ಕುಂದಾಪುರ : (ಮೇ 21): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಕೈಗಾರಿಕಾ ಘಟಕಕ್ಕೆ ಭೇಟಿ ನೀಡದರು.ಮಣಿಪಾಲದ ಅರ್ಮೊರ್ ಕಾರ್ಟೊನ್ಸ್ ಮತ್ತು ಉದಯವಾಣಿ ಪ್ರೆಸ್ಗೆ ಭೇಟಿ ನೀಡಿ ಅಲ್ಲಿನ ಕಾರ್ಯವಿಧಾನದ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಅರ್ಮೊರ್ ಕಾರ್ಟೊನ್ಸ್ನ ಮ್ಯಾನೇಜರ್ ಪ್ರಶಾಂತ್ ಕಾಮತ್, ಕ್ವಾಲಿಟಿ ಇಂಜಿನಿಯರ್ ಪ್ರತಿಭಾ ಕೈಗಾರಿಕಾ ನಿರ್ವಹಣೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಮಣಿಪಾಲ ಉದಯವಾಣಿ ಪ್ರೆಸ್ನ ಮುದ್ರಣ ವ್ಯವಸ್ಥಾಪಕ ನಾಗರಾಜ ಭಂಡಾರಿ ಮುದ್ರಣ ಪ್ರಕ್ರಿಯೆಯ ಬಗ್ಗೆ ಮತ್ತು ಸುದ್ದಿ ಸಂಪಾದಕರಾದ ರಾಜೇಶ್ ಮುಲ್ಕಿ ಸುದ್ದಿಮನೆ ಸಂಗ್ರಹಣೆ ಮತ್ತು ವರದಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.ಅಂತಿಮ ಬಿ.ಕಾಂ. ತರಗತಿಯ 55 ವಿದ್ಯಾರ್ಥಿಗಳು ಭಾಗವಹಿಸಿ, ಕೈಗಾರಿಕಾ ಹಾಗೂ ಮುದ್ರಣ ಪ್ರಕ್ರಿಯೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್, ಉಪನ್ಯಾಸಕರಾದ ರಾಜೇಶ್ ಶೆಟ್ಟಿ, ಶರತ್ ಕುಮಾರ್ ಉಪಸ್ಥಿತರಿದ್ದರು.