ಕಾರ್ಕಳ ( ನ,20): ಇಂದಿನ ದಿನಗಳಲ್ಲಿ ಕಾಮರ್ಸ್ ವಿಭಾಗದಲ್ಲಿ C.A, C.S ಮತ್ತು CMA ಕೋರ್ಸ್ಗಳಿಗೆ ಮಹತ್ತರವಾದ ಬೇಡಿಕೆಯಿದೆ. ಅತೀ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಕೋರ್ಸ್ ಎಂದರೆ CMA (ವೆಚ್ಚ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರ) ಕೋರ್ಸ್. ಈ ಕೋರ್ಸ್ನ ಕಲಿಕಾ ಹಂತಗಳು ಹಾಗೂ ಕೋರ್ಸ್ ಮುಗಿಸಿದ ನಂತರ ಉದ್ಯೋಗಾವಕಾಶಗಳು ವಿಪುಲವಾಗಿ ಲಭ್ಯವಾಗಲಿದೆ ಎಂದು ಲೇಖ್ಪಾಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ರಾಜ್ ಗಣೇಶ್ ಕಾಮತ್ ಹೇಳಿದರು.
ಅವರು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಕಾಮರ್ಸ್ ಅಸೋಸಿಯೇಷನ್ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್ವಹಿಸಿದ್ದು, ಮಕ್ಕಳಿಗೆ ಸಂಸ್ಥೆ ಈ ಕೋರ್ಸ್ ಒದಗಿಸುತ್ತಿದ್ದು ಇದರ ಸದುಪಯೋಗ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಘವೇಂದ್ರ ರಾವ್,ಉಮೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿಂದ್ಯಾ ಹೆಗಡೆ ಪ್ರಾರ್ಥಿಸಿ, ಅನಘಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.