ಕುಂದಾಪುರ(ಆ,26): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು ಎಂಟು ವರ್ಷಗಳಿಂದ ಆಂಗ್ಲಭಾಷಾ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ್ದ ಶ್ರೀಮತಿ ಮೇರಿ ಅಶ್ವಿನಿ ವಿ ಅವರ ಸ್ವಂತ ಊರು ಮೈಸೂರಿಗೆ ವರ್ಗಾವಣೆ ಹೊಂದಿದ್ದು, ಆ ಪ್ರಯುಕ್ತ ಅವರಿಗೆ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ ಜಿ ಅಧ್ಯಕ್ಷತೆ ವಹಿಸಿ ಶ್ರೀಮತಿ ಮೇರಿ ಅಶ್ವಿನಿ ವಿ ರವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಶ್ರೀ ಭುಜಂಗ ಶೆಟ್ಟಿ ಶುಭ, ಕಿಶೋರ ಹಂದೆ ಕೆ, ಶ್ರೀಮತಿ ವನಿತಾ ನಾಯ್ಕ ಶುಭ ಹಾರೈಸಿದರು.
ಗೌರವ ಸ್ವೀಕರಿಸಿದ ಶ್ರೀಮತಿ ಮೇರಿ ಅಶ್ವಿನಿ ವಿ ಈ ಸಂಸ್ಥೆಯಲ್ಲಿ ತನ್ನ ಸೇವೆ ಬಗ್ಗೆ ಮೆಲುಕು ಹಾಕಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಉಪನ್ಯಾಸಕ ಶ್ರೀ ಶಿವಾನಂದ ನಾಯಕ ವಂದಿಸಿದರು. ಉಪನ್ಯಾಸಕ ಶ್ರೀ ಉದಯ ಕುಮಾರ ಶೆಟ್ಟಿ ಕಾಳಾವರ ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು.