ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ , ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡಿದೆ. ‘ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾಗಬೇಕು’ ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ ಶ್ರೀ.ಬಿ.ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. 130 ವಿದ್ಯಾರ್ಥಿಗಳೊಂದಿಗೆ ಹನ್ನೆರಡು ವರ್ಷಗಳ ಹಿಂದೆ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1500 ಕಲಿಕಾರ್ಥಿಗಳಿದ್ದಾರೆ ಎಂಬುದು ಸಂಸ್ಥೆಯ ಸಾಧನೆಯ ಹಾದಿಯ ಹೆಗ್ಗುರುತು.
ಯುಜಿಸಿಯ ಅಂಗ ಸಂಸ್ಥೆಯಾದ “ನ್ಯಾಕ್’ ನಿಂದ “B++’ ಗ್ರೇಡ್ ಮಾನ್ಯತೆ ಪಡೆದ ಸಂಸ್ಥೆ ಇದಾಗಿದ್ದು,ಹೊಸ ಮಾನ್ಯತಾ ಕ್ರಮದಲ್ಲಿ ಸಿಜಿಪಿಎ 2.92/4. ಸಂಸ್ಥೆ ಪಡೆದಿದ್ದು ಮಂಗಳೂರು ವಿ ವಿ ವ್ಯಾಪ್ತಿಗೆ ಒಳಪಟ್ಟಿರುವ ಅನುದಾನ ರಹಿತ ಶಿಕ್ಷಣ ಸಂಸ್ಥೆಯೊಂದು ಕೇವಲ 11 ವರ್ಷಗಳಲ್ಲಿ ಮೊದಲ ಹಂತದಲ್ಲೇ B++ Grade ಪಡೆದಿರುವುದು ಸಂಸ್ಥೆಯ ವಿಶೇಷತೆ.
ಆರಂಭಗೊಂಡ ಕಿರು ಅವಧಿಯಲ್ಲಿ ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಕ್ರೀಡಾರಂಗದಲ್ಲಿ ಹಾಗೂ ಇನ್ನಿತರ ವಿಸ್ತರಣಾ ಚಟುವಟಿಕೆಗಳಲ್ಲಿ ಕಾಲೇಜು ಗಣನೀಯ ಸಾಧನೆಗೈದಿದೆ. ಸಂಸ್ಥೆಯ ಅಧ್ಯಕ್ಷರ ಧ್ಯೇಯ ವಾಕ್ಯವನ್ನು ಸಾರ್ಥಕಗೊಳಿಸುವ ಪಯಣದೊಂದಿಗೆ ಸಂಸ್ಥೆಯು 2023-24 ರ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಗೊಳಿಸಿದೆ.
ಸಂಸ್ಥೆಯ ಸಾಧನೆಗಳು :
>ಮಂಗಳೂರು ವಿ.ವಿ ಯಲ್ಲಿ ಶೈಕ್ಷಣಿಕವಾಗಿ ವಿಶೇಷ ಸಾಧನೆ.8 ರ್ಯಾಂಕ್ & ಚಿನ್ನದ ಪದಕಗಳು.
>ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಖರ’ ಮಂಗಳೂರು ವಿ.ವಿ ಮಟ್ಟದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ.
>ಮಂಗಳೂರು ವಿ.ವಿ ಕ್ರೀಡಾ ರ್ಯಾಂಕಿಂಗ್ನಲ್ಲಿ ಉಡುಪಿ ವಲಯ ಕಾಲೇಜುಗಳಲ್ಲಿ ಪ್ರಥಮ, ಸಮಗ್ರ 9ನೇ ರ್ಯಾಂಕ್.
>ಗ್ರಾಮೀಣ ಭಾಗದಿಂದ ಬಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ.
