ಕುಂದಾಪುರ.(ಡಿ, 7): ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ ಪ್ರಯುಕ್ತ ಡಿಸೆಂಬರ್ 30ರಂದು ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿರುವ ಬಂಟರ ಯಕ್ಷ ಸಂಭ್ರಮ ಕಾರ್ಯಕ್ರಮದ ಸಂಚಾಲಕರಾಗಿ ಕುಂದಾಪುರದ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಸುಕುಮಾರ್ ಶೆಟ್ಟಿ ಕಮಲಶಿಲೆ ಆಯ್ಕೆಯಾಗಿರುತ್ತಾರೆ.
ತಮ್ಮ ವಿದ್ಯಾರ್ಥಿ ಜೀವನದ ಬದುಕಿನಲ್ಲಿ ಅಪಾರವಾದ ಯಕ್ಷಗಾನ ಆಸಕ್ತಿ ಹೊಂದಿದ ಇವರು ಶಾಲಾ ಕಾಲೇಜುಗಳಲ್ಲಿ, ಅನೇಕ ಸಂಘ ಸಂಸ್ಥೆಗಳಲ್ಲಿ, ಯಕ್ಷಗಾನ ವೇಷ ಹಾಗೂ ಹವ್ಯಾಸಿ ಭಾಗವತರಾಗಿ ಕಾರ್ಯನಿರ್ವಹಿಸಿರುವುದ ಲ್ಲದೆ ಕಾಲೇಜಿನ ಯಕ್ಷಗಾನ ಸಂಘದ ಜೊತೆ ಸಂಯೋಜನಾಧಿಕಾರಿಯಾಗಿ, ಕನ್ನಡ ಸಾಹಿತ್ಯ ಸಂಘದ ಸಂಯೋಜನಾಧಿಕಾರಿಯಾಗಿ, ಕುಂದಗನ್ನಡ ಸಂಘದ ಸಂಯೋಜನಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿರುವುದಲ್ಲದೆ, ಯುವ ಬಂಟರ ಸಂಘದ ಜೊತೆ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಿಸೆಂಬರ್ 30 ರ ಕಾರ್ಯಕ್ರಮದಲ್ಲಿ ಬಂಟ ಸಮಾಜದ 63 ಮಂದಿ ಕಲಾವಿದರಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ 10 ಮಂದಿ ಹಿರಿಯ ಕಲಾವಿದರಿಗೆ ಬಂಟ ಯಕ್ಷ ಭೂಷಣ ಪ್ರಶಸ್ತಿ ಹಾಗೂ ಆಯ್ದ ಬಂಟ ಕಲಾವಿದರಿಂದ ಮಾಯಾಪುರಿ, ವೀರಮಣಿ, ಅಭಿಮನ್ಯು ಕಾಳಗ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷರಾದ ಬಿ ಉದಯ್ ಕುಮಾರ್ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.