಾಗಿದೆ.
ಹೆಮ್ಮಾಡಿ ಭಾಗದ ಸಾರ್ವಜನಿಕರು ಈ ಆರೋಗ್ಯ ಕಾರ್ಡನ್ನು ಹೆಮ್ಮಾಡಿ ಬಸ್ ನಿಲ್ದಾಣ ದ ಸಮೀಪದ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಕಟ್ಟಡದಲ್ಲಿರುವ ಬ್ಲೂ ಸ್ಕೈ ಸ್ಟುಡಿಯೋದಲ್ಲಿ ನೋಂದಣಿ ಮಾಡಿಕೊಳ್ಳಲು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕವು ತಿಳಿಸಿದೆ.
ಆರೋಗ್ಯ ಸುರಕ್ಷಾ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳು
ರೇಷನ್ ಕಾರ್ಡ್ ಪ್ರತಿ ಹಾಗೂ ಕುಟುಂಬದ ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ ಮತ್ತು 1700 ರೂಪಾಯಿ