ಕುಂದಾಪುರ (ನ,26): ಕಾಲೇಜಿನ ಎನ್ .ಎಸ್ . ಎಸ್ ಘಟಕ ಹಾಗೂ ರೋವರ್ಸ ಮತ್ತು ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ .ಕೆ. ಉಮೇಶ್ ಶೆಟ್ಟಿ,ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ ಉಪಸ್ಥಿತರಿದ್ದರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಗಂಗೊಳ್ಳಿ ಮಾತನಾಡಿ ದೇಶದ ಮೂಲಭೂತ ಕಾನೂನಾದ ಸಂವಿಧಾನವನ್ನು ಶಾಸನಬದ್ಧವಾಗಿ ಸಮರ್ಪಿಸಿಕೊಂಡ ನವಂಬರ್ 26ನೇ ದಿನವನ್ನು ದೇಶದಾದ್ಯಂತ ಸಂವಿಧಾನ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾಲೇಜಿನ ಎನ್ .ಎಸ್ . ಎಸ್ ಘಟಕಲೇಜಿನ ಎನ್ .ಎಸ್ . ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಯಾದ ದೀಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.