> ಬಿ ಸಿ ಎ ಯಲ್ಲಿ ಪ್ರಥಮ ಹಾಗೂ ಚತುರ್ಥ ರ್ಯಾಂಕ್ ,ಬಿಎಸ್ಸಿ ದ್ವಿತೀಯ ರ್ಯಾಂಕ್, ಬಿಬಿಎ ದ್ವಿತೀಯ ರ್ಯಾಂಕ್ ಹಾಗೂ ತ್ರತೀಯ ರ್ಯಾಂಕ್ , ಬಿ.ಕಾಂ.ನಲ್ಲಿ 8ನೇ ಹಾಗೂ 9ನೇ ರ್ಯಾಂಕ್, ಬಿ.ಕಾಂ ಅಕೌಂಟೆನ್ಸಿಯಲ್ಲಿ ಚಿನ್ನದ ಪದಕಗಳು.
>ಸಾಂಸ್ಕೃತಿಕ – ಮಂಗಳೂರು ವಿ.ವಿ ಅಂತರ್ ಕಾಲೇಜು ಮಟ್ಟದಲ್ಲಿ ನಿರಂತರವಾಗಿ ಉತ್ಕೃಷ್ಟ ಸಾಧನೆ.
>ಕ್ಯಾಂಪಸ್ ಆಯ್ಕೆ – ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ.
>ಸತತ ಹನ್ನೆರಡು ವರ್ಷಗಳಿಂದ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಕ್ರೀಡಾ ಸ್ಪರ್ಧೆಗಳ ಆಯೋಜನೆ.
>ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬರವಣಿಗೆಯ ಆಸಕ್ತಿಗೆ ಪ್ರೋತ್ಸಾಹ ನೀಡುವ ವಾಲ್ ಮ್ಯಾಗಜಿನ್ (ಭಿತ್ತಿ ಪತ್ರಿಕೆ) ‘ಧ್ವನಿ’ ,ವಾರ್ಷಿಕ ಸಂಚಿಕೆ ‘ಶಿಖರ’ ಹಾಗೂ ವಿಭಾಗದ ಪತ್ರಿಕೆಗಳು .ಕ್ಯಾಂಪಸ್ ವೈಸ್ – ದ್ವೈವಾರ್ಷಿಕ ನ್ಯೂಸ್ ಬುಲೆಟಿನ್ ಹಾಗೂ ಡಿಜಿ ಕ್ಯಾಂಪಸ್ ಇ – ಮ್ಯಾಗಜಿನ್
ಲಭ್ಯವಿರುವ ಕೋರ್ಸುಗಳು :
>ಬಿ.ಕಾಂನಲ್ಲಿ ನಾಲ್ಕು ವಿಭಾಗಗಳು: ಬಿ.ಕಾಂನೊಂದಿಗೆ CA/CS/CMA.
>ಬಿ.ಕಾಂನೊಂದಿಗೆ (Data Science )
>ಬಿ.ಸಿ.ಎ ಎರಡು ವಿಭಾಗಗಳ ಜೊತೆಗೆ (Artificial Intelligence ).
> ಬಿ.ಬಿ.ಎ.
ಸ್ಪರ್ಧಾತ್ಮಕ ಪರೀಕ್ಷೆಗಳಾದ IBPS,PGCET ಹಾಗೂ ಇತರೆ ಪರೀಕ್ಷೆಗಳಿಗೆ ನಿರಂತರ ತರಭೇತಿ
ಸರ್ಟಿಫಿಕೇಟ್ ಕೋರ್ಸ್ಗಳಾಗಿ , COMMUNICATIVE ENGLISH, EVENT MANAGEMENT , Tally & GST, Soft Skills Developments.
YOGA & SPIRITUAL ,YAKSHAGANA ,CRAFT ,Computer fundamentals, Electrical appliances & Repairs.
ಸಂಸ್ಥೆಯ ವಿಶೇಷತೆ :
ಸುದೀರ್ಘ 27 ವರ್ಷಗಳ ಶಿಕ್ಷಣ ಕ್ಷೇತ್ರದ ಅನುಭವವಿರುವ ಕೊತ್ತಾಡಿ ಉಮೇಶ ಶೆಟ್ಟಿಯವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತಿಭಾವಂತ ಪ್ರಾಧ್ಯಾಪಕರ ತಂಡ. ಯುನಿವರ್ಸಿಟಿ ರ್ಯಾಂಕ್ ಪಡೆದವರು , ಸಾಂಸ್ಕೃತಿಕ ಆಸಕ್ತರು, ರಂಗಭೂಮಿ ಆಸಕ್ತರು, ನಿರ್ದೇಶನದಲ್ಲಿ ನೈಪುಣ್ಯರು, ವಾಗ್ಮಿಗಳು, ಉತ್ತಮ ನಿರೂಪಕರು, ಸಂಗೀತಗಾರರು ಹೀಗೆ ಬಹುಮುಖ ಪ್ರತಿಭೆಯುಳ್ಳ ಪ್ರಾಧ್ಯಾಪಕರ ಸಮೂಹವಿದೆ.
