ಕುಂದಾಪುರ(ಮಾ .03): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಸಿ.ವಿ.ರಾಮನ್ ಕ್ಲಬ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನ ವನ್ನು ಆಯೋಜಿಸಲಾಗಿದ್ದು 40ಕ್ಕೂ ಅಧಿಕ ತಂಡಗಳು ಪ್ರಥಮ ಸುತ್ತಿನಲ್ಲಿ ಭಾಗವಹಿಸಿ ವಿಭಿನ್ನ ರೀತಿಯ ಮಾದರಿಯನ್ನು ತಯಾರಿಸಿ ಪ್ರದರ್ಶಿಸಿದರು.
ಆಯ್ದ ಹದಿನೈದು ಮಾದರಿಗಳ ಪ್ರದರ್ಶನ ಹಾಗೂ ಕೊನೆಯ ಹಂತದ ತೀರ್ಪನ್ನು ರಾಷ್ಟ್ರೀಯ ವಿಜ್ಞಾನ ದಿನದಂದು ನಡೆಸಲಾಯಿತು. ಅತಿಥಿ ಹಾಗೂ ತೀರ್ಪು ಗಾರರಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಪ್ರಶಸ್ತಿ ವಿಜೇತ ಗಣಿತ ಪ್ರಾಧ್ಯಾಪಕರಾದ ಶ್ರೀ ಉದಯಕುಮಾರ್ ಹಾಗೂ ಭಟ್ಕಳದ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ಗಣಿತ ಪ್ರಾಧ್ಯಾಪಕರಾದ ಶ್ರೀ ಶ್ರೀನಿವಾಸ ಎನ್ ನಾಯ್ಕ್ ಅವರು ಆಗಮಿಸಿದ್ದರು.
ಐಎಮ್ ಜೆ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಪ್ರೊಫ಼ೆಸರ್ ದೋಮ ಚಂದ್ರಶೇಖರ ಅವರು ವಿದ್ಯಾರ್ಥಿಗಳ ಉತ್ಸಾಹ, ಮಾದರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಮ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಿ ವಿ ರಾಮನ್ ಅವರ ಸಾಧನೆಯ ಬಗ್ಗೆ ವಿವರಿಸುತ್ತ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊoಡು ಕಾಲೇಜಿನ ಕೀರ್ತಿ ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ದೀಪಕ್ ಶೆಟ್ಟಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ.ರಾಮಕೃಷ್ಣ ಹೆಗ್ಡೆ, ಸಂಯೋಜಕರಾದ ಪ್ರೊಫೆಸರ್ ಸೂಕ್ಷ್ಮ ಅಡಿಗ , ವಿಭಾಗದ ಮುಖ್ಯಸ್ಥರು , ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಥಮ ವರ್ಷದ ವಿದ್ಯಾರ್ಥಿನಿ ಪ್ರತೀಕ್ಷಾ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಸಿವಿ ರಾಮನ್ ಕ್ಲಬ್ ಇದರ ಅಧ್ಯಕ್ಷ ದೇವರಾಜ್ ಮತ್ತು ದರ್ಶನ ಅತಿಥಿಗಳ ಪರಿಚಯಿಸಿದರು. , ಉಪಾಧ್ಯಕ್ಷ ಮಣಿಕಂಠ ವಿಜೇತರ ವಿವರಣೆ ನೀಡಿದರು ಹಾಗೂ ಕಾರ್ಯದರ್ಶಿ ಶರತ್ ಸ್ವಾಗತಿಸಿ, ಸ್ನೇಹ ವಂದಿಸಿದರು.