ಎಲ್ಲ ಲೀಲೆಯೂ ನಿನಗೆ ಸ್ವಂತ
ನೀನೇ ಸತ್ಯ ನೀನೇ ನಿತ್ಯ ನೀನೆ ಅನಂತ
ಬಾಯಲ್ಲಿ ಬ್ರಹ್ಮಾಂಡ ತೋರಿದವನು
ನೀನಲ್ಲವೇ ಕೃಷ್ಣ
ಗೀತೆಯ ಸಾರವನ್ನು ಭೋದಿಸಿದವ
ನೀನಲ್ಲವೇ ಕೃಷ್ಣ
ಇಂದ್ರನ ಸೊಕ್ಕಡಗಿಸಿದ
ಗೋವರ್ಧನ ಧಾರಿ ಶ್ರೀಕೃಷ್ಣ
ಕಾಳಿಂಗನ ಮರ್ಧಿಸಿದ
ಮುಕುಂದ ಮುರಾರಿ ಕೃಷ್ಣ
ಕೃಷ್ಣ ಕೃಷ್ಣ ನೀ ಎಂಡೆ
ಜೀವಂಡೆ ತುಡಿಪಾನ್ ಕೃಷ್ಣ..ಶ್ರೀಕೃಷ್ಣ
ಸುಧಾಮನ ಪ್ರಿಯಮಾಧವ
ನೀನಲ್ಲವೇ ಕೃಷ್ಣ
ಪಾಂಡವರ ಕುಲಬಾಂಧವ
ನೀನಲ್ಲವೇ ಕೃಷ್ಣ
ರಾಧೆಯ ಮನದರಸ
ಬೃಂದಾವನ ಕೃಷ್ಣ
ರುಕ್ಮಿಣಿಯ ವರಿಸಿದವ
ಗೋಕುಲದ ಕೃಷ್ಣ
ವಸುದೇವ ದೇವಕಿ ದಂಪತಿಯ
ಸುಪುತ್ರ ನೀನೆ ವಟಪತ್ರ ಕೃಷ್ಣ
ವಿಷವುಣಿಸಲು ಬಂದ ಪೂತನಿಯ
ಕೊಂದವ ನೀನೆ ಬೆಣ್ಣೆಕೃಷ್ಣ
ಕೃಷ್ಣ ಕೃಷ್ಣ ನೀ ಎಂಡೆ
ಕರಲಿಂಡೆ ಕಸ್ನಮ್…ಶ್ರೀಕೃಷ್ಣ
ದುಷ್ಟರ ಶಿಕ್ಷಿಸುವ ಯೋಗೀಶ್ವರ
ನೀನಲ್ಲವೇ ಕೃಷ್ಣ
ಶಿಷ್ಟರ ರಕ್ಷಿಸುವ ಭಕ್ತವತ್ಸಲ
ನೀನಲ್ಲವೇ ಕೃಷ್ಣ
ಕಂಸನ ವಧಿಸಿದ ಕಡಗೋಲು ಕೃಷ್ಣ
ಶಿಶುಪಾಲನ ಮಣಿಸಿದ ಗೋಪಾಲಕೃಷ್ಣ
ಪಾಂಚಜನ್ಯ ಊದಿದ ಪಾರ್ಥಸಾರಥಿ
ಪಾಂಚಾಲಿಯ ಬಾಳಿನ ದೈವಮೂರ್ತಿ
ಕೃಷ್ಣ ಕೃಷ್ಣ ನೀ ಎಂಡೆ
ಗುರುವಾಯುರಪ್ಪ ಕೃಷ್ಣ.. ಶ್ರೀಕೃಷ್ಣ
ಜಗದೊಳಿತಿಗಾಗಿ ಅವತರಿಸಿದ
ಜಗದೋದ್ಧಾರಕನೇ ಶ್ರೀಕೃಷ್ಣ
ಅನಂತಶಯನದಲಿ ಪವಡಿಸಿದ
ಶ್ರೀಮನ್ನಾರಾಯಣನೇ ಶ್ರೀಕೃಷ್ಣ
ರಚನೆ : ಇರ್ಫಾನ್. ಹ
ಚೆಂದದ ಕವನ ಭಯ್ಯಾ 👏👏👏💐💐💐