“ಗುರು ಬ್ರಹ್ಮ,ಗುರು ವಿಷ್ಣು,ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮತಿ ಶ್ರೀ ಗುರುದೇವೋ ನಮಃ” ಮತ್ತು “ಮಾತೃದೇವೋಭವ,ಪಿತೃದೇವೋಭವ,ಆಚಾರ್ಯ ದೇವೋಭವ” ಎಂಬ ಸಂಸ್ಕೃತ ಶ್ಲೋಕಗಳು, “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಪುರಂದರ ದಾಸರ ನುಡಿ, ಮುಂದೆ ಗುರಿ, ಹಿಂದೆ ಗುರು ಇದ್ದವನು ಏನನ್ನು ಬೇಕಾದರೂ ಸಾಧಿಸುತ್ತಾನೆ ಎಂಬ ಹೇಳಿಕೆ ಗುರುವಿನ ಮಹತ್ವವನ್ನು ಸಾರುತ್ತವೆ.
ಮಕ್ಕಳ ಮೊದಲ ಗುರುವಾದ ತಾಯಿ ಈ ಜಗತ್ತಿನಲ್ಲಿ ಮಹತ್ವದ ಮತ್ತು ಪ್ರಥಮ ಸ್ಥಾನ ಪಡೆದಿದ್ದರೆ ನಂತರದ ಸ್ಥಾನ ಈ ಜಗತ್ತಿನಲ್ಲಿ ಪಡೆದಿರುವುದು ಗುರು. ಪ್ರಾಚೀನ ಕಾಲದಿಂದಲೂ ಗುರುವಿಗೆ ಪೂಜನೀಯ ಸ್ಥಾನವಿದೆ.ಗುರುಗಳಲ್ಲಿ ಬ್ರಹ್ಮ,ವಿಷ್ಣು,ಮಹೇಶ್ವರ ಅಂದರೆ,ತ್ರಿಮೂರ್ತಿಗಳ ಎಲ್ಲಾ ಗುಣಗಳು ಮಿಳಿತವಾಗಿವೆ.ಸೃಷ್ಠಿ,ಸ್ಥಿತಿ ಮತ್ತು ಲಯಗಳಿಗೆ ತ್ರಿಮೂರ್ತಿಗಳು ಹೇಗೆ ಕಾರಣರೋ ಹಾಗೆಯೇ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಉನ್ನತಿಗೆ ಒಬ್ಬ ಸಮರ್ಥ ಗುರುವಿನ ಮಾರ್ಗದರ್ಶನ ಅವಶ್ಯಕ.
ತ್ರಿಮೂರ್ತಿಗಳು ಜಗತ್ತನ್ನು ಸೃಷ್ಠಿಸಿದರೆ ಒಬ್ಬ ಗುರು ಅದೆಷ್ಟೋ ಮುಗ್ದ ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ.ಹಾಗಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿನ ಪಾತ್ರ ಅಪಾರ.ಮನುಷ್ಯರ ವ್ಯಕ್ತಿತ್ವದ ನಿರ್ಮಾಣದ ನಿಜವಾದ ಶಿಲ್ಪಿಗಳು ಗುರುಗಳು.ಅವರೇ ದೇಶದ ಭವಿಷ್ಯದ ನಿಜವಾದ ರೂವಾರಿಗಳು. ‘ಮನದ ಕತ್ತಲನ್ನು ದೂರ ಸರಿಸಿ ಜ್ಞಾನದ ಬೆಳಕನ್ನು ಬೆಳಗಿಸುವವನೇ ಗುರು’.‘A good teacher is like a candle, it consumes itself to light the way for others’.. ಅಂದರೆ ಯಾರು ತಮ್ಮ ಜೀವನವನ್ನು ಮೇಣದ ಬತ್ತಿಯಂತೆ ಕರಗಿಸಿಕೊಂಡು ಮತ್ತೊಬ್ಬರಿಗೆ ಬೆಳಕನ್ನು ನೀಡುತ್ತಾರೋ ಅವರೇ ಅತ್ಯುತ್ತಮ ಶಿಕ್ಷಕ.
