ಮಲ್ಪೆ (ಅ, 02) : ಕರೋನಾ ಕಾಲಘಟ್ಟದ ನಡುವೆಯೂ ಬ್ಯಾಂಕಿಂಗ್ ವ್ಯವಹಾರದೊಂದಿಗೆ ಸ್ವಚ್ಛತಾ ಅಭಿಯಾನ, ಆಶಾ ಕಾರ್ಯಕರ್ತರಿಗೆ ಗೌರವಾರ್ಪಣೆಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಕರಾವಳಿ ಭಾಗದ ಪ್ರಸಿದ್ಧ ಬ್ಯಾಂಕ್ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಚಟುವಟಿಕೆಗಳು ಅಭಿನಂದನಾರ್ಹ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ. ಜಿ.ಶಂಕರ್ ಹೇಳಿದರು. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಟೀಮ್ ನೇಷನ್ ಫಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಲ್ಪೆ ಪಡುಕೆರೆ ಶಾಂತಿನಗರ ಬೀಚ್ […]
Day: October 3, 2021
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ದ 2021 – 23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಲೋಹಿತಾಶ್ವ ಆರ್. ಬಾಳಿಕೆರೆ ಆಯ್ಕೆ
ಹೆಮ್ಮಾಡಿ (ಅ, 03) : ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ದ 2021 – 23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಕ್ಟೋಬರ್,03 ರಂದು ಹೆಮ್ಮಾಡಿಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ “ಮತ್ಯಜ್ಯೋತಿ” ಸಭಾಂಗಣದಲ್ಲಿ ಆಯೋಜಿಸಿದ ಹೆಮ್ಮಾಡಿ ಘಟಕದ ವಾರ್ಷಿಕ ಮಹಾಸಭೆ ಮತ್ತು ಸದಸ್ಯತ ಅಭಿಯಾನ ಚಾಲನೆ 2020-21 ಕಾರ್ಯಕ್ರಮದಲ್ಲಿ ನಡೆಯಿತು. ಅಧ್ಯಕ್ಷರಾಗಿ ಲೋಹಿತಾಶ್ವ ಆರ್. ಕುಂದರ್ ಬಾಳಿಕೆರೆ, ಉಪಾಧ್ಯಕ್ಷರಾಗಿ ಚಂದ್ರಶೇಖರ […]
ಸುಣ್ಣಾರಿ ಎಕ್ಸ್ಲೆಂಟ್ ಕಾಲೇಜಿನಲ್ಲಿ ಗಾಂಧೀಜಯಂತಿ ಮತ್ತು ಸ್ವಚ್ಚಾತಾ ಕಾರ್ಯಕ್ರಮ
ಕೋಟೇಶ್ವರ (ಅ, 03) : ಸುಣ್ಣಾರಿ ಎಕ್ಸ್ಲೆಂಟ್ ಕಾಲೇಜು ಮತ್ತು ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಸುಣ್ಣಾರಿಯ ಪರಿಸರದಲ್ಲಿ ಸ್ವಚ್ಚಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್. ರಮೇಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಗಾಂಧೀಜಿಯ ಸರಳ ಬದುಕು ಮತ್ತು ಕರ್ಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆನೀಡಿದರು. ಎಕ್ಸಲೆಂಟ್ ಶಾಲೆಯ ಮೂಖ್ಯೋಪಾಧ್ಯಾಯ ಉಷಾ ಕಿರಣ್ ಎಸ್. ಶೆಟ್ಟಿ […]
ಡಾ। ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ : ಫಿಟ್ ಇಂಡಿಯಾ ರನ್ 2.0 ಜಾಥಾ
ಕುಂದಾಪುರ (ಸೆ, 25) : ಭಾರತ ಸರ್ಕಾರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ-Azadi ka Amruth Mahotsav- India @ 75 “ಫಿಟ್ ಇಂಡಿಯಾ ಫ್ರೀಡಂ ರನ್-2.0” ಜಾಥಾವನ್ನು ಡಾ.ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ಸೆಪ್ಟೆಂಬರ್, 25 ರಂದು ಹಮ್ಮಿಕೊಳ್ಳಲಾಯಿತು. ಎಂಆರ್ಪಿಎಲ್ ಮಂಗಳೂರು ಇಲ್ಲಿನ ಡಾ. ಸಂಪತ್ ಕುಮಾರ್ ಹೆಚ್.ಸಿ ಯವರು ಫಿಟ್ ಇಂಡಿಯಾ ರನ್ 2.0 ಜಾಥಕ್ಕೆ […]
ಅಂಬುಲೆನ್ಸ್ ಸೇವೆಗೆ ಅನುಕೂಲವಾಗಲೆಂದು ನವೀನ ಮಾದರಿಯ “ಸ್ಟ್ರೆಚರ್” ಹಸ್ತಾಂತರ
ಮಲ್ಪೆ (ಅ, 02) : ಜೀವರಕ್ಷಕ ಮತ್ತು ಆಪದ್ಬಾಂಧವ ಎಂದು ಕರೆಲ್ಪಡುವ ಮಲ್ಪೆಯ ಈಶ್ವರ್ ರವರ ಸಮಾಜ ಸೇವೆ ಕಾರ್ಯವನ್ನು ಗುರುತಿಸಿ ಅವರ ಸಮಾಜ ಮುಖಿ ಕಾರ್ಯಕ್ಕೆ ಅನುಕೂಲವಾಗಲೆಂದು ಮಲ್ಪೆಯ ಮತ್ಸ್ಯ ಉದ್ಯಮಿ ಸುರೇಶ್ ರವರು ಅಂಬುಲೆನ್ಸ್ ಸೇವೆಗೆ ಅನುಕೂಲವಾಗಲೆಂದು ನವೀನ ಮಾದರಿಯ “ಸ್ಟ್ರೆಚರ್”ನ್ನು ಉಚಿತವಾಗಿ ನೀಡಿದರು. ಈಶ್ವರ್ ಮಲ್ಪೆ ಈ ಕೊಡುಗೆಯನ್ನು ಸ್ವೀಕರಿಸಿ ಸುರೇಶ್ ರವರಿಗೆ ಅಭಿನಂದನೆ ಮತ್ತು ಕೃತಜ್ಞತೆಯನ್ನು ತಿಳಿಸಿದರು. ವರದಿ ✍️ಈಶ್ವರ್ ಸಿ ನಾವುಂದ.
