ಕುಂದಾಪುರ (ಆ, 09) : ಖ್ಯಾತ ಜಾನಪದ ಗಾಯಕ ಗಣೇಶ್ ಗಂಗೊಳ್ಳಿಯವರಿಗೆ ಜಾನಪದ ಸಂಗೀತ, ಸಂಘಟನೆ ಹಾಗೂ ಸಂಘ- ಸಂಸ್ಥೆಗಳಲ್ಲಿ ನ ವಿಶಿಷ್ಟ ಸೇವೆಯನ್ನು ಗುರುತಿಸಿ ತಮಿಳುನಾಡಿನ ಇಂಡಿಯನ್ ಎಂಪಯರ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ. ಶ್ರೀಯುತರು ಜಾನಪದ ಗಾಯಕರಾಗಿ ಸರಿಸುಮಾರು 32 ವರ್ಷ ದಿಂದ ನಮ್ಮ ನಾಡು ಅಲ್ಲದೆ ದೇಶದ ಹಲವಾರು ರಾಜ್ಯ ಗಳಲ್ಲಿ ಜನಮನ್ನಣೆ ಗಳಿಸಿದ್ದಾರೆ. ಪ್ರತಿಷ್ಠಿತ ಕನ್ನಡ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿರುವ […]
Day: August 9, 2021
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ : ಪದ ಪ್ರದಾನ ಕಾರ್ಯಕ್ರಮ
ಕುಂದಾಪುರ (ಆ, 09) : ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಇದರ 2021-22 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮವು ಆಗಸ್ಟ್,1 ರಂದು ಕಂದಾವರ ಆಡಿಟೋರಿಯಂ ನ ಸಂಕಲ್ಪ ಸಭಾಭವನದಲ್ಲಿ ನೆರವೇರಿತು. ಲಯನ್ಸ್ ಕ್ಲಬ್ 317c ಯ ನಿರ್ಗಮಿತ ಜಿಲ್ಲಾ ಗವರ್ನರ್ ಲಯನ್ ವಿ. ಜಿ. ಶೆಟ್ಟಿ pmjf ಇವರು ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿ, ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ಅಧ್ಯಕ್ಷರಾದ ಲಯನ್ ಜಯಶೀಲ ಶೆಟ್ಟಿ ಕಂದಾವರ […]
ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡ್ ಬಳಿ ನಗರ ಸಭೆ ಅಧಿಕಾರಿಗಳ ತಂಡದ ದಿಢೀರ್ ಭೇಟಿ : ಸ್ವಚ್ಚತೆಯ ಬಗ್ಗೆ ಪರಿಶೀಲನೆ
ಉಡುಪಿ (ಆ, 09) : ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡ್ ವ್ಯಾಪ್ತಿಯ ಕೆಲವು ಭಾಗಗಳಿಗೆ ಉಡುಪಿ ನಗರ ಸಭೆಯ ಫುಡ್ ಆಫೀಸರ್ ಕರುಣಾಕರ್ ಮತ್ತು ಶಂಕರ್, ಬಿಲ್ ಕಲೆಕ್ಟರ್ ಮತ್ತು ನಗರ ಸಭೆ ಸದಸ್ಯರ ತಂಡ ದಿಢೀರ್ ಭೇಟಿ ಕೊಟ್ಟು ಸ್ವಚ್ಛತೆ, ಪ್ಲಾಸ್ಟಿಕ್ ಉಪಯೋಗ ಮತ್ತು ಕರೋನಾ ನಿಯಮದ ಪಾಲನೆಯ ಕುರಿತು ಪರಿಶೀಲನೆ ನಡೆಸಿದರು. ನಿಯಮ ಪಾಲಿಸದೆ ಇದ್ದವರಿಗೆ ದಂಡವನ್ನು ವಿಧಿಸಿದರು.
ಮಲ್ಪೆ : ಕಡಲಮ್ಮನಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ ಮೀನುಗಾರರು
ಮಲ್ಪೆ (ಆ, 09) : ಮಳೆಗಾಲ ಮುಗಿದು, ಮೀನುಗಾರಿಕೆ ವರ್ಷ ಋತು ಆರಂಭಿಸುವ ಶುಭ ಘಳಿಗೆಯಲ್ಲಿ ಸಮುದ್ರ ಪೂಜೆ ಸಲ್ಲಿಸುವುದು ಕರಾವಳಿ ಮೀನುಗಾರರು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಪದ್ದತಿ ಹಾಗೂ ನಂಬಿಕೆ. ಆ ಹಿನ್ನೆಲೆಯಲ್ಲಿ ಮೀನುಗಾರಿಕೆ ನೆಡೆಸುವ ಮೊಗವೀರ ಸಮುದಾಯದ ಗುರು ಹಿರಿಯರು, ಗುರಿಕಾರರು ಹಾಗೂ ಸಮಸ್ತ ಮೀನುಗಾರಿಕೆ ವೃತ್ತಿ ಮಾಡುವ ಜನತೆ ಕರ್ಕಾಟಕ ಅಮಾವಾಸ್ಯೆ ದಿನದಂದು ಮಲ್ಪೆ ಬಂದರಿನಲ್ಲಿ ಪೂಜೆ ಸಲ್ಲಿಸಿ ಸಮುದ್ರದಲ್ಲಿ ಹೇರಳ ಮೀನು ಸಿಗುವಂತಲಿ ಎಂದು […]
ಕೊಡುಗೈದಾನಿ, ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಕುಂದಾಪ್ರ ರತ್ನ ಪ್ರಶಸ್ತಿ
ಬೆಂಗಳೂರು (ಆ, 08) : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕಳೆದ ಮೂರು ವರ್ಷಗಳಿಂದಲೂ ಕುಂದಾಪುರ ಭಾಗದ ಜನತೆ ಆಸಾಡಿ ಅಮವಾಸ್ಯೆದಿನದಂದು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿಶೇಷವಾಗಿ ಆಚರಿಸುತ್ತಿದ್ದು ,ಈ ಬಾರಿ ಆಗಸ್ಟ್ 08 ರ ಆಸಾಡಿ ಅಮವಾಸ್ಯೆಯೆಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ ತಂಡದ ನೇತೃತ್ವದಲ್ಲಿ ರಾಜಾಜಿನಗರದ ಕದಂಬ ಸಾಮ್ರಾಟ್ ಸಭಾ ಭವನದಲ್ಲಿ ವೈಭವದಿಂದ ನೆರವೇರಿತು. ಈ ಸಂದರ್ಭದಲ್ಲಿ ಉದ್ಯಮಿ ,ಶೇಫ್ ಟಾಕ್ ಹಾಸ್ಪಿಟಾಲಿಟಿ […]