ಕುಂದಾಪುರ (ನ.16) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ಸಂಘದ ವತಿಯಿಂದ ‘ಅನ್ಬಾಕ್ಸಿಂಗ್ ಸಿ ಇ ಒ ಕಾರ್ಯಕ್ರಮ ನಡೆಯಿತು .
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳು ಅಥವಾ ಉದ್ಯಮಿಗಳು ಆಗುವ ಕನಸನ್ನು ಕಾಣಬೇಕು.ಕನಸು ಕಂಡಾಗ ಮಾತ್ರ ಏನಾದರೂ ಸಾಧನೆ ಕಡೆಗೆ ಗಮನ ಹರಿಸಬಹುದು ಎಂದು ಹೇಳಿದರು.
ಉಪಪ್ರಾಂಶುಪಾಲ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ಭಟ್, ಕಾರ್ಯಕ್ರಮದ ಸಂಯೋಜಕರಾದ ಶ್ರೀ ರಾಜೇಶ್ ಶೆಟ್ಟಿ ವಕ್ವಾಡಿ, ಶ್ರೀ ಅಕ್ಷಯ್ ದೇವಾಡಿಗ, ವಿದ್ಯಾರ್ಥಿ ಪ್ರತಿನಿಧಿಗಳಾದ ದ್ವಿತೀಯ ಬಿ.ಬಿ.ಎ. ಪಂಚಮಿ, ದ್ವಿತೀಯ ಬಿ.ಕಾಂ. ನಿತೇಶ್ ಉಪಸ್ಥಿತರಿದ್ದರು.
ದ್ವಿತೀಯ ಬಿ.ಬಿ.ಎ. ವಿದ್ಯಾರ್ಥಿಗಳಾದ ಐಶ್ವರ್ಯ ಪ್ರಾರ್ಥಿಸಿ, ಪಂಚಮಿ ಸ್ವಾಗತಿಸಿ, ಪಂಚಮಿ ವಂದಿಸಿ, ಅನಿಶಾ ಕಾರ್ಯಕ್ರಮವನ್ನು ನಿರೂಪಿಸಿದರು.