ಡಾ. ಬಿ. ಬಿ. ಹೆಗ್ಡೆ ಕಾಲೇಜು : ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ
ಕುಂದಾಪುರ (ಅ, 02) : ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ದೇಶದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಬೋಧಕ ಮತ್ತು ಬೋಧಕೇತರರು ಗಾಂಧೀಜಿ ಮತ್ತು ಶಾಸ್ತ್ರೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು.
ವರಸಿದ್ಧಿ ವಿನಾಯಕ ಕಾಲೇಜು ಕೆರಾಡಿ : ಗಾಂಧಿ ಜಯಂತಿ ಆಚರಣೆ
ಕೆರಾಡಿ (ಆ, 02) : ಇಲ್ಲಿನ ವರಸಿದ್ಧಿ ವಿನಾಯಕ ಪ್ರಥಮ ದರ್ಜೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜ್ ನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ್ ಆರ್. ವಹಿಸಿದ್ದು, ಉಪನ್ಯಾಸಕರಾದ ಅರುಣ್ ಕುಮಾರ್, ಅಭಿಜಿತ್ ಹೆಮ್ಮಾಡಿ, ನೇಹಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಿಂಚನ ಸ್ವಾಗತಿಸಿದರು. ನಿಶ್ಮಿತಾ ಧನ್ಯವಾದಗೈದರುಶರಾವತಿ ಕಾರ್ಯಕ್ರಮ ನಿರೂಪಿಸಿದರು.
ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ ಅನಾವರಣ (ನಾಲ್ಕು ವರ್ಷ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಪ್ರಶಸ್ತಿ)
ಕುಂದಾಪುರ (ಅ, 02) : ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ 2019-20ರ ಶೈಕ್ಷಣಿಕ ವರ್ಷದ ‘ಶಿಖರ’ ವಾರ್ಷಿಕ ಸಂಚಿಕೆಯನ್ನು ಎಂಆರ್ಪಿಎಲ್ ಮಂಗಳೂರು ಇಲ್ಲಿನ ಡಾ. ಸಂಪತ್ ಕುಮಾರ್ ಹೆಚ್.ಸಿ. ಯವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ ವಿಶ್ವವಿದ್ಯಾನಿಲಯದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ವಾರ್ಷಿಕ ಸಂಚಿಕೆ ವರ್ಷದ ಕಾರ್ಯಕ್ರಮಗಳ ಜೊತೆಗೆ ಸಂಸ್ಥೆಯ ಗುಣಮಟ್ಟದ ಪ್ರತೀಕ ಆಗಿರುತ್ತದೆ ಎಂದು […]
ಮರೆಯಲಾಗದ ಕಾಲೇಜು ನೆನಪು….
ನೆನಪುಗಳ ಮಾತು ಮಧುರ ಎಂಬ ಮಾತು ಎಷ್ಟು ಅರ್ಥಪೂರ್ಣವಾಗಿದೆ ಅಲ್ವ?.. ನನ್ನ ಜೀವನದಲ್ಲಿ ನನಗೆ ಅಚ್ಚೆಳೆದು ಉಳಿದ ನೆನಪು ಎಂದರೆ ಅದು ನನ್ನ ಕಾಲೇಜು ದಿನದ ನೆನಪುಗಳು. ಆ ದಿನವನ್ನೆಲ್ಲಾ ಮತ್ತೇ ನೆನಪಿಸಿಕೊಂಡರೆ ಕಣ್ಣಿನಂಚಿನಲ್ಲಿ ಕಂಬನಿ ಮೂಡುತ್ತದೆ. ಪಿಯುಸಿ ಮುಗಿದಿತ್ತು. ಮುಂದೇನು ಎಂಬ ಪ್ರಶ್ನೆ? ಮನೆಯವರ ಆಸೆ ಈಡೇರಿಸಲಾ? ಅಕ್ಕಪಕ್ಕದ ಮನೆಯವರ ಆಸೆ ಈಡೇರಿಸಲಾ ? ನನ್ನ ಆಸೆ ಈಡೇರಿಸಿಕೊಳ್ಳಲಾ? ಎಂಬ ಗೊಂದಲ.. ಅದೇನೇ ಆಗಲಿ ಎಂದು ಒಂದೆರಡು ಕಾಲೇಜಿನ […]
ಸರಸ್ವತಿ ವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಗಂಗೊಳ್ಳಿ (ಅ, 02 ): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳು ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಇಂಡೋರ್ ಸ್ಟೇಡಿಯಂನಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಗಂಗೊಳ್ಳಿಯ ಅಧ್ಯಕ್ಷರಾದ ರಾಜೇಶ್ ಎಂ. ಜಿ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಲಯನ್ಸ್ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವಯಂಸೇವಕರನ್ನುಉದ್ದೇಶಿಸಿ ರಾಷ್ಟ್ರೀಯ ಸೇವಾ ಯೋಜನೆ ಯಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು […]