ವಂಡ್ಸೆ(ಮಾ,08): ಕಂದಾಯ ಇಲಾಖೆಯ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮವು ವಂಡ್ಸೆಯ ಮಹಾತ್ಮ ಗಾಂಧಿ ಸಭಾಭವನದಲ್ಲಿ ಮಾರ್ಚ್ 08 ರಂದು ನಡೆಯಿತು.ಬೈಂದೂರು ಶಾಸಕರಾದ ಶ್ರೀ ಬಿ .ಎಂ ಸುಕುಮಾರ್ ಶೆಟ್ಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಸೌಕರ್ಯಗಳನ್ನು ನೀಡಬೇಕು.ರಸ್ತೆ ಕಾಮಗಾರಿ, ಬೆಳಕು ಯೋಜನೆ, ಕುಡಿಯುವ ನೀರಿನ ವ್ಯವಸ್ಥೆ,94ಸಿ ಹಕ್ಕು ಪತ್ರ , ಏತ ನೀರಾವರಿ ಯೋಜನೆ ಮತ್ತಿತರ ಹಲವು ಯೋಜನೆ ಗಳು ತನ್ನ ಆಡಳಿತಾವಧಿಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಮುಂದಿನ ದಿನಗಳಲ್ಲೂ ಕೂಡ ಹಲವು ಜನ ಪರ ಯೋಜನೆ ಗಳ ಕನಸನ್ನು ಹೊತ್ತುಕೊಂಡಿದ್ದು ಅದನ್ನು ಕೂಡ ತ್ವರಿತ ಗತಿಯಲ್ಲಿ ಮಾಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ತಹಶೀಲ್ದಾರ ಶ್ರೀಮತಿ ಶೋಭಾ ಲಕ್ಷ್ಮೀ ,ವಂಡ್ಸೆ ಗ್ರಾಮಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಚಿತ್ತೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಜಯಂತಿ ಪೂಜಾರಿ,ಇಡೂರು ಪಂಚಾಯತ್ ಅಧ್ಯಕ್ಷ ಅಮೀನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.