ಜಗತ್ತೀನ ಬಹುತೇಕ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ನೀಡಬೇಕು, ಮಹಿಳೆಯನ್ನು ಪುರುಷರಿಗೆ ಸರಿಸಮನಾಗಿ ನೋಡಿ, ಆಕೆ ಯಾವುದರಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ, ಪುರುಷರಷ್ಟೇ ಮಹಿಳೆಯರು ಸಮರ್ಥರು ಅವರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳಬೇಡಿ ಎನ್ನುವ ಕೂಗು ಕೇಳಿಬರುತ್ತಿದೆ. ಆದರೆ ನಮ್ಮ ಸನಾತನ ಧರ್ಮ ಮತ್ತು ಸಂಸ್ಕ್ರತಿಯಲ್ಲಿ ಶತ -ಶತಮಾನಗಳ ಹಿಂದೆಯೇ ಮಹಿಳೆಯನ್ನು ಪುರುಷರಿಗಿಂತ ಉನ್ನತ ಸ್ಥಾನ ನೀಡಿರುವುದು ಈ ಮಾನವ ಜಗತ್ತಿಗೆ ಗೊತ್ತೇ ಇಲ್ಲ.
ವೇದಗಳ ಮೊದಲನೇ ಮಂತ್ರ ಮಾತೃ ದೇವೋಭವ…. ಯತ್ರ ನಾರ್ಯಸ್ತು ಪುಜ್ಯಂತೆ ರಮಂತೆ ತತ್ರ ದೇವತಹಃ …. ಆಕೆ ಪುರುಷರಿಗಿಂತ ಗಿಂತ ಶ್ರೇಷ್ಠ ಎನ್ನುವುದು.
ನಮ್ಮಲ್ಲಿ ಸನ್ಯಾಸ ತೆಗೆದುಕೊಂಡ ವ್ಯಕ್ತಿ ತಂದೆಗೆ ನಮಸ್ಕಾರ ಮಾಡುವ ಹಾಗಿಲ್ಲ .ಆದರೆ ತಾಯಿಯನ್ನು ಎಲ್ಲಿ ನೋಡಿದರೂ ಶಿರ ಸಾಷ್ಟಾಂಗ ನಮಸ್ಕಾರ ಮಾಡಬೇಕು. ಜಗದ್ಗುರು ಶ್ರೀ ಆದಿಶಂಕರರು ಮಾತೃ ಅಷ್ಟಕದಲ್ಲಿ ತಾಯಿಯ ವರ್ಣನೆ ಬರೆದಿದ್ದಾರೆ. ಇಂದಿಗೂ ಅದು ಓದಿದರೆ ಕಣ್ಣಲ್ಲಿ ನೀರು ಬರುತ್ತದೆ. ಅವರು ಹಿಮಾಲಯದಿಂದ ತಾಯಿಯ ಕೊನೆಯ ಸಮಯದಲ್ಲಿ ಓಡಿಬಂದರು. ದೌರ್ಭಾಗ್ಯವೆಂದರೆ ಇಂದಿಗೂ ಸನಾತನ ಧರ್ಮದ ತತ್ವಗಳನ್ನು ತಿಳಿಯದೆ ಗ್ರಹ ಹಿಂಸೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಂಹ ಮಹಾ ಪಾಪಗಳನ್ನು ಮಾಡುತ್ತಿದ್ದಾರೆ .ಇದು ಮಹಾ ತಪ್ಪು. ನಾವು ಬದಲಾಗಬೇಕು ಮಹಿಳೆಯನ್ನು ಪುರುಷರಿಗಿಂತ ಪೂಜ್ಯಳು ಎಂದು ತಿಳಿಯಬೇಕು. ಇಂತಹ ವಿಷಯಗಳನ್ನು ನಮ್ಮ ಯುವಕರಿಗೆ ಹೇಳಬೇಕು. ಮಹಿಳಾ ದಿನಾಚರಣೆ ಅಂಗವಾಗಿ ಎಲ್ಲ ತಾಯಂದಿರಿಗೆ ಪಾದಾಭಿವಂದನೆ ಹಾಗೂ ಅಕ್ಕತಂಗಿಯರಿಗೆ ತಲೆಬಾಗಿ ನಮಸ್ಕರಿಸುವೆ.
ಆಕೆ ಜಗನ್ಮಾತೆ…..
ರಾಘವೇಂದ್ರ ಹಾರ್ಮಣ್