ಆದರ್ಶ ಶಿಕ್ಷಕ ತಮ್ಮನ್ನೇ ಸಮರ್ಪಿಸಿಕೊಂಡು ಅದೆಷ್ಟೋ ಅಸಂಖ್ಯಾತ ವಿದ್ಯಾರ್ಥಿಗಳ ಬಾಳನ್ನು ಬೆಳಗುತ್ತಾನೆ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಿಸಿ ಒಳ್ಳೆಯದನ್ನು ಮಾಡಿದಾಗ ಪ್ರೋತ್ಸಾಹಿಸಿ ಅವರ ಔನ್ನತ್ಯಕ್ಕೆ ಸಹಕರಿಸಿ,ಜೀವನ ಮೌಲ್ಯಗಳನ್ನು ರೂಢಿಸಿ,ಆದರ್ಶ-ಸಿದ್ದಾಂತಗಳ ಅರಿವನ್ನು ಮೂಡಿಸುವಂತಹ ಮಹತ್ಕಾರ್ಯ ಗುರುವಿನಿಂದ ಮಾತ್ರ ಸಾಧ್ಯ. ಈ ಗುರು ಕರ್ತವ್ಯದಿಂದ ವಿಮುಖನಾದರೆ ಸಾವಿರಾರು ವಿದ್ಯಾರ್ಥಿಗಳ ಆದರ್ಶ ಬದುಕೆ ಹಾಳಾಗುತ್ತದೆ.ಅದು ದೇಶದ ಸಂಸ್ಕೃತಿ ನಾಶಕ್ಕೆ ಕಾರಣವಾಗುತ್ತದೆ.ಹಾಗಾಗಿ ‘ಬುದ್ದಿ ಕಲಿಸದ ತಂದೆ,ವಿದ್ಯೆ ಕಲಿಸದ ಗುರು,ಬಿದ್ದರಲು ಬಂದು ನೋಡದ ತಾಯಿ ಶುದ್ದ ವೈರಿಗಳು ಸರ್ವಜ್ಞ’ ಎಂದು ಸರ್ವಜ್ಞ ಹೇಳಿದ್ದು. ಇಂಥಹ ಗುರುವನ್ನು ಸ್ಮರಿಸುವ,ಪೂಜಿಸುವ ಮತ್ತು ಆರಾಧಿಸುವ ದಿನವೇ ಶಿಕ್ಷಕರ ದಿನಾಚರಣೆ.
ಈ ಶಿಕ್ಷರ ದಿನಾಚರಣೆ ಒಂದು ಸಾರ್ವತ್ರಿಕ ದಿನಾಚರಣೆಯಾಗಿದ್ದು ಜಗತ್ತಿನ 100ಕ್ಕೂ ಹೆಚ್ಚಿನ ರಾಷ್ಟçಗಳು ಶಿಕ್ಷಕರ ದಿನಾಚರಣೆಯನ್ನು ವರ್ಷದ ಬೇರೆ ಬೇರೆ ದಿನಾಂಕದAದು ಆಚರಿಸುತ್ತವೆ. ಸೆಪ್ಟಂಬರ್ 1 ರಂದು ಸಿಂಗಾಪೂರ್,ಸೆಪ್ಟoಬರ್ 10 ರoದು ಚೀನಾ ಮತ್ತು ಹಾಂಕಾoಗ್, ಅಕ್ಟೋಬರ್ 4 ರಂದು ಬಾಂಗ್ಲಾದಲ್ಲಿ, ಅಕ್ಟೋಬರ್ 5 ರಂದು ಪಾಕಿಸ್ತಾನ, ಆಫ್ಘಾನಿಸ್ತಾನ,ಬಲ್ಗೇರಿಯಾ-ಹೀಗೆ ಇನ್ನೂ ಅನೇಕ ರಾಷ್ಟ್ರಗಳು ನಮ್ಮಂತೆ ಬೇರೆ ಬೇರೆ ದಿನಾಂಕದoದು ಆಚರಿಸುತ್ತವೆ. ಆದರೆ ವಿಶ್ವಸಂಸ್ಥೆಯ ಅಂಗಸoಸ್ಥೆಯಾದ UNESCO 1994 ರಂದು ಅಕ್ಟೋಬರ್ 5 ನೇ ತಾರೀಖನ್ನು “ವಿಶ್ವ ಶಿಕ್ಷಕರ ದಿನಾಚರಣೆ” ಎಂದು ಘೋಷಿಸಿದೆ.
