ಕುಂದಾಪುರ(ಸೆ.21): ಇಲ್ಲಿನ ಎಂಐಟಿ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24ರ ಅಂಗವಾಗಿ, ಎನ್ಐಟಿಕೆ ಸುರತ್ಕಲ್ನ ಸಿಎಸ್ಇ ವಿಭಾಗದ ಪ್ರಾಧ್ಯಾಪಕ ಡಾ. ಮೋಹಿತ್ ತಹಿಲಿಯಾನಿ ಅವರಿಂದ ವೃತ್ತಿಪರ ಬೆಳವಣಿಗೆಯಲ್ಲಿ ಸಂಘದ ಸದಸ್ಯತ್ವದ ಪಾತ್ರ*ವಿಷಯದ ಕುರಿತು ಸಂವಾದವನ್ನು ಏರ್ಪಡಿಸಲಾಗಿತ್ತು.
ಅವರು ವಿದ್ಯಾರ್ಥಿಗಳಿಗೆ ಅದರ ಪ್ರಾಮುಖ್ಯತೆ, ಅನುಕೂಲಗಳು, ಸ್ಕಾಲರ್ಶಿಪ್ಗಳು ಮತ್ತು ವಿದ್ಯಾರ್ಥಿಗಳು ವೃತ್ತಿಪರ ಸಂಸ್ಥೆಗಳ ಸದಸ್ಯರಾಗಿದ್ದರೆ ಅವರಿಗೆ ಇರುವ ಜಾಗತಿಕ ಅವಕಾಶಗಳನ್ನು ಐಇಇಇ ಯ ಉದಾಹರಣೆಯನ್ನು ಉಲ್ಲೇಖಿಸಿ ವಿವರಿಸಿದರು. ಸದಸ್ಯತ್ವ ಶುಲ್ಕವನ್ನು ಪಾವತಿಸಿ ವೃತ್ತಿಪರ ಸಂಸ್ಥೆಗಳ ಸದಸ್ಯರಾಗುವುದೊಂದೆ ಸಾಕಾಗುವುದಿಲ್ಲ ಆದರೆ ವಿದ್ಯಾರ್ಥಿಗಳು ಅದರೊಂದಿಗೆ ಬರುವ ಉತ್ತಮ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು. ವಿದ್ಯಾರ್ಥಿನಿ, ಶ್ರೀಮತಿ ಸುಶ್ಮಿತಾ ವಂದಿಸಿದರು, ಪ್ರೊ.ವರುಣ್ ಕುಮಾರ್ ಮತ್ತು ಪ್ರೊ.ಅಕ್ಷತಾ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮವನ್ನು ಎಂಐಟಿ ಕುಂದಾಪುರದ ಬಿಎಸ್ಎಚ್ ವಿಭಾಗವು ಆಯೋಜಿಸಿತ್ತು.