ಗಂಗೊಳ್ಳಿ(ಮಾ.05): ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇದರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಾಡಗೀತೆ ಮತ್ತು ರೈತ ಗೀತೆ ಹಾಗೂ ಇತರ ಹಾಡುಗಳನ್ನು ಹಾಡಲು ಅತ್ಯುತ್ತಮ ರೀತಿಯಲ್ಲಿ ತರಬೇತಿ ನೀಡಿದ ಗಾಯಕ ಹಾಗೂ ಸಂಘಟಕ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಸಂಸ್ಥೆಯ ವತಿಯಿಂದ ಮಾ.04 ರಂದು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಉಮೇಶ್ ಕಾರ್ಣಿಕ್ , ಶ್ರೀ ರಾಘವೇಂದ್ರ , ಹಾಗೂ ಸಹ ಶಿಕ್ಷಕರಾದ ಶ್ರೀ ಗೋಪಾಲ್ ,ಶ್ರೀಮತಿ ಶ್ರೀಲತಾ , ಶ್ರೀಮತಿಲವೀನಾ, ಸೂರಜ್, ಆದಿನಾಥ ಕಿಣಿ , ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.












