ಬೆಂಗಳೂರು (ಅ,02): ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಿರಿಕಲಾಮೇಳದ 13ನೇ ವಾರ್ಷಿಕೋತ್ಸವ ಕಾರ್ಯಕ್ರಮ ಅಕ್ಟೋಬರ್ 01 ರಂದು ಜರುಗಿತು.
ಸಿರಿಕಲಾಮೇಳದ 13ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿ.ವಿ.ದತ್ತಾತ್ರೇಯ ಯವರಿಗೆ ಸಿರಿಕಲಾಪುರಸ್ಕಾರ,ಕೃಷ್ಣಮೂರ್ತಿ ಮಂಜರಿಗೆ ಮತ್ತು ನಾಗರಾಜ ನಾಯಕ ತೊರ್ಕೆಯವರಿಗೆ ಸಿರಿಕಲಾಪೋಷಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಧಾಕರ ಪೈ, ಆರ್.ವಿ.ಜಾಗೀರದಾರ್, ದಿನೇಶ ಜೋಶಿ, ಆರ್.ಶ್ರೀನಿವಾಸಾಚಾರ್, ಕರುಣಾಕರ ಹೆಗ್ಡೆ, ಸುಜಾತ, ಮಹಾಬಲೇಶ್ವರ, ಕೃಷ್ಣಮೂರ್ತಿ ನಾಯಕ್, ವಿ.ಎನ್.ಹೆಗಡೆ, ವಾಸುದೇವ ರಾವ್, ಸುರೇಶ ಹೆಗಡೆ, ಗೋ.ನಾ.ಸ್ವಾಮಿ, ಶ್ರೀದೇವಿ ಹೆಗಡೆ ಉಪಸ್ಥಿತರಿದ್ದರು.