ಯಕ್ಷಗಾನ ಮತ್ತು ತಾಳಮದ್ದಳೆ ಪ್ರದರ್ಶನ ನೀಡುವ ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳ ಸಮರ್ಥ ತಂಡ .
IQAC ,ಎನ್. ಸಿ. ಸಿ, ಎನ್.ಎಸ್.ಎಸ್ ಘಟಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಲಲಿತಾ ಕಲಾ ಸಂಘ, ಮಹಿಳಾ ವೇದಿಕೆ, ರೋವರ್ಸ್ ಮತ್ತು ರೇಂಜರ್ಸ್ ಘಟಕ, ಯೂತ್ ರೆಡ್ಕ್ರಾಸ್ ಘಟಕ, ಇನ್ನೋವೆಶನ್ ಕ್ಲಬ್,ಯಕ್ಷಗಾನ ಸಂಘ, ಮತ್ತು ರೋಟರ್ಯ್ಯಾಕ್ಟ್ ಕ್ಲಬ್ .
ವಿದ್ಯಾರ್ಥಿಗಳ ವಿವಿಧ ಅಭಿರುಚಿಗೆ ತಕ್ಕಂತೆ 20 ವಿವಿಧ ವೇದಿಕೆಗಳು, ಉತ್ತಮ ಗ್ರಂಥಾಲಯ, ಪ್ರಯೋಗಾಲಯಗಳು ಮತ್ತು 1500 ವಿದ್ಯಾರ್ಥಿಗಳು ಕುಳಿತು ಕಾರ್ಯಕ್ರಮ ನೋಡಬಲ್ಲ ವಿಶಾಲವಾದ ಕೇರಳ ಮಾದರಿಯ ಸಭಾಂಗಣ.
ಪೋಷಕ – ಶಿಕ್ಷಕರ ನಿರಂತರ ಸಂಪರ್ಕ, ಚರ್ಚೆ ಮತ್ತು ಪೋಷಕರ ಸಲಹೆಗಳಿಗೆ ಸ್ಪಂದನೆ.
ಹೆಮ್ಮೆಯ ಪ್ರಾಕ್ತನ ವಿದ್ಯಾರ್ಥಿ ಸಂಘ.
ಅನ್ನಪೂರ್ಣ ಕ್ಯಾಂಟೀನ್ & ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನ ಭೋಜನ. ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ.
ಸಂಸ್ಥೆಯ ಹೆಮ್ಮೆ :
ಮಂಗಳೂರು ವಿ ವಿ ರ್ಯಾಂಕ್ ವಿಜೇತರು 1) ಕಾವ್ಯ ದೇವಾಡಿಗ – ಬಿ ಸಿ ಎ ಪ್ರಥಮ ರ್ಯಾಂಕ್ 2) ಅಕ್ಷಯ್ ಶೆಟ್ಟಿ – ಬಿಎಸ್ಸಿ ದ್ವಿತೀಯ ರ್ಯಾಂಕ್ 3)ಶುಭ ಲಕ್ಷ್ಮೀ- ಬಿ .ಬಿ .ಎ ತ್ರತೀಯ ರ್ಯಾಂಕ್ 4) ಸುಮಧುರ ಶೆಟ್ಟಿ – ಬಿ ಸಿ ಎ ಚತುರ್ಥ ರ್ಯಾಂಕ್ 5) ಒಶಿನ್ ಪುಮಾ ಡಿ,ಸೋಜಾ – ಬಿ .ಬಿ .ಎ ತ್ರತೀಯ ರ್ಯಾಂಕ್ 6) ನೇಹಾ ಪ್ರಭು – ಬಿ.ಕಾಂ ಎಂಟನೇ ರ್ಯಾಂಕ್ 7)ಅಕ್ಷತಾ – ಬಿ.ಕಾಂ ಒಂಬತ್ತನೇ ನೇ ರ್ಯಾಂಕ್ ಇತ್ಯಾದಿ .
