ವಂಡ್ಸೆ(ಮಾ,08): ಕಂದಾಯ ಇಲಾಖೆಯ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮವು ವಂಡ್ಸೆಯ ಮಹಾತ್ಮ ಗಾಂಧಿ ಸಭಾಭವನದಲ್ಲಿ ಮಾರ್ಚ್ 08 ರಂದು ನಡೆಯಿತು.ಬೈಂದೂರು ಶಾಸಕರಾದ ಶ್ರೀ ಬಿ .ಎಂ ಸುಕುಮಾರ್ ಶೆಟ್ಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಸೌಕರ್ಯಗಳನ್ನು ನೀಡಬೇಕು.ರಸ್ತೆ ಕಾಮಗಾರಿ, ಬೆಳಕು ಯೋಜನೆ, ಕುಡಿಯುವ ನೀರಿನ ವ್ಯವಸ್ಥೆ,94ಸಿ ಹಕ್ಕು ಪತ್ರ , ಏತ ನೀರಾವರಿ ಯೋಜನೆ ಮತ್ತಿತರ ಹಲವು ಯೋಜನೆ ಗಳು ತನ್ನ […]
Tag: bms
ಕರಾಟೆ ಕ್ಷೇತ್ರದ ಸಾಧಕ ಪ್ರತಿಭೆ ಶ್ರೀಶ ಗುಡ್ರಿಯನ್ನು ಅಭಿನಂದಿಸಿದ ಶಾಸಕ ಬಿ .ಎಂ ಸುಕುಮಾರ್ ಶೆಟ್ಟಿ
ವoಡ್ಸೆ(ಮಾ.05): ಕರಾಟೆ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಯುವ ಪ್ರತಿಭೆ ಶ್ರೀಶ ಗುಡ್ರಿ ಯವರನ್ನು ಬೈoದೂರಿನ ಶಾಸಕರಾದ ಶ್ರೀ ಬಿ ಎಂ ಸುಕುಮಾರ್ ಶೆಟ್ಟಿ ಇವರು ಅಭಿನಂದಿಸಿ ಗೌರವಿಸಿದರು. ಯುವಕನ ಸಾಧನೆಯನ್ನು ಪ್ರಶoಸಿಸಿದ ಶಾಸಕರು ತಾಯಿ ಮೂಕಾಂಬಿಕೆಯ ಆಶೀರ್ವಾದದೊಂದಿಗೆ ಇನ್ನಷ್ಟು ಸಾಧನೆ ಮಾಡಲು ಶುಭ ಹಾರೈಸಿದರು.
ಮಾರಣಕಟ್ಟೆಯ ಕರ್ಣ, ಕೊಡುಗೈ ದಾನಿ ಶ್ರೀ ಕೃಷ್ಣಮೂರ್ತಿ ಮಂಜರಿಗೆ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ (ಅ,30): ಮಾರಣಕಟ್ಟೆಯ ಕರ್ಣ, ಕೊಡುಗೈ ದಾನಿ, ಸಮಾಜಸೇವಕ, ಶಿಕ್ಷಣ ಪ್ರೇಮಿ, ತನ್ನ ದುಡಿಮೆಯ ಅರ್ಧ ಭಾಗಕ್ಕೂ ಹೆಚ್ಚು ಹಣವನ್ನು ಸಮಾಜಕ್ಕೆ ನೀಡುವ ಕೃಷ್ಣಮೂರ್ತಿ ಮಂಜರು ಈ ಬಾರಿಯ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ಮೂಲಕ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕಾರಣರಾದವರು, ತನ್ನ ದುಡಿಮೆ ಹಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೇ ಸಮಾಜಕ್ಕಾಗಿ ವಿನಿಯೋಗಿಸುವ ಧೀಮಂತ ವ್ಯಕ್ತಿತ್ವದ ಶ್ರೀ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರುರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರೋದು […]
ಬೈಂದೂರು: ವಿದ್ಯುತ್ ಉಪಕೇಂದ್ರ ಉದ್ಘಾಟನೆ-ಗ್ರಾಮೀಣ ಭಾಗದ ಜನರ ಬಹುಕಾಲದ ಬೇಡಿಕೆಗೆ ಸ್ಪಂದನೆ