ಇದಕ್ಕೆ ಭಾರತವೇ ಸ್ಪೂರ್ತಿ ಆದರೆ ನಮ್ಮ ಭಾರತದಲ್ಲಿ ಸೆಪ್ಟಂಬರ್ 5 ರಂದು ಆಚರಿಸುತ್ತಿದ್ದೇವೆ. ಕಾರಣ ಸೆಪ್ಟಂಬರ್ 5 ರಂದು ನಮ್ಮ ಭಾರತದ 2ನೇ ರಾಷ್ಟçಪತಿ(1962-67) ಹಾಗೂ ಪ್ರಪ್ರಥಮ ಉಪರಾಷ್ಟçಪತಿಯಾಗಿದ್ದ(1952-1962) ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರು ಹುಟ್ಟಿದ ದಿನ.ರಾಧಾಕೃಷ್ಣನ್ ರಾಷ್ಟçಪತಿಯಾದ ಮೇಲೆ(1962) ಅವರ ಅನೇಕ ಶಿಷ್ಯರು,ಆಪ್ತರು,ಅಭಿಮಾನಿಗಳು,ಸ್ನೇಹಿತರು ಮತ್ತು ಬಂಧುಗಳು ಅವರಲ್ಲಿಗೆ ಹೋಗಿ ಸೆಪ್ಟಂಬರ್ 5 ನ್ನು ತಮ್ಮ ಹುಟ್ಟು ಹಬ್ಬವನ್ನಾಗಿ ವಿಜೃಂಭಣೆಯಿoದ ಆಚರಿಸಲು ಒಪ್ಪಿಗೆ ನೀಡಬೇಕೆಂದು ಕೇಳಿದಾಗ ಅದಕ್ಕೊಪದ ಅವರು ಶಿಕ್ಷಕರನ್ನು ಮತ್ತು ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ಹೀಗೆಂದರು-‘ಶಿಕ್ಷಕ ಸಮುದಾಯ ಒಂದು ರಾಷ್ಟ್ರದ ಭವಿಷ್ಯವನ್ನು ಬದಲಿಸುವ ದಿವ್ಯ ಶಕ್ತಿಯಾಗಿದೆ. ಆದ್ದರಿಂದ ನನ್ನ ಹುಟ್ಟು ಹಬ್ಬವನ್ನು ಆಚರಿಸುವ ಬದಲು ಆ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿದರೆ ನನಗೆ ಹೆಮ್ಮೆಯೆನಿಸುತ್ತದೆ ಎಂದರು.
