ಕುಂದಾಪುರ (ಆ,30): ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಇವರು ಆಯೋಜಿಸಿದ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (AKSKA) ಮತ್ತು ಕರಾಟೆ ಇಂಡಿಯಾ ಆರ್ಗನೈಸೇಷನ್(KIO) ಇವರ ಸಂಯೋಜನೆಯಲ್ಲಿ ಆಗಸ್ಟ್ 27ರಂದು ಪರ್ಕಳದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಫೀಯೋನಿಕ್ಸ್ ಅಕಾಡೆಮಿ ಇಂಡಿಯಾ ಸಂಸ್ಥೆಯ ಕರಾಟೆ ಪಟುಗಳು 11 ಚಿನ್ನದ ಪದಕ, 9 ಬೆಳ್ಳಿಯ ಪದಕ ಮತ್ತು 4 ಕಂಚಿನ ಪದಕವನ್ನು ಗೆಲ್ಲುವ ಮುಖಾಂತರ ಸಂಸ್ಥೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಫೀಯೋನಿಕ್ಸ್ ಅಕಾಡೆಮಿ ಇಂಡಿಯಾ ಇದರ ಮುಖ್ಯಸ್ಥ ಶಿಹಾನ್ ಕೀರ್ತಿ ಜಿಕೆ ಹಾಗೂ ಇವರ ಶಿಷ್ಯ ಕೋಚ್ ಅಕ್ಷಯ್ ಹೆಮ್ಮಾಡಿಯವರು ಈ ಕರಾಟೆ ಪಟುಗಳಿಗೆ ತರಬೇತಿ ನೀಡಿರುತ್ತಾರೆ. ಗೆದ್ದು ಸಂಸ್ಥೆಗೆ ಒಂದು ಬಹುದೊಡ್ಡ ಕೀರ್ತಿಯನ್ನು ತಂದಂತಹ ಪ್ರತಿಭೆಗಳಿಗೆ ಸಂಸ್ಥೆ ಹಾಗೂ ಸಂಸ್ಥೆಯ ಕೋಚ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.