ಕುಂದಾಪುರ( ಸೆ,18): ರಾಜ್ಯದ ಹಲವು ಜಿಲ್ಲೆಯ ಅದೇಷ್ಟೋ ಜನರ ಬದುಕಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿರುವ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಸಂಸ್ಥೆಯು ಕೋಟೇಶ್ವರದ ಬೀಜಾಡಿಯ ನಿವಾಸಿ ಹೃದಯ ಸಂಭಂದಿ ಅನಾರೋಗ್ಯದಿಂದ ಬಳಲುತ್ತಿರುವ ಕೃಷ್ಣ ಎನ್ನುವವರ ವೈದ್ಯಕೀಯ ಚಿಕಿತ್ಸೆಗೆ ಮಾನವೀಯ ನೆಲೆಯ ಸಹಾಯ ಹಸ್ತ ಚಾಚಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಜವಾಬ್ದಾರಿ ಕೃಷ್ಣರವರ ಪತ್ನಿಯ ಮೆಲೆ ಇರುವುದರಿಂದ ಅವರು ಧನ ಸಹಾಯ ಕೋರಿ ಜೈ ಕುಂದಾಪ್ರ ಸಂಸ್ಥೆಗೆ ಮನವಿ ನೀಡಿದ್ದರು.
ಈ ಮನವಿಯ ಮೇರೆಗೆ 5000/- ರೂಗಳ ಚೆಕ್ ಸಹಾಯ ಹಸ್ತ ಹಸ್ತಾಂತರ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನೀಡಲಾಯಿತು, ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಪುಂಡಲೀಕ ಮೊಗವೀರ, ಪದಾಧಿಕಾರಿಗಳಾದ ಮನೀಶ್ ಕುಲಾಲ್ ಜನ್ನಾಡಿ, ಸಂದೀಪ್ ಅರಿವೆ ಕೋಟೇಶ್ವರ, ಜಯರಾಜ್ ಅಂಕದಕಟ್ಟೆ, ರತ್ನಾಕರ್ ಕುಂಭಾಶಿ, ಉಪಸ್ಥಿತರಿದ್ದರು.