ಚಿನ್ನದ ಪದಕ ವಿಜೇತರು :1) ರಮ್ಯಾಶ್ರೀ ಶೆಟ್ಟಿ 2)ದೀಪ ದೇವಾಡಿಗ 3)ಜ್ಯೋತಿ ಗಾಣಿಗ 4) ಪ್ರತೀಕ್ಷಾ ಶೆಟ್ಟಿ 5) ಅಂಕಿತ ಶೆಣೈ 6) ಬಿ. ಬಿ ಹಾಜೀರ 7) ಅನನ್ಯ ಜಿ 8) ಸುಚಿತ್ರಾ ಎಸ್ ಶೆಟ್ಟಿ
ಕುಶ ಪೂಜಾರಿ ಮತ್ತು ದಿವ್ಯಾ ಶೆಟ್ಟಿ ರಾಷ್ಟ್ರಮಟ್ಟದ ಯೋಗಪಟುಗಳು.
ಸಂದೀಪ್ ದೇವಾಡಿಗ ರಾಷ್ಟ್ರ ಮಟ್ಟದ ಸಾಪ್ಟ್ಬಾಲ್ ಆಟಗಾರ.
ಸುಕನ್ಯಾ ಶೆಟ್ಟಿ ರಾಷ್ಟ್ರಮಟ್ಟದ ಚೆಸ್ ಆಟಗಾರ್ತಿ.
ಜಾಕ್ಸನ್ ಡಿ’ಸೋಜಾ ರಾಷ್ಟ್ರಮಟ್ಟದ ಪವರ್ ಲಿಪ್ಟರ್.
ಸನತ್ ಅಡಿಗ ಮತ್ತು ಕಾರ್ತಿಕ ಶೆಟ್ಟಿ R.D ಕ್ಯಾಂಪ್ನಲ್ಲಿ ವಿ.ವಿ ಪ್ರತಿನಿಧಿಗಳಾಗಿ ಭಾಗವಹಿಸುವಿಕೆ.
ಪ್ರತೀತ್ ಎನ್.ಶೆಟ್ಟಿ ಅಖಿಲ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಪುರುಷರ ವಿಭಾಗದ ಕಿಕ್ ಬಾಕ್ಸಿಂಗ್ ಪಟು
ನಿಖಿಲ್ – ವಿಶ್ವವಿದ್ಯಾನಿಲಯ ಮಟ್ಟದ ಪವರ್ ಲಿಫ್ಟ್ ರ್
ದಿವ್ಯ – ರಾಷ್ಟ್ರಮಟ್ಟದ ಚೆಸ್ ಆಟಗಾರ್ತಿ.
ಪ್ರವೇಶ ಪ್ರಕ್ರಿಯೆ :
ಕಾಲೇಜು ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಪಾಲಕರು, ವಿದ್ಯಾರ್ಥಿಗಳು ಸಂಪರ್ಕಿಸಿ ದಾಖಲಾತಿ ಮಾಡಿಕೊಳ್ಳಬಹುದು.
ವಿಶಾಲಾಕ್ಷಿ ಬಿ.ಹೆಗ್ಡೆ ಕ್ಯಾಂಪಸ್, ಸಂಗಮ್ ಕುಂದಾಪುರ. 576201
ಕಾಲೇಜು ವೆಬ್ಸೈಟ್ : www.bbhegdecollege.com
ಸಂಪರ್ಕ : ಪ್ರಾಂಶುಪಾಲರು :ಪ್ರೊ.ಕೆ. ಉಮೇಶ್ ಶೆಟ್ಟಿ (9901574789)
ಉಪ ಪ್ರಾಂಶುಪಾಲರು: ಚೇತನ ಕುಮಾರ್ ಶೆಟ್ಟಿ –9980260321
ಕಛೇರಿ: 08254-235588/9844218126