ಕೋಟೇಶ್ವರ(ಮಾ.11): ಜೆಸಿಐ ಬ್ರಹ್ಮಾವರ ಸೇವಾಮೆ ಬ್ರಹ್ಮಾವರ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾರ್ಚ್ ,11 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬ್ರಹ್ಮಾವರದಲ್ಲಿ ನಡೆಯಿತು.
ಗ್ರಾಮೀಣ ಭಾಗದಲ್ಲಿ ಮೊದಲ ಬಾರಿಗೆ ಮಹಿಳಾ ದಿನಾಚರಣೆ ಆಚರಿಸಿದ್ದು ,ಆಗಮಿಸಿದ ಎಲ್ಲಾ ಮಹಿಳೆಯರಿಗೆ ಸಂಪ್ರದಾಯ ಬದ್ದವಾಗಿ ಅರಶಿನ ಕುಂಕುಮ ,ರವಿಕೆ ವಸ್ತ್ರ ಮತ್ತು ಹೂವನ್ನು ನೀಡಿ ಗೌರವಯುತವಾಗಿ ಸ್ವಾಗತಿಸಲಾಯಿತು.ಆವರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಮತ್ತು ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಾಧು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಗ್ರಾಮೀಣ ಭಾಗದ ಕೃಷಿಯಲ್ಲಿ ಸಾಧನೆ ಮಾಡಿದ ಶ್ರೀಮತಿ ಅನಿತಾ ಸೂರ ಕುಲಾಲ ಹಿಲಿಯಾಣ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಸಾಧನೆಮಾಡಿದ ನಾಟಿ ವೈದ್ಯೆ ಶ್ರೀಮತಿ ಪುಟ್ಟಿಬಾಯಿ ಕಲ್ಮರ್ಗಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜೆಸಿಐ ಪಿಪಿಪಿ ಜೆಸಿಐ ವಲಯ 15 ರ ಪೂವಾಧ್ಯಕ್ಷರಾದ ಕಾರ್ತೀಕೇಯ ಮಧ್ಯಸ್ಥ ,ಇನ್ನೋರ್ವ ಮುಖ್ಯ ಅತಿಥಿಯಾಗಿರುವ ಶ್ರೀಮತಿ ಜ್ಯೋತಿ ಪ್ರಶಾಂತ್ ಇವರು ಮಹಿಳಾ ದಿನಾಚರಣೆಯ ಪ್ರಾಮುಖ್ಯತೆ ಮತ್ತು ಅವಶ್ಯಕತೆಯ ಬಗ್ಗೆ ತಿಳಿಸಿದರು.
ಜೆಸಿಐ ಬ್ರಹ್ಮಾವರ ಸೇವಾಮೆ ಅಧ್ಯಕ್ಷರಾಗಿರುವ ಜೇಸಿ ಕೃಷ್ಣಮೂರ್ತಿ ಹೈಕಾಡಿಯವರು ಸ್ವಾಗತಿಸಿದರು. ಸರಕಾರಿ ಪ್ರೌಢ ಶಾಲಾ ಆಂಗ್ಲ ಭಾಷಾ ಶಿಕ್ಷಕಿ ಜೆಸಿ ಸುಪ್ರೀತಾ ಶೆಟ್ಟಿ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.ಸ.ಹಿ.ಪ್ರಾ ಶಾಲೆ ಹಯ್ಕಾಡಿಯ ಹಿರಿಯ ಶಿಕ್ಷಕಿ ಜ್ಯೋತಿ ಆರ್ ಪೂಜಾರಿ ಯವರು ಮಾತನಾಡಿ ಮಹಿಳಾದಿನಾಚರಣೆಯ ಆಚರಣೆಯು ಗ್ರಾಮೀಣ ಭಾಗದಲ್ಲಿ ಮಹಿಳಾ ಜಾಗೃತಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೈಕಾಡಿ ಹಾಲು ಉತ್ಪಾದಕರ ಮಹಿಳಾ ಸಂಘ ನಿಯಮಿತ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುಲೋಚನ ಶೆಟ್ಟಿ ,ಹಾಯ್ಕಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಶ್ರೀಮತಿ ಭಾನುಮತಿ,ಬಾವಣಿ ಅಂಗನವಾಡಿ ಕ್ಷೇತ್ರದ ಶ್ರೀಮತಿ ಲಲಿತಾ , ಸಂಸ್ಥೆಯ ಸ್ಥಾಪಕಾಧ್ಯಕ್ಷರು ಜೊಯೆಲ್ ಡಿ ಅಲ್ಮೇಡಾ ,ಜ್ಯೂನಿಯರ್ ಜೇಸಿ ಸದಸ್ಯರಾದ ಜೆಜೆಸಿ ಕಾವ್ಯಶ್ರೀ ಹೆಬ್ಬಾರ್,ಜೆಜೆಸಿ ದೀಕ್ಷಾ ಪಿ ಶೆಟ್ಟಿ, ಜೆಜೆಸಿ ಅಮಿತಾ,ಜೆಜೆಸಿ ನಿಶ್ಮಿತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೇಸಿ ಸಂಸ್ಥೆಯ ಬಗ್ಗೆ ಉತ್ತಮವಾದ ತರಬೇತಿಯನ್ನು ಜೇಸಿ ಮತ್ತು ಜೇಸಿಯೇತರ ಮಹಿಳೆಯರಿಗೆ ಜೆಸಿಐ ಪಿಪಿಪಿ ಕಾರ್ತೀಕೇಯ ಮಧ್ಯಸ್ಥ ಜೆಸಿಐ ವಲಯ 15 ರ ಪೂವಾಧ್ಯಕ್ಷರು ತರಬೇತಿ ನೀಡಿದರು. ನಂತರ ಜೆಸಿ ಜ್ಯೋತಿ ಪ್ರಶಾಂತ್ ಪ್ರಾವಿಷನಲ್ ತರಬೇತುದಾರರು ಇವರು ಗ್ರಾಮೀಣ ಮಹಿಳೆಯರಿಗೆ ಲಿಂಗ ತಾರತಮ್ಯ ವಿಚಾರದ ಕುರಿತು ತಿಳಿಸಿದರು.