ಹಾಗಾಗಿ ಅವರ ಅಭಿಲಾಷೆಯಂತೆ ಅಂದಿನಿAದ ಇಂದಿನವರೆಗೂ ಆ ದಿನವನ್ನು ಶಿಕ್ಷಕರ ದಿನಾಚರಣೆಯೆಂದು ಆಚರಿಸಿಕೊಂಡು ಬರುತ್ತಿದ್ದೇವೆ. ಡಾ.ರಾಧಾಕೃಷ್ಣನ್ 1888ರ ಸೆಪ್ಟಂಬರ್ 5 ರಂದು ತಮಿಳುನಾಡು ಮತ್ತು ಆಂದ್ರಪ್ರದೇಶದ ಗಡಿಪ್ರದೇಶದ ಚಿತ್ತೂರು ಜಿಲ್ಲೆಯ ತಿರುತ್ತಣಿಯಲ್ಲಿ ಸರ್ವಪಲ್ಲಿ ವೀರಸ್ವಾಮಿ ಮತ್ತು ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದರು.ಇವರ ಮೂಲ ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸರ್ವಪಲ್ಲಿಯಾಗಿರುವುದರಿಂದ ಇವರನ್ನು ಸರ್ವಪಲ್ಲಿ ರಾಧಾಕೃಷ್ಣ ಎಂದು ಕರೆಯಲಾಗುತ್ತಿರುವುದು.ಇವರು ಭಾರತ ಕಂಡ ಉತ್ತಮ ರಾಷ್ಟ್ರಪತಿ ಮಾತ್ರವಲ್ಲ,ಶಿಕ್ಷಣ ತಜ್ಞ,ತತ್ವಶಾಸ್ತçಜ್ಞ,ರಾಯಭಾರಿ ಮತ್ತು ಉಪಕುಲಪತಿಗಳಾಗಿಯೂ ಉತ್ತಮ ಸೇವೆಸಲ್ಲಿಸಿ ಸೈಎನಿಸಿಕೊಂಡಿದ್ದಾರೆ.ಇವರು ಶಿಕ್ಷಕರನ್ನು ‘ವಿದ್ಯಾರ್ಥಿಗಳ ಭವಿಷ್ಯದ ಬೆನ್ನೆಲುಬು’ ಎಂದು ನಂಬಿದ್ದರು.ಇವರು 1952 ರಿಂದ 1962ರವರೆಗೆ ಉಪರಾಷ್ಟ್ರಪತಿಗಳಾಗಿ,1962 ರಿಂದ 1967ರವರೆಗೆ ರಾಷ್ಟ್ರಪತಿಗಳಾಗಿ ಸೇವೆಸಲ್ಲಿಸಿದ್ದಾರೆ.1975 ಏಪ್ರಿಲ್ 17 ರಂದು ಮರಣಹೊಂದಿದರು.
ಈ ಚರಣೆಯು ಅರ್ಥಗರ್ಭಿತವಾಗುವುದು ಕೇವಲ ಆಚರಣೆಯಿಂದಲ್ಲ ಬದಲಾಗಿ ಶಿಕ್ಷಕ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಉನ್ನತ ಸಾಧನೆಯಿಂದ ಹಾಗಾಗಿ ತಮ್ಮ ವೃತ್ತಿಗೆ ಎರಡು ಬಗೆಯುವುದಿಲ್ಲ ಎಂಬ ಪ್ರತಿಜ್ಞೆ ಶಿಕ್ಷಕನದಾಗಿರಬೇಕು ಹಾಗೆಯೇ ಶಿಕ್ಷಕರನ್ನು ಅತೃಪ್ತಿಯಲ್ಲಿಡುವುದಿಲ್ಲ ಎಂಬುದು ಸರ್ಕಾರದ ಬದ್ದತೆಯಾಗಬೇಕು. ಆಗಲೇ ಶಿಕ್ಷಕ ದಿನಾಚರಣೆ ಅರ್ಥಪೂರ್ಣವಾಗುವುದು. ಎ.ಪಿ.ಜೆ.ಅಬ್ದುಲ್ ಕಲಾಂ ಹೇಳಿದಂತೆ ‘ಶಿಕ್ಷಕರು ವಿದ್ಯಾರ್ಥಿಗಳ ರೋಲ್ಮಾಡೆಲ್ಆದರೆ ಭಾರತ ಮತ್ತಷ್ಟು ಪ್ರಕಾಶಿಸಲು ಕಾರಣವಾಗುತ್ತದೆ’.ಹಾಗೆಯೇ ನೆಲ್ಸನ್ ಮಂಡೆಲಾ ಹೇಳಿದಂತೆ ‘ಜಗತ್ತನ್ನು ಬದಲಾಯಿಸಲು ಇರುವ ಅತ್ಯಂತ ಶಕ್ತಿಶಾಲಿ ಆಯುಧ ಶಿಕ್ಷಣ,ಅದು ಶಿಕ್ಷಕನ ಕೈಯಲ್ಲಿದೆ’ ಎoಬುದನ್ನು ಶಿಕ್ಷಕ ಮರೆಯಬಾರದು.
ಲೇಖನ: ಜಿ.ಆರ್.ಕೇಶವಮೂರ್ತಿ
ಉಪನ್ಯಾಸಕರು
ಬೆಂಗಳೂರು