ಕುಂದಾಪುರ(ಮಾ.06): ಶಿವಾನಿ ಡಯಾಗ್ನೋಸ್ಟಿಕ್ & ರಿಸರ್ಚ್ ಸೆಂಟರ್, ನವ್ಯ ಚೇತನ ಶಿಕ್ಷಣ ಸಂಶೋಧನೆ ಮತ್ತು ಕಲ್ಯಾಣ ಟ್ರಸ್ಟ್, ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಫಾರ್ಮೆಡ್ ಲಿಮಿಟೆಡ್ ಬೆಂಗಳೂರು, ಇವರ ಜಂಟಿ ಆಶ್ರಯದಲ್ಲಿ ಉಚಿತ ಮೂಳೆ ಸಾಂದ್ರತೆ ಮತ್ತು ವೈದ್ಯಕೀಯ ತಪಾಸಣೆ ಶಿಬಿರ ಇಂದು ಕುಂದಾಪುರದ ಶಿವಾನಿ ಡಯಾಗ್ನೋಸ್ಟಿಕ್ ಆವರಣದಲ್ಲಿ ನಡೆಯಿತು.
ಶ್ರೀದೇವಿ ನರ್ಸಿಂಗ್ ಹೋಮ್ ಕುಂದಾಪುರದ ರ್ದೇಶಕರಾದ ಡಾ. ರವೀಂದ್ರ ರಾವ್ ರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಆರೋಗ್ಯ ತಪಾಸಣಾ ಶಿಬಿರ ಈ ಪ್ರದೇಶದಲ್ಲಿ ಹೆಚ್ಚೆಚ್ಚು ಆಗಬೇಕು ಹಾಗೂ ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳಬೇಕು ಎಂದು ಹೇಳಿದರು. ಈ ನಿಟ್ಟಿನಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಶಿವಾನಂದ ನಾಯಕ್ ಅವರ ಈ ಕಾರ್ಯ ಅಭಿನಂದನೀಯ ಮತ್ತು ಈ ರೀತಿಯ ಸೇವೆಯನ್ನು ಮಾಡಲು ನಾವೆಲ್ಲ ಕೈ ಜೋಡಿಸಬೇಕು ಎಂದು ಹೇಳಿದರು.
ಟ್ರಸ್ಟಿನ ಟ್ರಸ್ಟಿ ಅನಿತಾ ಕೆ, ಚಂದ್ರಶೇಖರ್ ಕೆ, ಫಾರ್ಮೆಟ್ ಲಿಮಿಟೆಡ್ ನ ರಾಘವೇಂದ್ರ ಹೊಳ್ಳ ಹಾಗೂ ಶಿವಾನಿ ಡಯಾಗ್ನೋಸ್ಟಿಕ್ ನ ಕಾವ್ಯ, ಅನನ್ಯ, ರೋಷನ್ ಉಪಸ್ಥಿತರಿದ್ದರು.
ಕುಂದಾಪುರದ ಆರ್ . ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನವೀನ್ ಶೆಟ್ಟಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಡಾ.ರಾಜೇಂದ್ರ ವಂದಿಸಿದರು. ನವ್ಯ ಚೇತನ ಟ್ರಸ್ಟ್ ನ ಕಾರ್ಯದರ್ಶಿ ರಾಜಶಂಕರ ನಿರೂಪಿಸಿದರು. ಚೇತನ ಪ್ರಾರ್ಥಿಸಿದರು.