ಬ್ರಹ್ಮಾವರ(ಜೂ,23): ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ಕಟ್ಟೆಇಲ್ಲಿ ಜೆ ಸಿ ಐ ಸೆವಾಮೆ ಬ್ರಹ್ಮಾವರ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಿದ್ಕಲ್ ಕಟ್ಟೆ ,ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ (ರಿ) ಹೈಕಾಡಿ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಉದಯ ಕುಮಾರ ಶೆಟ್ಟಿ ಉದ್ಘಾಟಿಸಿದರು. ಐಟಿಐ ನ ಪ್ರಾಚಾರ್ಯರಾದ ಗಂಗಾಧರಪ್ಪನವರು ಮುಖ್ಯ ಅತಿಥಿಗಳಾಗಿದ್ದರು. ಬಿದ್ಕಲ್ಕಟ್ಟೆ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ರಾಘವೇಂದ್ರ ಹೆಬ್ಬಾರ್ ,ಇಂಡಿಯನ್ ರೆಡ್ ಕ್ರಾಸ್ ನ ಡಾ. ಸಿಕಂದರ್ ಪುರೋಹಿತ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು .
ಜೆಸಿ ವಲಯಾಧಿಕಾರಿ ವಿಜಯನರಸಿಂಹ ಐತಾಳ್ ,ಜೆಸಿ ಬ್ರಹ್ಮಾವರ ಸೇವಾಮೆ ಅಧ್ಯಕ್ಷರಾದ ಕೃಷ್ಣಮೂರ್ತಿ ಹೈಕಾಡಿ ಹಾಗೂ ಸದಸ್ಯರು ಇಂಡಿಯನ್ ರೆಡ್ ಕ್ರಾಸ್ ಸಿಬ್ಬಂದಿಗಳು ಬಿದ್ಕಲ್ಕಟ್ಟೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯ ಶ್ರೀ ಸತೀಶ್ ಶ್ರೀ ಪ್ರಸನ್ನ ಮತ್ತು ಸಿಬ್ಬಂದಿವರ್ಗದವರು , ಜೆಸಿ ಕೃಪಾ ಹೆಬ್ಬಾರ್ ಜೆಸಿ ಜಯಂತಿ, ಜೆಸಿ ಸಂದೀಪ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು . ನಾಲ್ವರು ಅದೃಷ್ಟಶಾಲಿ ರಕ್ತದಾನಿಗಳಿಗೆ ಬಹುಮಾನ ನೀಡಲಾಯಿತು.