ಕುಂದಾಪುರ (ಡಿ,1): ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು, ಮೂಡ್ಲಕಟ್ಟೆ, ಕುಂದಾಪುರ ಇದರ ಕಾಮರ್ಸ್ ಅಸೋಸಿಯೇಷನ್ ವೇದಿಕೆಯ ಅಡಿಯಲ್ಲಿ ಸ್ಟೂಡೆಂಟ್ ರೆಕಾಗ್ನಿಷನ್ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಯಿತು.
ನವೆಂಬರ್ ತಿಂಗಳಲ್ಲಿ ನೆಡೆದ CSEET ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆಹೊಂದಿದ ಹನ ಶೇಕ್ ದ್ವಿತೀಯ ಬಿ ಕಾಂಮ್ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ ಶ್ಲಾಗಿಸಲಾಯಿತು .
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ರಾಮಕೃಷ್ಣ ಹೆಗಡೆ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರು, ಐಎಂಜೆ ಇನ್ಸ್ಟಿಟ್ಯೂಷನ್ಸ್, ಅವರು ವಿದ್ಯಾರ್ಥಿಗಳನ್ನು ಉದ್ದೇಶಿಷಿ ಮಾತನಾಡುತ್ತ ಪರೀಕ್ಷಾ ಸಮಯ ದಲ್ಲಿ ವಿದ್ಯಾರ್ಥಿಗಳ ತಯಾರಿ ಕುರಿತು, ಉಪಯುಕ್ತ ಮಾಹಿತಿಗಳನ್ನು ತಿಳಿಸಿದರು. ಕಾರ್ಯಕ್ರಮ ದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಯುತ ಜಯಶೀಲ್ ಅವರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.