ಕಾರ್ಕಳ(ಮೇ,17): ಕಂಪೆನಿ ಸೆಕ್ರೇಟರಿ ಆಫ್ ಇಂಡಿಯಾ ಇದರ ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿ.ಯು ಕಾಲೇಜಿನ 14 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಇನಸ್ಟಿಟ್ಯೂಟ್ ಆಫ್ ಕಂಪೆನಿ ಸಕ್ರೇಟರಿ ಆಫ್ ಇಂಡಿಯಾ ಇದೇ ಮೇ 6 ರಂದು ನಡೆಸಿದ ಸಿ.ಎಸ್.ಇ.ಇ.ಟಿ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಆರ್ಯ ಅಶೋಕ್, ಅನಘ, ಅನಿರುದ್ಧ್, ಧ್ರುವ ಕೆ.ಜಿ, ಅವನೀಶ್ ದೇವಾಡಿಗ, ಓಂಕಾರ್ ಪ್ರಕಾಶ್ ಹೆಗಡೆಯಾಲ್, ಧೃತಿ ಡಿ. ಶೆಟ್ಟಿ, ಕಾನಂಗಿ ಸಮೀಕ್ಷಾ ಹೆಗ್ಡೆ, ಪಾಟೀಲ್ ಶ್ರಾವಣಿ ಅರವಿಂದ್, ವಿಸ್ಮಯ ಹೆಚ್.ಎಸ್ ಮತ್ತು ಧೃತಿ ಆರ್.ಎನ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಮಹತ್ವದ ಪರೀಕ್ಷೆ ಇದಾಗಿದ್ದು ಕ್ರಿಯೇಟಿವ್ನ ವಿದ್ಯಾರ್ಥಿಗಳು ಪಿ ಯು ಸಿ ಕಲಿಕಾ ಸಂಧರ್ಭದಲ್ಲಿ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಆಡಳಿತ ಮಂಡಳಿಯವರು, ಉಪನ್ಯಾಸಕ ವರ್ಗ, ಸಿ.ಎಸ್.ಇ.ಇ.ಟಿ ಸಂಯೋಜಕರಾದ ರಾಘವೇಂದ್ರ ಬಿ .ರಾವ್ ಮತ್ತು ಉಮೇಶ್ ಅಭಿನಂದಿಸಿ, ಶುಭ ಹಾರೈಸಿದ್ದಾರೆ.