ಬೈಂದೂರು(ಅ,25): ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ 33/11 ಕೆವಿ ವಿದ್ಯುತ್ ಉಪಕೇಂದ್ರ ಉದ್ಘಾಟನೆಯನ್ನು ಇಂಧನ ಸಚಿವರಾದ ಶ್ರೀ ಸುನಿಲ್ ಕುಮಾರ್ ರವರು ಅ .25 ರಂದು ನೆರವೇರಿಸಿದರು. ಇದರಿಂದಾಗಿ ಕೊಲ್ಲೂರು, ಜಡ್ಕಲ್, ಮುದೂರು, ಗೋಳಿಹೊಳೆ, ಇಡೂರು ಕುಂಜ್ಞಾಡಿ ಗ್ರಾಮಗಳ ಸುತ್ತ ಮುತ್ತಲಿನ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿ ಪ್ರತ್ಯೇಕ 11 ಕೆ.ವಿ. ಫೀಡರುಗಳ ಮೂಲಕ ಗುಣಮಟ್ಟದ ವಿದ್ಯುತ್ ಸರಬರಾಜು ಸಾಧ್ಯವಾಗುತ್ತದೆ. ಇದರಿಂದಾಗಿ ಕೃಷಿಯನ್ನು ಬದುಕಾಗಿಸಿಕೊಂಡಿರುವ ಈ ಭಾಗದ ಸುಮಾರು 1,745ಕ್ಕೂ ಮಿಕ್ಕಿ […]
ಕೊಲ್ಲೂರು: ಲೋಕ ಹಿತಕ್ಕಾಗಿ ಶತ ಚಂಡಿಕಾ ಯಾಗ ನಡೆಸಿದ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ
ಕುಂದಾಪುರ(ಆ,26): ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಾಲ್ಕು ದಿನಗಳ ಕಾಲ ಕೊಲ್ಲೂರು ದೇವಳದ ಕಾಳಿದಾಸ ಭಟ್ ರವರ ನಿವಾಸದಲ್ಲಿ ಚಂಡಿಕಾ ಪಾರಾಯಣ ಹಾಗೂ ಶತ ಚಂಡಿಕಾಯಾಗ ನಡೆಯಿತು.ಚಂಡಿಕಾ ಯಾಗದಿಂದ ಸರ್ವರಿಗೂ ಒಳಿತಾಗಲಿ, ನಾಡಿನ ಜನತೆಗೆ ಸುಭೀಕ್ಷವಾಗಲಿ, ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ಮಾಡುವ ಈ ಸೇವೆಯಿಂದ ಸಂತೃಪ್ತಿ ಇದೆ ಎಂದು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ರಾಜ್ಯದ ವಿವಿಧ ಭಾಗಗಳಿಂದ ಗಣ್ಯರು ಹಾಗೂ ಭಕ್ತರು ಆಗಮಿಸಿದ್ದರು. ವಿಶೇಷವಾಗಿ ರಾಜ್ಯಸಭಾ […]
ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಕುಂದಾಪುರ(ಜು,19): ನೂತನವಾಗಿ ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೈಂದೂರು ಶಾಸಕರಾದ ಶ್ರೀ ಬಿ.ಎಂ .ಸುಕುಮಾರ ಶೆಟ್ಟಿಯವರು ಧರ್ಮಸ್ಥಳದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ದೇಶವ್ಯಾಪಿ ಹಲವು ಜನಪರ ಯೋಜನೆಗಳನ್ನು ವಿಸ್ತರಿಸಲು ಇದೀಗ ಅನುವು ಮಾಡಿಕೊಟ್ಟ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕುಂದಾಪುರ-ಕೆರಾಡಿ ಸರ್ಕಾರಿ ಬಸ್ಸು ಓಡಾಟಕ್ಕೆ ಶುಭ ಕೋರಿದ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ
ವಂಡ್ಸೆ(ಜು,7): ಕೆರಾಡಿ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಕುಂದಾಪುರ-ಕೆರಾಡಿ ಸರ್ಕಾರಿ ಬಸ್ಸು ಸಂಪರ್ಕಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಬಸ್ಸಿಗೆ ಪೂಜೆ ನೇರವೆರಿಸಿ ಚಾಲನೆ ನೀಡಿದರು. ಈ ಮೂಲಕ ಗುರುವಾರದಿಂದ ಕುಂದಾಪುರ- ಕೆರಾಡಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಅಧೀಕೃತವಾಗಿ ಆರಂಭವಾಗಿದ್ದು ಕೆರಾಡಿ ಗ್ರಾಮದ ಜನತೆಯ ಬಹು ದಿನದ ಕನಸು ನನಸಾದಂತ್ತಾಗಿದೆ. ನಮ್ಮ ಕ್ಷೇತ್ರದ ಕೆರಾಡಿ ಭಾಗಕ್ಕೆ ಸರ್ಕಾರಿ ಬಸ್ ಸಂಪರ್ಕ ಬೇಕು ಎಂಬುದಾಗಿ ಎ.ಬಿ.ವಿ.ಪಿಯ ನೂರಾರು […]
