ತಲ್ಲೂರು(ಆ.05): ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಡಾ. ಜಿ.ಶಂಕರ್ ರವರ 68 ನೇ ಹುಟ್ಟು ಹಬ್ಬವನ್ನು ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ತಲ್ಲೂರಿನ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು.
ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಜೊತೆಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಯಿತು. ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಅಧ್ಯಕ್ಷ ಲೋಹಿತ್ ಕುಂದರ್ ಬಾಳಿಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೊಗವೀರ ಮಹಾಜನ ಸಂಘ (ರಿ.), ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷರಾದ ಉದಯ ಕುಮಾರ ಹಟ್ಟಿಯಂಗಡಿ ಹಾಗೂ ಎಮ್ . ಎಮ್ . ಸುವರ್ಣ ಅತಿಥಿ ನೆಲೆಯ ಮಾತುಗಳನ್ನಾಡಿದರು. ಕಾರ್ಯದರ್ಶಿ ಪ್ರಭಾಕರ ಸೇನಾಪುರ, ಉಪಾಧ್ಯಕ್ಷ ರಾಜು ಶ್ರೀಯಾನ್ ಗುಜ್ಜಾಡಿ, ನಾರಾಯಣ ವಿಶೇಷ ಚೇತನ ಶಾಲೆಯ ಅಧ್ಯಕ್ಷರಾದ ಸುರೇಶ್ ತಲ್ಲೂರು , ಬಗ್ವಾಡಿ ಸ್ತ್ರೀ ಶಕ್ತಿಯ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲ ಚಂದನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೋಭಾ ಜಿ ಪುತ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಲ್ಲೂರಿನ ನಾರಾಯಣ ವಿಶೇಷ ಚೇತನ ಮಕ್ಕಳ ಶಾಲೆಯಲ್ಲ ಶಿಕ್ಷಕಿ ಸ್ವಾಗತಿಸಿಯರು ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಕಾರ್ಯದರ್ಶಿ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿ ನಿರೂಪಿಸಿದರು , ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಕೋಶಾಧಿಕಾರಿ ದಿನೇಶ್ ಕಾಂಚನ್ ಬಾಳಿಕೆರೆ ,ಘಟಕದ ಸದಸ್ಯರು ಮತ್ತು ಮೊಗವೀರ ಮಹಾಜನ ಸಂಘ (ರಿ.), ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.