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಲ್ಲೂರು ದೇಗುಲಕ್ಕೆ ಭೇಟಿ
ಕೊಲ್ಲೂರು(ಮೇ,15): ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಕೇಂದ್ರ ಶ್ರೀ ಕ್ಷೇತ್ರ ಕೊಲ್ಲೂರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಮೇ14 ರ ಬೆಳಿಗ್ಗೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ದೇಗುಲದ ಹಿರಿಯ ಅರ್ಚಕ ಡಾ. ಕೆ.ಎನ್ .ನರಸಿಂಹ ಅಡಿಗ ಹಾಗೂ ಶ್ರೀ ಎನ್.ಪರಮೇಶ್ವರ ಅಡಿಗರವರ ನೇತ್ರತ್ವದಲ್ಲಿ ಸಚಿವರಿಗೆ ಗೌರವಪೂರ್ವಕವಾಗಿ ದೇವಳಕ್ಕೆ ಸ್ವಾಗತಿಸಲಾಯಿತು.ಈ ಸಂಧರ್ಭದಲ್ಲಿ ಹಿಂದಿನ ದಿನಗಳಲ್ಲಿ ತಾವು ದೇವಾಲಯಕ್ಕೆ ಆಗಮಿಸಿದ ಸಂದರ್ಭಗಳನ್ನು ಹಾಗೂ ದೇವಿಯ […]
ಬಗ್ವಾಡಿ: ರಸ್ತೆ ದುರಸ್ತಿಗೆ ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿಯವರಿಗೆ ಮನವಿ
ವಂಡ್ಸೆ(ಫೆ.6): ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸೇತುವೆ ನಂತರದ ಸುಮಾರು 600 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು , ರಸ್ತೆ ದುರಸ್ತಿ ಮಾಡಲು ಶಾಸಕ ಶ್ರ್ರೀ ಸುಕುಮಾರ್ ಶೆಟ್ಟಿ ಯವರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಶಾಸಕರ ಗ್ರಹ ಕಛೇರಿಯಲ್ಲಿ ಮನವಿ ನೀಡಲಾಯಿತು. ದೇವಸ್ಥಾನದ ಜಾತ್ರೆಯೊಳಗೆ ರಸ್ತೆ ನಿರ್ಮಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ಮೊಗವೀರ ಮಹಾಜನ ಸಂಘ(ರಿ). ಬಗ್ವಾಡಿ ಹೋಬಳಿಯ ಕುಂದಾಪುರ ಶಾಖೆಯ […]
ಬೈಂದೂರು ಶಾಸಕರ ವಿರುದ್ಧ ಅವಾಚ್ಯ ಪದ ಬಳಕೆ : ಪ್ರಕರಣ ದಾಖಲು
ಶಂಕರನಾರಾಯಣ (ಜ.22): ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಹಲವಷ್ಟು ದಿನಗಳಿಂದ ಕಂಡು ಬರುತ್ತಿದ್ದು, ಅವಾಚ್ಯ ಪದಬಳಕೆ ಮಾಡಿದ ಉದಯ ಬಿಜೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ತಕ್ಷಣಕ್ಕೆ ಆತನನ್ನು ಬಂಧಿಸಬೇಕು, ಇಲ್ಲದಿದ್ದಲ್ಲಿ ಎಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರ ಅಭಿಮಾನಿಗಳು ಠಾಣೆಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಬೈಂದೂರು ಬಿಜೆಪಿಯ ಯುವ ನಾಯಕ ಕಲ್ಗದ್ದೆ ಉಮೇಶ್ ಶೆಟ್ಟಿಯವರು ಆಗ್ರಹಿಸಿದ್ದಾರೆ.